KARNATAKA NEWS/ ONLINE / Malenadu today/ Aug 19, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ಅಡಿಕೆ ಕದ್ದವರನ್ನ ಗ್ರಾಮಸ್ಥರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಡಕೆ ತೋಟದಲ್ಲಿ ಹಸಿ ಅಡಕೆ ಕದ್ದೊಯ್ಯುತ್ತಿದ್ದವರನ್ನು ಗ್ರಾಮಸ್ಥರು ಹಿಡಿದು ಒಪ್ಪಿಸಿರುವ ಘಟನೆ ತಾಲೂಕಿನ ಹೊಳೆಹೊನ್ನೂರಿನ ಹೊಸ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ.
ಹೊಳೆಹೊನ್ನೂರು ಸಮೀಪದ ಕೊಪ್ಪ ಗ್ರಾಮದ ನಿವಾಸಿಗಳಾದ ಅಣ್ಣಪ್ಪ ಹಾಗೂ ಮಂಜು ಎಂಬುವರು ಬಂಧಿತ ಆರೋಪಿಗಳು. ಇನ್ನೊಬ್ಬ ಬಾಬು ಎಂಬಾತ ತಪ್ಪಿಸಿಕೊಂಡಿದ್ದಾನೆ. ಗ್ರಾಮದ ನಿವಾಸಿ ನಂಜಪ್ಪ ಎಂಬುವರ ತೋಟಕ್ಕೆ ನುಗ್ಗಿದ್ದ ಮೂವರು, ತೋಟದಲ್ಲಿನ ಹಸಿ ಅಡಕೆಯನ್ನು ಕಿತ್ತು ಓಡಲು ಯತ್ನಿಸಿದ್ದರು. ಈ ವೇಳೆ ಅವರ ಮೇಲೆ ಅನುಮಾನಗೊಂಡ ಗ್ರಾಮಸ್ಥರು ಬೆನ್ನ ಹತ್ತಿದ್ದಾರೆ. ಗ್ರಾಮಸ್ಥರು ಹಿಂಬಾಲಿಸುತ್ತಿರುವುದನ್ನ ಗಮನಿಸಿದ ಆರೋಪಿಗಳು ಎಸ್ಕೇಪ್ ಆಗಲು ಮುಂದಾಗಿದ್ದಾರೆ. ಅಷ್ಟರಲ್ಲಿ ಇಬ್ಬರು ಊರಿನವರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹಸಿ ಅಡಕೆ ಕದ್ದು, ಮಾರುವ ಇಂತಹವರಿಂದ ಕಡಿಮೆ ಬೆಲೆಗೆ ಖರೀದಿಸಿ ಸುಲಿದು, ಬೇಯಿಸಿ, ಒಣ ಅಡಕೆ ಮಾರಾಟ ಮಾಡಿ ಹಣ ಮಾಡಿಕೊಳ್ಳುವ ವ್ಯಕ್ತಿಗಳು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಘಟನೆ ನಡೆದಿದೆ.
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಭದ್ರಾವತಿ ಪೊಲೀಸರ ದಿಢೀರ್ ನೈಟ್ ಆಪರೇಷನ್! ಕೆಲವೇ ಗಂಟೆಗಳಲ್ಲಿ 105 ಮಂದಿ ವಿರುದ್ಧ ಕೇಸ್
ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಇಂದು ಪವರ್ ಕಟ್ ಜಾರಿ! ಎಲ್ಲೆಲ್ಲಿ? ಪೂರ್ತಿ ವಿವರ ಇಲ್ಲಿದೆ!
