ಹಾಲು ಮಾರಿ ವಾಪಸ್ ಮನೆಗೆ ಬಂದಾಗ, ಮಾಲೀಕನಿಗೆ ಕಾದಿತ್ತು ಶಾಕ್ !

A case of theft of gold kept in a house at Kotegangur in Bhadravathi taluk has been registered. ಭದ್ರಾವತಿ ತಾಲ್ಲೂಕು ಕೋಟೆಗಂಗೂರಿನಲ್ಲಿ ಮನೆಯಲ್ಲಿಟ್ಟಿದ್ದ ಚಿನ್ನ ಕಳವಾದ ಪ್ರಕರಣ ದಾಖಲಾಗಿದೆ.

ಹಾಲು ಮಾರಿ ವಾಪಸ್ ಮನೆಗೆ ಬಂದಾಗ, ಮಾಲೀಕನಿಗೆ ಕಾದಿತ್ತು ಶಾಕ್ !

KARNATAKA NEWS/ ONLINE / Malenadu today/ Aug 19, 2023 SHIVAMOGGA NEWS   

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೋಟೆ ಗಂಗೂರಿನಲ್ಲಿ ಮನೆಗೆ ನುಗ್ಗಿ ಮನೆಯಲ್ಲಿದ್ದ 1.30 ಲಕ್ಷ ಮೌಲ್ಯದ ಬಂಗಾರ ಕಳ್ಳತನ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ. 

ಏನಿದು ಪ್ರಕರಣ?

ಇಲ್ಲಿನ ನಿವಾಸಿ ಶೀಲಾ ಎಂಬವರು ಕಳೆದ 16 ನೇ ತಾರೀಖು ತಮ್ಮ ಪತಿಯವರ ಜೊತೆಗೆ ಹಾಲು ಮಾರಾಟಕ್ಕೆಂದು  ಮನೆಗೆ ಬೀಗ ಹಾಕಿ ಹೋಗಿದ್ದರು. ರಾತ್ರಿ ವಾಪಸ್​  ಮನೆಗೆ ಬಂದು ಮನೆಯ ಬೀಗ ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. 

ಕಳ್ಳರು ಬೀರುವಿನ ಬಾಗಿಲು ಮುರಿದು ಲಾಕರ್ ನಲ್ಲಿಟ್ಟಿದ್ದ ಸುಮಾರು 29.5 ಗ್ರಾಂ ತೂಕದ  ಒಟ್ಟು ಸುಮಾರು 1.30 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಕಳವು  ಮಾಡಿದ್ದಾರೆ. ಈ  ಘಟನೆ ಸಂಬಂದ  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಸಿ ಅಡಿಕೆನೇ ಕದಿತಾರೆ ಹುಷಾರ್! ಊರಿನವರ ಕೈಗೆ ಸಿಕ್ಕಿಬಿದ್ದ ಕಳ್ಳರು!

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ಅಡಿಕೆ ಕದ್ದವರನ್ನ ಗ್ರಾಮಸ್ಥರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಡಕೆ ತೋಟದಲ್ಲಿ ಹಸಿ ಅಡಕೆ ಕದ್ದೊಯ್ಯುತ್ತಿದ್ದವರನ್ನು ಗ್ರಾಮಸ್ಥರು ಹಿಡಿದು  ಒಪ್ಪಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರಿನ ಹೊಸ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ.

ಹೊಳೆಹೊನ್ನೂರು ಸಮೀಪದ ಕೊಪ್ಪ ಗ್ರಾಮದ ನಿವಾಸಿಗಳಾದ ಅಣ್ಣಪ್ಪ ಹಾಗೂ ಮಂಜು ಎಂಬುವರು ಬಂಧಿತ ಆರೋಪಿಗಳು. ಇನ್ನೊಬ್ಬ ಬಾಬು ಎಂಬಾತ ತಪ್ಪಿಸಿಕೊಂಡಿದ್ದಾನೆ.  ಗ್ರಾಮದ ನಿವಾಸಿ ನಂಜಪ್ಪ ಎಂಬುವರ ತೋಟಕ್ಕೆ ನುಗ್ಗಿದ್ದ ಮೂವರು,  ತೋಟದಲ್ಲಿನ ಹಸಿ ಅಡಕೆಯನ್ನು ಕಿತ್ತು ಓಡಲು ಯತ್ನಿಸಿದ್ದರು. ಈ ವೇಳೆ ಅವರ ಮೇಲೆ ಅನುಮಾನಗೊಂಡ ಗ್ರಾಮಸ್ಥರು ಬೆನ್ನ ಹತ್ತಿದ್ದಾರೆ. ಗ್ರಾಮಸ್ಥರು ಹಿಂಬಾಲಿಸುತ್ತಿರುವುದನ್ನ ಗಮನಿಸಿದ ಆರೋಪಿಗಳು ಎಸ್ಕೇಪ್ ಆಗಲು ಮುಂದಾಗಿದ್ದಾರೆ. ಅಷ್ಟರಲ್ಲಿ ಇಬ್ಬರು ಊರಿನವರ ಕೈಗೆ ಸಿಕ್ಕಿಬಿದ್ದಿದ್ದಾರೆ. 

 ಹಸಿ ಅಡಕೆ ಕದ್ದು, ಮಾರುವ ಇಂತಹವರಿಂದ  ಕಡಿಮೆ ಬೆಲೆಗೆ ಖರೀದಿಸಿ  ಸುಲಿದು, ಬೇಯಿಸಿ, ಒಣ ಅಡಕೆ ಮಾರಾಟ ಮಾಡಿ ಹಣ ಮಾಡಿಕೊಳ್ಳುವ ವ್ಯಕ್ತಿಗಳು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಘಟನೆ ನಡೆದಿದೆ.  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು