ಶತ್ರುವಿನ ಮದುವೆ ಫೋಟೋ ಸ್ಟೇಟಸ್​ನಲ್ಲಿ ಹಾಕಿದ್ದಕ್ಕೆ ಸ್ನೇಹಿತನ ಮೇಲೆ ಹಲ್ಲೆ

Friend assaulted for posting enemy's wedding photo status

ಶತ್ರುವಿನ ಮದುವೆ ಫೋಟೋ ಸ್ಟೇಟಸ್​ನಲ್ಲಿ ಹಾಕಿದ್ದಕ್ಕೆ  ಸ್ನೇಹಿತನ ಮೇಲೆ ಹಲ್ಲೆ

KARNATAKA NEWS/ ONLINE / Malenadu today/ May 4, 2023 GOOGLE NEWS

ಭದ್ರಾವತಿ/ಶಿವಮೊಗ್ಗ/ ಶತ್ರುವಿನ ಮದುವೆ ಫೋಟೋ ಸ್ಟೇಟಸ್​ನಲ್ಲಿ ಹಾಕ್ತೀಯಾ ಅಂತಾ ಸ್ನೇಹಿತನ ಮೆಲೆ ಹಲ್ಲೆ ಮಾಡಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಕೆಲದಿನಗಳ ಹಿಂದೆ ನಡೆದ ಘಟನೆ ಸಂಬಂಧ ಭದ್ರಾವತಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. 

ಇಲ್ಲಿನ ನಿವಾಸಿಯೊಬ್ಬರು ಪೇಪರ್​ ಟೌನ್​ನಿಂದ ತಮ್ಮಗೆ  ಮನೆಗೆ ಹೋಗುತ್ತಿದ್ದಾಗ, ಸ್ನೇಹಿತನೊಬ್ಬ ಎದುರಾಗಿದ್ದಾನೆ. ಆತ ಇವರನ್ನ ನೋಡುತ್ತಲ್ಲೇ ಬೈಕ್​ ಅಡ್ಡ ಗಟ್ಟಿ ನನ್ನ ಶತ್ರುವಿನ ಮದುವೆ ಫೋಟೋ ಸ್ಟೇಟಸ್​ನಲ್ಲಿ ಹಾಕ್ಕೊಂಡಿದ್ದೀಯಾ ಎಂದು ಹಲ್ಲೆ ಮಾಡಿದ್ದಾನೆ. ಅಲ್ಲದೆ ಇದೇ ವಿಚಾರವಾಗಿ ಜೀವ ಬೆದರಿಕೆಯನ್ನ ಸಹ ಹಾಕಿದ್ದಾರೆ ಎನ್ನಲಾಗಿದೆ. 

ಈ ಸಂಬಂಧ ಸಂತ್ರಸ್ತರು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.  




ಕೈಗೆ ಸಿಕ್ಕ 30 ಸಾವಿರ ರೂಪಾಯಿ ಮೌಲ್ಯದ ಮೊಬೈಲ್​ ನ್ನ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್ ರವಿ! 

ಶಿವಮೊಗ್ಗ/ ಇತ್ತಿಚೆಗೆ ಶಿವಮೊಗ್ಗ ಪೊಲೀಸ್ ಇಲಾಖೆ ನಗದು ಹಾಗೂ ಬೆಲೆಬಾಳುವ ವಸ್ತು ಇದ್ದ ಬ್ಯಾಗ್​ನ್ನ ಅದರ ಮಾಲೀಕರಿಗೆ ಹಿಂದುರಿಗಿಸಿದ್ದ ಆಟೋಚಾಲಕನನ್ನ ಸನ್ಮಾನಿಸಿತ್ತು. ಈ ಘಟನೆ ಬೆನ್ನಲ್ಲೆ ಮತ್ತೊಬ್ಬ ಆಟೋಚಾಲಕ ರವಿ ಎಂಬಾತ ತನಗೆ ಸಿಕ್ಕ ಮೊಬೈಲ್​ ಫೋನ್​ನ್ನ ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. 

ಸಾಮಾನ್ಯವಾಗಿ ಮೊಬೈಲ್ ಕಳುವಾದರೆ ಮತ್ತೆ ಸಿಗೋದು ಡೌಟೇ. ಅಂತದ್ರಲ್ಲಿ ಮರೆವಿನಲ್ಲಿ ಬಿಟ್ಟುಹೋದ ಮೊಬೈಲ್​ನ್ನ ರವಿ, ಪೊಲೀಸ್ ಸ್ಟೇಷನ್​ಗೆ ಹೋಗಿ ನೀಡಿದ್ಧಾರೆ. 

ಕಳೆದ ಮೇ  2 ರಂದು ರಾತ್ರಿ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆಯ ಧ್ವಜದ ಕಟ್ಟೆಯ ಬಳಿ ರವಿಗೆ  ಮೊಬೈಲ್​ವೊಂದನ್ನ ಯಾರೋ ಬಿಟ್ಟುಹೋಗಿರುವುದು ಕಾಣಿಸಿದೆ. ತಕ್ಷಣ ಅದನ್ನ ಹೋಗಿ ತೆಗೆದಿಟ್ಟುಕೊಂಡಿದ್ಧಾರೆ. ಬಳಿಕ ಅದನ್ನ ತೆಗೆದುಕೊಂಡು ಹೋಗಿ ವಿನೋಬನಗರ ಪೊಲೀಸ್ ಸ್ಟೆಷನ್ ಪೊಲೀಸರಿಗೆ ಕೊಟ್ಟಿದ್ದಾರೆ. 

ಸುಮಾರು 30 ಸಾವಿರ ಮೌಲ್ಯದ ಮೊಬೈಲ್​   ಸೋಮಿನಕೊಪ್ಪದ ನಿವಾಸಿ ಇಂಜಿನಿಯರ್​ ಒಬ್ಬರಿಗೆ ಸೇರಿದ್ದು ಎನ್ನಲಾಗಿದ್ದು, ರವಿಯ ಪ್ರಾಮಾಣಿಕತೆಗೆ ಪೊಲೀಸ್ ಸಿಬ್ಬಂದಿ ಶ್ಲಾಘಿಸಿದ್ದಾರೆ. 




 ಶಿವಮೊಗ್ಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಸಂಬಂಧ ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಹಾಗೂ ಕುಂಸಿ ಪೊಲೀಸ್ ಸ್ಟೇಷನ್​  ನಲ್ಲಿ ಎಫ್​ಐಆರ್​ ದಾಖಲಾಗಿದೆ. 

ಪ್ರಕರಣ ಒಂದು 

ವಿಧಾನಸಭಾ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯವರು ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆ  ಪ್ಲೈಯಿಂಗ್​ ಸ್ಕ್ವ್ಯಾಡ್​ ತಂಡದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986 ಅಡಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ಎರಡು

ಇದೇ ರೀತಿ ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಕ್ಕಳೊಂದಿಗೆ ಚುನಾವಣಾ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ಲೈಯಿಂಗ್​ ಸ್ಕ್ವ್ಯಾಡ್​  ತಂಡದವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಕಲಂ 14 ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಶಿವಮೊಗ್ಗಕ್ಕೆ ಮತ್ತೆ ಬರಲಿದೆ ಮೋದಿ ಫ್ಲೈಟ್​  ಪ್ರಧಾನಿ ಕಾರ್ಯಕ್ರಮದ  ವಿವರ 

ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರ ಅಂತಿಮ ಘಟ್ಟಕ್ಕೆ ಬರುತ್ತಿದೆ. ಮತದಾರರ ಮನೆ ಮನ ತಲುಪುವುದಕ್ಕೂ ಅಭ್ಯರ್ಥಿಗಳು ಬಿಡುವಿಲ್ಲದ ಓಡಾಟದಲ್ಲಿ ತೊಡಗಿದ್ದಾರೆ. ಇದರ ನಡುವೆ ಕೊನೆಕ್ಷಣದಲ್ಲಿ ಕಮಾಲ್ ಮಾಡಲು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಇದೇ ಮೇ ಏಳರಂದು ಪ್ರಧಾನಿ ನರೇಂದ್ರ ಮೋದಿ ಯವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಪಟ್ಟಿ ಇಲ್ಲಿದೆ 

ರಾಜಧಾನಿ ಬೆಂಗಳೂರುನಲ್ಲಿ ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ ನಂತರ ಆರನೇ ತಾರೀಖು ರಾತ್ರಿ, ಅಲ್ಲಿಯ ರಾಜಭವನದಲ್ಲಿ ಉಳಿದುಕೊಳ್ಳಲಿದ್ದಾರೆ. ಬಳಿಕ ಮರುದಿನ ಅಂದರೆ ಏಳನೇ ತಾರೀಖು ಭಾನುವಾರ ಬೆಂಗಳೂರು ಹೆಚ್​ಎ ಎಲ್​ ಏರ್​ಪೋರ್ಟ್​ ನಿಂದ ಹುಬ್ಬಳ್ಳಿಗೆ ಬೆಳಗ್ಗೆ ಒಂಬತ್ತು ಗಂಟೆಗೆ ಹೊರಡಲಿದ್ದಾರೆ. 

 10:10ಕ್ಕೆ ಹುಬ್ಬಳ್ಳಿಗೆ ಬಂದು ಅಲ್ಲಿಂದ ಬಾದಾಮಿಗೆ ತೆರಳಲಿದ್ಧಾರೆ. ನಂತರ ಮಧ್ಯಾಹ್ನ 12 ಗಂಟೆವರೆಗೂ ಬಾದಾಮಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮೋದಿ ಅಲ್ಲಿಂದ ಹಾವೇರಿಗೆ ತೆರಳಲಿದ್ದಾರೆ. ಅಲ್ಲಿ, 2 ಗಂಟೆಯುವರೆಗೂ ಇದ್ದು ಶಿವಮೊಗ್ಗಕ್ಕೆ ಬರಲಿದ್ಧಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಆಯನೂರಿನಲ್ಲಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ಧಾರೆ. 

ಸಮಾವೇಶ ಮುಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಸಂಜೆ 4.25 ಕ್ಕೆ ಶಿವಮೊಗ್ಗ ಏರ್​​ಪೋರ್ಟ್​  ತಲುಪಲಿದ್ಧಾರೆ. ಅಲ್ಲಿಂದ  ಮೈಸೂರಿಗೆ ತೆರಳಿ, ನಂಜನಗೂಡಿಗೆ ಪ್ರಯಾಣ ಬೆಳಸಲಿದ್ದಾರೆ. ನಂತರ ರಾತ್ರಿ ದೆಹಲಿಗೆ ವಾಪಸ್ ಆಗಲಿದ್ದಾರೆ.  

Malenadutoday.com Social media