ರಾಜ್ಯದ ನಂಬರ್ ಕಳ್ಳರ ಸಾಮ್ರಾಜ್ಯ ಇಲ್ಲಿದೆ ! ಈ ಪ್ರದೇಶದಲ್ಲಿದ್ದಾರೆ ಒಂದು ಸಾವಿರಕ್ಕೂ ಅಧಿಕ ಕಳ್ಳರು ! ಹೇಗಿದೆ ಗೊತ್ತಾ ಭದ್ರಾವತಿ ಕ್ರೈಂ ಲೋಕ ?

A report from the Bhadravathi Crime World

ರಾಜ್ಯದ ನಂಬರ್ ಕಳ್ಳರ ಸಾಮ್ರಾಜ್ಯ ಇಲ್ಲಿದೆ ! ಈ ಪ್ರದೇಶದಲ್ಲಿದ್ದಾರೆ ಒಂದು ಸಾವಿರಕ್ಕೂ ಅಧಿಕ ಕಳ್ಳರು ! ಹೇಗಿದೆ ಗೊತ್ತಾ ಭದ್ರಾವತಿ ಕ್ರೈಂ ಲೋಕ ?
A report from the Bhadravathi Crime World

malenadutoday 06-11-2021

ಕೇವಲ ಒಂದೇ ಠಾಣೆಯಲ್ಲಿದೆ, 500 ಕ್ಕೂ ಹೆಚ್ಚು ಕಳ್ಳರ ಪೋಟೊ
ಇತ್ತಿಚ್ಚಿನ ದಿನಗಳಲ್ಲಿ ಭದ್ರಾವತಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಗಾಂಜಾ ಓಸಿ ಇಸ್ಪೀಟು, ಕಳ್ಳತನದಂತ ಪ್ರಕರಣಗಳಿಗೆ ತಾಲೂಕು ಜುಗಾರಿ ಕ್ರಾಸ್ ಆಗಿ ಮಾರ್ಪಟ್ಟಿದೆ. ಅದರಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭದ್ರಾವತಿ ಕಳ್ಳರು ಒಂದು ಹೆಜ್ಜೆ ಮುಂದೆ. ರಾಜ್ಯದಲ್ಲಿ ಎಲ್ಲೇ ಕಳ್ಳತನ ಪ್ರಕರಣಗಳು ದಾಖಲಾದ್ರೂ,ಅದರ ಕಮಟು ವಾಸನೆ ಭದ್ರಾವತಿ ನಗರವನ್ನು ತಟ್ಟಿರುತ್ತೆ.ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಎಲ್ಲೇ ಕಳ್ಳತನ ನಡೆದ್ರೂ,ಪೊಲೀಸರ ಒಂದು ಟಾರ್ಗೆಟ್ ಆ ಏರಿಯದ ಮೇಲೆ ಬಿದ್ದಿರುತ್ತೆ.ಅದೊಂತರ ಕಳ್ಳರ ಮಾಯಾಲೋಕ. ಜೆ.ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಸಮಾವೇಶವೊಂದರಲ್ಲಿ ಅವರ ಪೆನ್ ಕದ್ದ ಕಳ್ಳರು ಇಲ್ಲಿದ್ದಾರೆ.ಇಂತಹ ನಟೋರಿಯಸ್ ಕಳ್ಳರಿಗೆ ನೆಲಕಲ್ಪಿಸಿರೋ ಆ ಜುಗಾರಿ ಕ್ರಾಸ್ ಬೇರಾವುದು ಅಲ್ಲ.ಭದ್ರಾವತಿ ನಗರದ ಹೊಸಮನೆ ಬಡಾವಣೆ,ಭೋವಿ ಕಾಲೋನಿ,ಹನುಮಂತ ನಗರ ಹಾಗು ವಿಜಯನಗರ.

ಈ ಏರಿಯಾಗಳಿಗೆ ಹೊಕ್ಕುಬಿಟ್ರೆ ಬಹಳಷ್ಟು ಮಂದಿ ಎಂ,ಓ.ಬಿ ಶೀಟರ್ ಗಳು ಸಿಕ್ಕಿಬಿಡ್ತಾರೆ.ನೋಡಲು ಅಫೀಶಿಯಲ್,.ಬಂಗಲೆಯಂತ ಮನೆಗಳು…,ಯಾರಾದ್ರೂ ಇವನು ಕಳ್ಳ ಅವಳು ಕಳ್ಳಿ ಅಂದ್ರೆ ಕಥೆ ಮುಗಿದೇ ಹೊಯ್ತು..,ವೈಟ್ ಕಾಲರ್ಡ್ ಗಳಾಗಿರುವ ಇಲ್ಲಿನ ಕಳ್ಳರ ಹಿಸ್ಟರಿ ಪೊಲೀಸ್ರಿಗಷ್ಟೆ ಗೊತ್ತು.ಇಲ್ಲಿನ ವಾತಾವರಣವೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ.ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯೊಂದರಲ್ಲಿಯೇ 500 ಕ್ಕೂ ಹೆಚ್ಚು ಎಂ.ಓ.ಬಿ ಷೀಟರ್ ಗ ಳು ಸಿಕ್ತಾರೆ ಅಂದ್ರೆ ನೀವೇ ಊಹಿಸಿ. ಒಂದು ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಸಿಗಬಹುದಾದ ಕಳ್ಳರ ಒಟ್ಟು ಸಂಖ್ಯೆ ಕೇವಲ ಒಂದೇ ಪೊಲೀಸ್ ಠಾಣೆಯಲ್ಲಿ ಸಿಕ್ತದೆ ಅಂದ್ರೆ..,ಆ ಠಾಣಾ ವ್ಯಾಪ್ತಿಯಲ್ಲಿ ಅದೆಷ್ಟು ವೃತ್ತಿಪರ ಕಳ್ಳರಿರಬೇಕು ನೀವೇ ಯೋಚಿಸಿ. ಇನ್ನು ಭದ್ರಾವತಿ ಸಬ್ ಡಿವಿಜನ್ ನ ಎಂ.ಓ.ಬಿ ಶೀಟರ್ ಗಳ ಲೆಕ್ಕ ಹಾಕಿದ್ರೆ ಅದು ರಾಜಧಾನಿ ಬೆಂಗಳೂರಿನ ಟಾರ್ಗೇಟ್ ರೀಚ್ ಮಾಡುತ್ತೇನೋ ಗೊತ್ತಿಲ್ಲ.

ರಾಬರಿ,ಹೌಸ್ ಥೆಪ್ಟ್,ಪಿಕ್ ಪಾಕೆಂಟಿಂಗ್,ಮೊಬೈಲ್ ಅಫೆಂಡರ್ಸ್,ಸೂಟ್ ಕೇಸ್ ಲಿಪ್ಟಿಂಗ್,ಅಟೆನ್ಷನ್ ಡೈವರ್ಷನ್ ,ಚೈನ್ ನ್ನಾಚಿಂಗ್ ಮಾಡೋದ್ರಲ್ಲಿ ಇಲ್ಲಿನ ಕಳ್ಳರು ಪಂಟರ್ ಗಳು. 2015 ರಲ್ಲಿ ನೆಲಮಂಗಲದಲ್ಲಿ ಎಸ್ಸೈ ಜಗದೀಶ್ ರನ್ನು ಕೊಲೆ ಮಾಡಿದ ಪಾತಕಿ ಮಧು ಕೂಡ ಇದೇ ಹೊಸಮನೆ ಬಡಾವಣೆಯವನು.ಹೀಗಾಗಿ ಭದ್ರಾವತಿ ನಗರದ ಕೆಲವು ಏರಿಯಾಗಳ ಕ್ರೈಂ ನ್ನು ಬಯಲುಗೊಳಿಸದಿದ್ರೆ..,ಇನ್ನಷ್ಟು ಮಧು ಅಂತಾ ಕಳ್ಳರು ಪಾತಕಿಗಳಾಗ್ತಾರೆ.

ಕಳ್ಳರಿಗೆ ಪೊಲೀಸರು ಅಪರಿಚಿತ,.ಪೊಲೀಸರಿಗೆ ಕಳ್ಳರು ಪರಿಚಿತ

ರಾಜ್ಯದ ಯಾವುದೇ ಮೂಲೆಯಲ್ಲಿ ಮನೆಗಳ್ಳತನ,ಸರಗಳ್ಳತನ,ಮೊಬೈಲ್ ಕಳ್ಳತನ ಪಿಕ್ ಪಾಕೇಟ್ ಗಳಾದ್ರೆ ಪೊಲೀಸ್ರು ನೇರವಾಗಿ ಹೊಸಮನೆಗೆ ಜೀಪುತಂದು ನಿಲ್ಲಿಸಿ ಬಿಡ್ತಾರೆ.,ಲೋ ಜಗ್ಗಾ ಮೊನ್ನೆ ದೆಹಲಿಯಿಂದ ತಂದ ಒಂದು ಕೇಜಿ ಚಿನ್ನವನ್ನು ಕೊಟ್ಟುಬಿಡೋ ಅಂತಾರೆ ಅಷ್ಟೆ..ಸಾರ್ ಅಷ್ಟೂ ಮಾಲು ಇಲ್ಲ,ಅಂತಾ ಕಳ್ಳಾ ಕೂಡ ನೇರವಾಗಿಯೇ ಹೇಳ್ತಾನೆ..,ಸರಿ ಸರಿ ಅದೆಷ್ಟಿದೆಯೋ ಅಷ್ಟು ಮಾಲು ಕೊಡು..,ನಾವು ರಿಕವರಿ ತೋರಿಸ್ಬೇಕು ಅಂತಾ..,ಸಲೀಸಾಗಿ ಕಳ್ಳನ ಮನೆಯಿಂದ ಮಾಲನ್ನು ಪೊಲೀಸ್ರು ತಗೊಂಡು ಹೋಗ್ತಾರೆ..,ಇದೊಂದು ಎಕ್ಸಾಂಪಲ್ ಅಷ್ಟೆ..,ಕಳ್ಳ ಮತ್ತು ಪೊಲೀಸರ ನಡುವೆ ವ್ಯವಸ್ಥೆ ಹೇಗಿದೆ ಅಂದ್ರೆ..,ಇಲ್ಲಿ ಯಾವುದೇ ಕಳ್ಳತನ ಪ್ರಕರಣಗಳು ನಡೆದಾಗ ರಿಕವರಿ ತೋರಿಸ್ಬೇಕು ಅಂತಾ ಹಿರಿಯ ಅಧಿಕಾರಿಗಳು ಹೇಳಿದ್ರೆ..,ಪೊಲೀಸ್ರ ಭಾರ ಇಳಿಸೋ ಕೆಲಸವನ್ನು ಕಳ್ಳರು ಮಾಡ್ತಾರೆ ಅಂದ್ರೆ ನಾವು ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಅನ್ನೋದು ಅರ್ಥವಾಗುತ್ತೆ. ಹೊಸಮನೆ,ಭೋವಿ ಕಾಲೋನಿ ,ಹನುಮಂತನಗರ ವಿಜಯನಗರ ಏರಿಯಾಗಳಲ್ಲಿ ಇರುವವರಲ್ಲಿ ಎಲ್ಲರೂ ಕಳ್ಳರು ಅಂತಾ ನಾವು ಹೇಳ್ತಿಲ್ಲ. ಆದರೆ ಕಳ್ಳರಾಗಿ ಗುರುತಿಸಿಕೊಂಡವರೆಲ್ಲಾ ಇದೇ ಏರಿಯಾದವರು ಎಂಬುದನ್ನಷ್ಟೆ ನಾವು ಹೇಳ್ತಿದರೋದು. ಇದಕ್ಕೆ ಕಾರಣ ಕೂಡ ಇದೆ.ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅಸಮತೋಲನಗಳು ಆದ್ರೆ ವಾತಾವರಣ ಪರಿಸರವನ್ನು ಹೇಗೆ ಕಲುಷಿತ ಮಾಡುತ್ತೇ ಅನ್ನೋದಕ್ಕೆ ಈ ಏರಿಯಾಗಳೇ ಸಾಕ್ಷಿಯಾಗಿದೆ.

ಬೆಂಕಿ ನಗರಿ, ನಮ್ಮ ದೇಶದ ಹಿರಿಮೆ ಕಳ್ಳರ ನೆಲೆಬೀಡು ಎಂಬುದು ಕೀಳಿರಿಮೆ

ದೇಶದ ಪ್ರತಿಷ್ಠಿತ ಹೆಮ್ಮೆಯ ಎರಡು ಕಾರ್ಖಾನೆಗಳಿಗೆ ಜೀವಕೊಟ್ಟ ನಗರಿ ಭದ್ರಾವತಿ.ಸರ್ ಎಂ,ವಿ ವಿಶ್ವೇಶ್ವರಯ್ಯ ಸ್ಥಾಪಿಸಿದ ವಿ.ಐ.ಎಸ್.ಎಲ್ ( ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ)ಕಾರ್ಖಾನೆ ಇರುವುದು ಭದ್ರಾವತಿ ನಗರದಲ್ಲಿ. ಅತ್ಯುತ್ತಮ ಪೇಪರ್ ನ್ನು ಉತ್ಪಾಧಿಸುವ ಎಂ.ಪಿ.ಎಂ ಅಂದ್ರೆ ಮೈಸೂರ್ ಪೇಪರ್ ಮಿಲ್ಸ್ ಕಾರ್ಖಾನೆ ಇರುವುದು ಸಹ ಇದೇ ಭದ್ರಾವತಿ ನಗರದಲ್ಲಿ. ಈಗ ಇವೆರಡು ಕಾರ್ಖಾನೆಗಳು ನೆನೆಗುದಿಗೆ ಬಿದ್ದಿದ್ದರೂ, ಉಕ್ಕಿನ ನಗರಿ ಎಂದೇ ಗುರುತಿಸಿಕೊಂಡಿದೆ. ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿರುವ ಭದ್ರಾವತಿ ನಗರ ಪ್ರಖ್ಯಾತಿಯ ಜೊತೆಗೆ ಕುಖ್ಯಾತಿಯನ್ನು ಮಡಿಲಲ್ಲಿ ಹೊದ್ದು ನಿಂತಿದೆ.ಭದ್ರಾವತಿಯ ರಾಜಕೀಯದಿಂದ ಹಿಡಿದು ಪೊಲೀಸ್ ವ್ಯವಸ್ಥೆಯವರೆಗೂ ಇಲ್ಲಿನ ಕ್ರೈಂ ಲೋಕ ಎಲ್ಲವನ್ನು ನಿಯಂತ್ರಿಸುತ್ತದೆ ಎಂದರೆ ನೀವು ನಂಬುತ್ತಿರಾ..

ಇಲ್ಲಿನ ಪೊಲೀಸ್ ಠಾಣೆಗಳಲ್ಲಿನ ಕಳ್ಳರ ಪಟ್ಟಿ ನೋಡಿದ್ರೆ..,ಅಬ್ಬಾ..,ಈ ನಗರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಳ್ಳರಿದ್ದೀರಾ ಎಂದು ನೀವು ಮೂಗಮೇಲೆ ಬೆರಳಿಟ್ಟುಕೊಳ್ಳುತ್ತೀರಿ..ಮೀಸೆ ಚಿಗುರದ ಹುಡುಗರಿಂದ ಹಿಡಿದು ,ಮಹಿಳೆಯರು ವಯೋವೃದ್ಧರಾಗಿಯಾಗಿ ಇಲ್ಲಿ ಕಳ್ಳರ ದೊಡ್ಡಗುಂಪೇ ನೆಲೆಯೂರಿದೆ.ಕೇವಲ ಚೈನ್ ಸ್ನಾಚಿಂಗ್,ಸೂಟ್ ಕೇಸ್ ಸ್ನಾಚಿಂಗ್,ಪರ್ಸ್ ಸ್ನಾಚಿಂಗ್ ಮಾಡುತ್ತಿದ್ದ ಕಳ್ಳರು ಈಗ ಹೊಸಮನೆ ಎರಿಯಾದಲ್ಲಿ ದೊಡ್ಡ ದೊಡ್ಡ ಬಂಗಲೆಯನ್ನೇ ಎಬ್ಬಿಸಿದ್ದಾರೆ.ಇವರ ಮನೆಗಳಿಗೆ ಹೋದರೆ..,ನೀವು ಇವರನ್ನು ಕಳ್ಳರೆಂದು ಹೇಳೋದಕ್ಕೂ ಸಾಧ್ಯವಿಲ್ಲ.ವೈಟ್ ಕಾಲರ್ ಗಳಾಗಿ ಭದ್ರಾವತಿ ನಗರದಲ್ಲಿ ಓಡಾಡೋ ಇವರ ಹಣೆಬರಹ ಪೊಲೀಸ್ ಠಾಣೆಯ ಠಕ್ಕರ ಫಲಕದಲ್ಲಿ ನೋಡಿದಾಗ್ಲೆ ಗೊತ್ತಾಗೋದು.

ಭದ್ರಾವತಿ ಕಳ್ಳರ ಗ್ಯಾಂಗ್ ನದ್ದು ಕೇವಲ ರಾಜ್ಯದಲ್ಲಲ್ಲದೆ ಹೊರರಾಜ್ಯಗಳಲ್ಲೂ ಕೂಡ ಹಲವಾರು ಕೇಸುಗಳು ದಾಖಲಾಗಿವೆ.ದೆಹಲಿ,ಮಹರಾಷ್ಟ್ರ,ಅಹಮದಾಬಾದ್,ಆಂದ್ರ ಪ್ರದೇಶ ,ಚೆನ್ನೈ,ಹೈದರಬಾದ್ ತಿರುಪತಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಭದ್ರಾವತಿಯ ಕಳ್ಳರ ವಿರುದ್ಧ ಪ್ರಕರಣಗಳು ದಾಖಲಾಗಿದೆ,ಪೊಲೀಸ್ರಿಗೆ ಈ ಕಳ್ಳರನ್ನು ಹಿಡಿಯೋದು..,ಜೈಲಿಗಟ್ಟೊದು ರುಟಿನ್ ಪ್ರಾಸಸ್ ಆಗಿದೆ.

ಭದ್ರಾವತಿ ಕಳ್ಳರು ಮಾಡೋ ಕಳ್ಳತನ ಊಹೆಗೂ ಸಿಲುಕೋದಿಲ್ಲ. ಜೇಬು ನೋಡಿಕೊಂಡಾಗ್ಲೆ ಗೊತ್ತಾಗೋದು ಕಳ್ಳರ ಕೈಚಳಕ ಹೇಗಿದೆ ಅಂತಾ ಯಾವ ರೀತಿ ಕಳ್ಳತನ ಇವರು ಮಾಡ್ತಾರೆ ಗೊತ್ತಾ? ಇದು ನಿಮ್ಮ ಅರಿವಿಗೆ ಬಂದ್ರೆ ಸಾಕು

ಗುಂಪು ಕಟ್ಟಿಕೊಂಡು ಕಳ್ಳತನ
ಪಿಕ್ ಪಾಕೆಟಿಂಗ್(Pickpocketing)
ಮೊಬೈಲ್ ಅಪೆಂಡರ್ಸ್ (Mobile offinders)
ಸೂಟ್ ಕೇಸ್ ಲಿಪ್ಟಿಂಗ್(suitcase lifting)
ಅಟೆನ್ಷನ್ ಡೈವರ್ಷನ್(Attention Divertion)
ಚೈನ್ ಸ್ನಾಚಿಂಗ್(chain snaching)
ಈ ರೀತಿಯ ಕಳ್ಳತನ ಮಾಡೋದ್ರಲ್ಲಿ ಭದ್ರಾವತಿ ನಗರದ ಕಳ್ಳರ ಗುಂಪು ಪೇಮಸ್..,ಇದಕ್ಕಾಗಿ ಇವರು ಹಾಕೋ ವೇಷಗಳು ಕೂಡ ವಿಶೇಷವೇ ಸರಿ.

ಕಳ್ಳತನಕ್ಕಾಗಿ ನಾನಾವೇಷ

ಭದ್ರಾವತಿಯ ಈ ಕಳ್ಳರು ಕಳ್ಳತನಕ್ಕೆ ಊರುಬಿಟ್ಟು ಹೊರಟರೆ ಅವರನ್ನು ನೋಡಿದವರು ಯಾರು ಕಳ್ಳರೆಂದು ಹೇಳಲು ಸಾಧ್ಯನೇ ಇಲ್ಲ. ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಜಾತ್ರೆ ರಥೋತ್ಸವ ವಾರ್ಷಿಕೋತ್ಸವ ಕಾರ್ಯಕ್ರಮಗಳಿದ್ದರೆ ಅಲ್ಲಿ ಕುಟಂಬ ಪರಿವಾರದೊಡನೆ ಭಕ್ತರ ಸೋಗಿನಲ್ಲಿ ಎಂಟ್ರಿ ಕೊಡ್ತಾರೆ. ಅಪ್ಪ ಅಮ್ಮ ಮಗ ಮಗಳು ಅನ್ನೋ ಪ್ಯಾಮಿಲಿ ಪ್ಲಾನಿಂಗ್ ಕುಟುಂಬದ ರೀತಿ ಇವರು ಹೊರಟು ನಿಂತ್ರೆ..,ಅಪರಿಚಿತರು ಮೋಸ ಹೋಗೋದ್ರಲ್ಲಿ ಯಾವುದೇ ಅನುಮಾನಗಳಿಲ್ಲ.

ಹೀಗೆ ದೇವಸ್ಥಾನಗಳಿಗೆ ಭೇಟಿ ನೀಡೋ ಇವರು ಅಲ್ಲಿ ಪರ್ಸ್ ಚಿನ್ನಾಭರಣ ಕದಿಯುತ್ತಾರೆ.ಇ ನ್ನು ರೈಲುಗಳಲ್ಲಿ ಮೈ ಕೈ ತುಂಬಾ ಚಿನ್ನಾಭರಣ ಧರಿಸಿಕೊಂಡೇ ಈ ಕಳ್ಳರ ಪ್ಯಾಮಿಲಿ ಎಂಟ್ರಿ ಕೊಡುತ್ತೆ. ಸ್ಲೀಪರ್ ಕೋಚ್ ನಲ್ಲಿ ಕೂರುವ ಈ ಕುಟುಂಬವನ್ನು ನೋಡಿದ್ರೆ ಪ್ರಯಾಣಿಕರು ಪ್ಯಾಮಿಲಿ ಅಂತಾ ಮಾತಿಗಿಳಿಯುತ್ತಾರೆ. 10 ಬೆರಳಿಗೂ ಉಂಗುರ.ಕೈಗೆ ರೇಡೋ ವಾಚು..,ನೋಡಿದ್ರೆ ಎದುರಿಗಿದ್ದ ಪ್ರಯಾಣಿಕರು ನಿಮ್ಮ ಬಂಗಾರ ಹುಷಾರು..,ಯಾರಾದ್ರು ದೋಚಿಬಿಟ್ರೆ ..ಕಷ್ಟಾ ಕಣ್ರಿ ಅಂತಾ ಪ್ರಯಾಣಿಕರೇ ಕಳ್ಳರಿಗೆ ಬುದ್ದಿವಾದ ಹೇಳಬೇಕು ..,ಆ ರೀತಿ ಪೋಷಾಕು ಧರಿಸಿಕೊಂಡು ಬಂದಿರುತ್ತೆ ಈ ಕಳ್ಳರ ತಂಡ. ರೈಲಿನಲ್ಲಿ ಕೆಲಹೊತ್ತು ಪಯಣ ಬೆಳೆಸಿದ ನಂತ್ರ ಇವರು ಹೇಗೋ ಅಕ್ಕಪಕ್ಕದವರ ಜೊತೆ ವಿಶ್ವಾಸ ಗಳಿಸಿರ್ತಾರೆ..,ಕಳ್ಳ ಕುಟುಂಬ ಪ್ರಿಪ್ಲಾನ್ ನಂತೆ ತಂದಿರೋ ಡ್ರಿಂಕಿಂಗ್ ವಾಟರ್..,ಅಥವಾ ಕೂಲ್ ಡ್ರಿಂಕ್ ಪ್ರಯಾಣಿಕರಿಗೆ ಕುಡಿಯುವಂತೆ ಕೊಡ್ತಾರೆ. ಪ್ರಯಾಣಿಕ ಮತ್ತೇರಿ ನಿದ್ದೆ ಜಾರಿ ಬಿಡ್ತಾನೆ…ಎದ್ದು ನೋಡಿದಾಗ್ಲೆ ಗೊತ್ತಾಗೋದು..,ತಮ್ಮ ಸೂಟ್ ಕೇಸು ಬ್ಯಾಗು ಪರ್ಸ್ ಚೈನು ,ಮೊಬೈಲ್ ಎಲ್ಲಾ ಲಿಪ್ಟ್ ಆಗಿದವೇ ಅಂತಾ..,ಹೀಗೆ ಕಳ್ಳರು ತಮ್ಮ ಕೈ ಚಳಕ ತೋರಿಸಿ ಬಿಡ್ತಾರೆ.

ಬೇರೆ ರಾಜ್ಯದಲ್ಲಿ ಹೇಗೆ ಮಾಡ್ತಾರೆ ಕಳ್ಳತನ,

ಸೂರತ್ ಬಟ್ಟೆ ಮಾರುವವರ ಸೋಗಿನಲ್ಲಿ ಹೊರಡುವ ಕುಟುಂಬ ಪರಿವಾರದ ಕಳ್ಳರ ತಂಡ ಇನೊವಾ ಇಲ್ಲವೇ ರೈಲಿನಲ್ಲಿ ಪ್ರಯಾಣ ಬೇಳೆಸ್ತಾರೆ.ಇವರು ಜನರ ಗಮನ ಬೇರೆಡೆ ಸೆಳೆಯೊದ್ರರಲ್ಲಿ ಅಪ್ಪಟ ಚತುರರು.ರೈಲಿನಲ್ಲಿ ಹೊರಟ್ರೆ ಮತ್ತು ಬರೋ ಮಾತ್ರೆ ಕೊಡ್ತಾರೆ.ಇನ್ನು ಜನನಿಬಿಡ ಪ್ರದೇಶದಲ್ಲಿ ಜನರನ್ನು ನೋಡಿ ಮಂಗ ಮಾಡುತ್ತಾರೆ.ಬಟ್ಟೆ ವ್ಯಾಪಾರಿಗಳ ರೀತಿ ಹೋದ್ರೆ..,ಮನೆ ವಾತಾವರಣ ನೋಡಿ ಮತ್ತು ಬರಿಸೋ ಸ್ಪ್ಪೇ ಮಾಡಿ ಮನೆಗಳ್ಳತನ ಮಾಡುತ್ತಾರೆ. ನಿಮ್ಮ ಮನೆ ಬಾಗಿಲಿಗೆ ಬಟ್ಟೆ ವ್ಯಾಪಾರಿಗಳ ಸೋಗಿನಲ್ಲಿ ವ್ಯಾಪರಕ್ಕೆ ಮಹಿಳೆಯರು ಮಕ್ಕಳು ಬಂದ್ರೆ ಸುಮ್ನೆ ಬಾಗಿಲು ತೆಗೆಯಬೇಡಿ..,10 ಅಡಿ ದೂರದಿಂದ ಸ್ಪೇ ಮಾಡಿದ್ರೂ ಮತ್ತು ಬರಿಸೋ ಔಷಧಿ ಇವರ ಬಳಿಯಿದೆ…,ಬಾಗಿಲು ತೆರೆದು ಸ್ವಾಗತ ಕೋರಿದ್ರೆ ನಿಮ್ಮನೆ ಮುಂಡಾ ಮೋಚ್ತು ಅಂತಾನೆ ಲೆಕ್ಕ.ಹೀಗಾಗಿ ಹೊರ ರಾಜ್ಯಗಳಲ್ಲಿ ಇವರು ಅರಾಮಾಗಿ ಮನೆಗಳ್ಳತನ ಮಾಡ್ತಾರೆ .ಚಿನ್ನಾಭರಣ ದೋಚುತ್ತಾರೆ.ರಾಜಕೀಯ,ಸಾಂಸ್ಕೃತಿಕ ದಾರ್ಮಿಕ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಡೆದ್ರೆ,,ಇವರು ಬೇರೆಡೆ ಗಮನ ಸೆಳೆದು ಪಿಕ್ ಪಾಕೆಟ್ ಸೂಟ್ ಕೇಸ್ ಲಿಪ್ಟಿಂಗ್ ಮಾಡ್ತಾರೆ

ಬಲಗೈಲಿ ಸೂಟ್ ಕೇಸು ಇತ್ತು ಅನ್ಕೊಳ್ಳಿ ..,ಎಡಗೈ ಹೆಗಲಿಗೆ ಕೆಟ್ಟ ರೀತಿಯ ವಾಸನೆ ಬರೋ ವಸ್ತುವನ್ನು ಹಾಕ್ತಾರೆ…,ನಂತ್ರ ಪಕ್ಕದಲ್ಲಿ ನಿಂತ ಕಳ್ಳನೇ..,ನಿಮ್ಮ ಹೆಗಲ ಮೇಲೆ ಏನೋ ಬಿದ್ದಿದೆ ..ಅಂತಾನೆ ಇಲ್ಲವೇ ಮೋಸಹೋಗುವ ವ್ಯಕ್ತಿಯೇ ಏನೋ ಕೆಟ್ಟ ಸ್ಮೆಲ್ ಬರ್ತಿದೆ ಅಂತಾ ಹೆಗಲು ಮೂಸಕ್ಕೆ ಹೋಗುವಷ್ಟರಲ್ಲಿ ಕಳ್ಳ..,ಆ ವ್ಯಕ್ತಿ ಬಳಿ ಇರೋ .,,ಸೂಟ್ ಕೇಸ್..,ಇಲ್ಲವೆ ಪರ್ಸ್ ಇಲ್ಲವೇ ಚಿನ್ನ ಯಾವುದಾದ್ರೂ ಒಂದು ಐಟಂ ಅಂತೂ ಎಗರ್ಸಿರ್ತಾನೆ.

ಅಟೆನ್ಷನ್ ಡೈವರ್ಷನ್ ಮಾಡಿ,ಕಳ್ಳತನ ಮಾಡೋದ್ರಲ್ಲಿ ಭದ್ರಾವತಿ ಕಳ್ಳರು ಬಲು ನಿಸ್ಸಿಮ್ಮರು. ಇವರ ಟಾರ್ಗೆಟ್ ಎಂದೂ ಮಿಸ್ ಆಗಿದ್ದೇ ಇಲ್ಲ..ಹೀಗಾಗಿ ಒಮ್ಮೆ ಬೇಟೆಗೆ ಹೊರಟ್ರೆ..ಕೈ ತುಂಬಾ ಹಣ..,ಚೀಲದ ತುಂಬಾ ಚಿನ್ನ ಗ್ಯಾರಂಟಿ. ಕದ್ದ ಮಾಲನ್ನು ಸೀಮಿತ ವ್ಯಾಪಾರಿಗಳಿಗೆ ಅರ್ದ ಬೆಲೆಗೆ ಮಾರ್ತಾರೆ.ಬಂದ ಹಣವನ್ನು ಓಸಿ ಇಸ್ಪೀಟು ಹೆಣ್ಣು ಮಕ್ಕಳ ಸಹವಾಸ ಮಾಡಿ ಹಾಳ್ ಮಾಡ್ತಾರೆ.ಹಳೇ ಕೇಸುಗಳಿಗೆ ಲಾಯರ್ ,ಪೊಲೀಸ್ರು ಅಂತಾ ಹಣ ಕೊಡಕ್ಕೆ ಮತ್ತದೇ ಕಳ್ಳತನದ ಹಣ ನೀಡಬೇಕಾಗುತ್ತೆ ಈ ಕಳ್ಳರು.

ವರ್ಷಕ್ಕೆ ಲಕ್ಷಗಟ್ಟಲೆ ಹಣ ಸಂದಾಯ ಪೋಷಕರಿಗೆ.

ಹೌದು ಇದು ನಿಜಕ್ಕೂ ಆಘಾತಕಾರಿ ವಿಷಯ.ಕಳ್ಳತನ ಮಾಡಲು ಇಲ್ಲಿ ಪೋಷಕರ ರೀತಿ ಬೇರೆ ಊರು ಹೊರ ರಾಜ್ಯಗಳಿಗೆ ಹೊರಡುವ ಕಳ್ಳರಿಗೆ ಸೇಪ್ಟಿಗೆ ಮಕ್ಕಳು ಬೇಕೇ ಬೇಕು.ಇದಕ್ಕಾಗಿ ಇದೇ ಏರಿಯಾದಲ್ಲಿರುವ ಮಕ್ಕಳನ್ನು ಕಳ್ಳರು ಬಳಸಿಕೊಳ್ಳುತ್ತಾರೆ. ಇಂತಹ ಪೋಷಕರಿಗೆ ವರ್ಷಕ್ಕೆ ಇಂತಿಷ್ಟು ಹಣ ಎಂದು ಅಡ್ವಾನ್ಸ್ ನೀಡುತ್ತಾರೆ. ಮಹಿಳೆಯರು ಹೆಚ್ಚು ಕಡಿಮೆ ತಂಡದಲ್ಲಿ ಇದ್ದೇ ಇರುತ್ತಾರೆ.ಹೀಗಾಗಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಫರ್ಪೆಕ್ಟ್ ಪ್ಯಾಮಿಲಿ ಯಾಗಿ .,ಕಳ್ಳತನದ ದಂಧೆಗೆ ಅಣಿಯಾಗುತ್ತದೆ.ಇದು ಪೊಲೀಸ್ ಇಲಾಖೆಗೂ ಗೊತ್ತಿರುವ ವಿಷಯ.ಆದ್ರೆ ಯಾಕೆ ಮೌನಕ್ಕೆ ಶರಣಾಗಿದ್ದಾರೋ ..,ಅವರೇ ಹೇಳಬೇಕು ಅಷ್ಟೆ.

ಊರು ಬಿಟ್ರೆ..,ಮೂರ್ನಾಲ್ಕು ತಿಂಗಳು ವಾಪಸ್ಸಾಗೊಲ್ಲ.

ಭದ್ರಾವತಿ ನಗರದ ಈ ಕಳ್ಳರ ತಂಡ ಒಮ್ಮೆ ಊರು ಬಿಟ್ರೆ ಮೂರ್ನಾಲ್ಕು ತಿಂಗಳು ಮತ್ತೆ ಊರು ಕಡೆ ಮುಖ ಹಾಕಿ ಕೂಡ ಮಲಗೋದಿಲ್ಲ. ಕುಟುಂಬ ಪರಿವಾರದ ರೀತಿ ಬಿಂಬಿಸಿಕೊಳ್ಳಲು ತಂಡದಲ್ಲಿ ಮಹಿಳೆಯರು ಮಕ್ಕಳು ಇರ್ತಾರೆ.ಇವರೆಲ್ಲಾ ತಮ್ಮ ಕೈ ಚಳಕ ತೋರಿಸಲು ಸಭೆ ಸಮಾರಂಭ ಕಾರ್ಯಕ್ರಮಗಳು ನಡೆಯಬೇಕಾದ ಮಾಹಿತಿ ಬೇಕಲ್ಲ.ಅದಕ್ಕಾಗಿ ನ್ಯಾಷನಲ್ ನಿಂದ ಹೀಡಿದು ಸ್ಟೇಟ್ ಪೇಪರ್ ವರೆಗೂ ಕೊಂಡು ಓದುತ್ತಾರೆ. ರಾಜಕೀಯ ಕಾರ್ಯಕ್ರಮಗಳು,ರ್ಯಾಲಿಗಳು ಧಾರ್ಮಿಕ ಕಾರ್ಯಕ್ರಮಗಳು ಒಟ್ಟಾರೆ ಜನಸಮೂಹ ಸೇರುವಂತ ಸ್ಥಳಗಳಿಗೆ ಇವರೆಲ್ಲಾ ತಂಡೋಪ ತಂಡವಾಗಿ ಹೊರಡುತ್ತಾರೆ.ಅದು ಹಳ್ಳಿಯಾದ್ರೂ ಪರವಾಗಿಲ್ಲ ದಿಲ್ಲಿಯಾದ್ರೂ ಚಿಂತೆಯಿಲ್ಲ.ತಂಡ ಹೊರಡಲು ಅಣಿಯಾಗಲು ಸಿದ್ದವಾಗಿರುತ್ತೇ..,ಇನ್ನು ಕಳ್ಳತನಕ್ಕೆ ಹೊರಡುವ ಈ ಕಳ್ಳರಿಗೆ ಪೈನಾನ್ಸ್ ಮಾಡೋರು ಯಾರು ಗೊತ್ತಾ ಅದು ಇನ್ನು ಇಂಟರಿಸ್ಟಿಂಗ್.

ಸೀಮಿತ ಬಂಗಾರದ ವ್ಯಾಪರಸ್ಥರೇ ನೀಡ್ತಾರೆ ಅಡ್ವಾನ್ಸ್.

ಅಪ್ಪ ಮಗ ಮಕ್ಕಳ ಪೋಷಾಕಿನಲ್ಲಿ ಕುಟುಂಬ ಪರಿವಾರದಂತೆ ಕಳ್ಳತನದ ಭೇಟೆಗೆ ಹೊರಡು ನಿಲ್ಲೋ ಕಳ್ಳರ ತಂಡಕ್ಕೆ ಬಾರಿ ಬೇಡಿಕೆಯಿದೆ.ಒಂದು ಸಲ ಕಳ್ಳ ಬೇಟೆಗೆ ಹೊರಟ್ರೆ ಮಿನಿಮಮ್ ಒಂದಿರಂದ ಎರಡು ಕೇಜಿ ಚಿನ್ನ,50 ರಿಂದ 60 ಸೂಟ್ ಕೇಸ್,ಲಕ್ಷಕ್ಕೂ ಅಧಿಕ ನಗದು,100-150 ಮೊಬೈಲ್ ಸ್ಮಾರ್ಟ್ ಪೋನು..,ಒಟ್ಟಾರೆ 30 ರಿಂದ 40 ಲಕ್ಷ ರೂಪಾಯಿ ಬೆಲೆಬಾಳುವ ಅಸೆಟ್ ನ್ನು ಲಿಪ್ಟ್ ಮಾಡುತ್ತೆ ಭದ್ರಾವತಿಯ ತಂಡ. ಈ ರೀತಿಯ ಹಲವು ತಂಡಗಳು ಊರು ತೊರೆದು ಬೇರೆ ರಾಜ್ಯಗಳಿಗೂ ಹೊಗುತ್ತೆ..,ಇವರಿಗೆ ಹಲವು ದಿನಗಳಿಗಾಗುವಷ್ಟು ಹಣ ಕೊಡೆದಕ್ಕೆ ಕೆಲವು ಬಂಗಾರದ ವರ್ತಕರು ಇರ್ತಾರೆ

ಇಷ್ಟೊಂದು ಕಳ್ಳತನವಾಗ್ತಿದ್ರು..ಪೊಲೀಸ್ರು ಸುಮ್ನಿರ್ತಾರಾ.

ಖಂಡಿತಾ ಸಾಧ್ಯವಿಲ್ಲ.ಭದ್ರಾವತಿ ಕಳ್ಳರೇನು ಭದ್ರಾವತಿಯಲ್ಲಿಯೇ ಪ್ರತಿನಿತ್ಯ ಕಳ್ಳತನ ಮಾಡೋಕೆ ಸಾಧ್ಯನಾ ಇಲ್ಲ.ಅವರು ಬೇರೆ ಊರುಗಳಿಗೆ ಬೇರೆ ರಾಜ್ಯಗಳಿಗೆ ಕಳ್ಳತನಕ್ಕೆ ಹೋದ್ರು ಅಂದ್ರೆ ಭದ್ರಾವತಿ ಕೆಲವು ಕ್ರೈಂ ಬೀಟ್ ಪೊಲೀಸ್ರಿಗೆ ಪಕ್ಕಾ ಮಾಹಿತಿ ಇದ್ದೇ ಇರುತ್ತೆ.ಹೋದ ಗ್ಯಾಂಗ್ ಮತ್ತೆ ಯಾವಾಗ ಬರುತ್ತೆ..,ಅವರೆಷ್ಟು ಕದ್ರು..,ಎಷ್ಟು ಹಣ ಬಂತು ಅನ್ನೋ ಪಕ್ಕಾ ಮಾಹಿತಿ ಇರುತ್ತೆ. ಹಾಗಂತ ಎಲ್ಲಾ ಪೊಲೀಸ್ರು ಕಳ್ಳರೊಂದಿಗೆ ಶಾಮೀಲಾಗಿದ್ದಾರೆ ಅಂತಾ ನಾವ್ ಹೇಳ್ತಿಲ್ಲ. ಕೆಲವೇ ಕೆಲವು ಪೊಲೀಸ್ ಸಿಬ್ಬಂದಿಗಳಿಗಂತೂ ಕಳ್ಳರ ಪಕ್ಕಾ ಮಾಹಿತಿ ಜಿಪಿಎಸ್ ವ್ಯವಸ್ಥೆಯಂತೆ ಗೊತ್ತು.ಹೋದ ಕಳ್ಳರು ತಂದ ಮಾಲಿಗೆ ಇಂತಿಷ್ಟು ಮಾಮೂಲು ಅಂತಾ ಪೊಲೀಸ್ರು ಮನೆ ಬಾಗಿಲಿಗೆ ಮುಟ್ಟಿಸ್ತಾರೆ..,ಅಲ್ಲಿಗೆ ಕಳ್ಳರ ಹಣ ಪೊಲೀಸ್ರು ಜೇಬಿಗೆ ಸೇರಿದ್ದಾಯ್ತು. ಇನ್ನು ರಾಜಕೀಯ ವ್ಯವಸ್ಥೆ ಸುಮ್ಮನಿರಲು ಸಾಧ್ಯನಾ. ಇವರಿಗೆ ಕರಿನೆರಳಾಗಿ ನಿಂತಿದೆ. ಪೊಲಿಟಿಕಲ್ ಇನ್ ಪ್ಲೂಯನ್ಸ್ ಇರೋ ಈ ಕಳ್ಳರು ಪೊಲೀಸ್ ಠಾಣೆ ಮೆಟ್ಟಲೇರಿದ್ರೆ ತಕ್ಷಣಕ್ಕೆ ಹೊರ ಬರೋ ವ್ಯವಸ್ಥೆ ಕೂಡ ಇಲ್ಲಿದೆ.ಕಳ್ಳರು ಸಿಕ್ಕಿ ಹಾಕಿಕೊಂಡ್ರೆ..,ಕೇಸು ನಿಭಾಯಿಸಲು ಕೆಲವರಿದ್ದಾರೆ. ಧನದಾಹಿಗಳಿಗೆ ಊರಹಬ್ಬವಾಗಿದ್ದಾರೆ ಇಲ್ಲಿನ ಕಳ್ಳರು.

ಕಳ್ಳ ಪೊಲೀಸ್ ಆಟದಲ್ಲಿ ಇಲ್ಲಿ ಕಳ್ಳನೇ ವಿಜಯಿ

ಭದ್ರಾವತಿ ನಗರದಲ್ಲಿ ನಡೆಯುತ್ತಿರುವ ಕಳ್ಳತನದ ವಿಚಾರದಲ್ಲಿ ಒಂದೋ ಪೊಲೀಸರು ದಿಟ್ಟ ಕ್ರಮ ಕೈಗೊಳ್ಳಬೇಕು.ಇಲ್ಲವೇ ಕಳ್ಳರೊಂದಿಗೆ ಶಾಮೀಲಾಗಬೇಕು.ಶಾಮೀಲಾದ್ರೆ ಪರ್ವಾಗಿಲ್ಲ..ತಿಂಗಳ ಮಾಮೂಲಿ ಪಿಕ್ಸ್ ಗ್ಯಾರಂಟಿ..,ಕಳ್ಳರ ಹೆಡೆಮುರಿ ಕಟ್ತಿನಿ ಅಂದ್ರೆ ಅದು ಪೊಲೀಸ್ರಿಗೆ ಸಾಧ್ಯವಾಗದ ವಿಷಯ.ಯಾಕೆಂದ್ರೆ ಕಳ್ಳರೊಂದಿಗೆ ಶಾಮೀಲಾಗೋ ರಾಜಕೀಯ ವ್ಯವಸ್ಥೆ ಪೊಲೀಸ್ರಿಗೆ ಖೆಡ್ಡಾ ತೋಡುತ್ತೆ. ಹೊಸಮನೆ ಠಾಣೆಯಲ್ಲಿ ಈ ಹಿಂದೆ ಎಸ್ಸೈ ಆಗಿ ಕರ್ತವ್ಯ ನಿರ್ವಹಿಸಿದ ಕುಮಾರ್ ,,ಮೊಬೈಲ್ ಕಳ್ಳರಿಗೆ ಸಿಂಹಸ್ವಪ್ನವಾಗಿದ್ರು..,ಆದ್ರೆ ಅದೇ ಕಳ್ಳರು ಲೋಕಾಯುಕ್ತ ಟ್ರಾಪ್ ಮಾಡಿಸಿ,ಪೊಲೀಸ್ ಅಧಿಕಾರಿಯನ್ನೇ ಅಮಾನತ್ತುಗೊಳಿಸಿ,ವಿಕೃತತೆ ಮೆರೆದ್ರು..,ಇದಾದ ನಂತ್ರ ಚಿನ್ನದ ಕಳ್ಳರಿಗೆ ಹೆಡೆಮುರಿ ಕಟ್ಟಿದ ಇನ್ಸ್ ಪೆಕ್ಟರ್ ತಿರುಮಲೇಶ್ ವಿರುದ್ಧ ಕಳ್ಳನೊಬ್ಬ ಕೋರ್ಟ್ ನಲ್ಲಿ ದೂರು ನೀಡಿದ.ನನ್ನಿಂದ 100 ಗ್ರಾಂ ಪಡೆದಿದ್ದು ಇನ್ಸ್ ಪೆಕ್ಟರ್ ತಿರುಮಲೇಶ್ 37 ಗ್ರಾಂ ಚಿನ್ನವನ್ನಷ್ಟೆ ರಿಕವರಿ ತೋರಿಸಿದ್ದಾರೆಂದು ಸುಳ್ಳು ದೂರು ನೀಡಿ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದ..,ಇಲ್ಲಿ ಕಳ್ಳರನ್ನು ಎದುರಾಕೊಂಡ್ರೆ..,ಪೊಲೀಸ್ರಿಗೆ ಉಳಿಗಾಲವಿಲ್ಲ ಅನ್ನೋ ವಾತಾವರಣ ಭದ್ರಾವತಿಯಲ್ಲಿ ಸೃಷ್ಟಿಯಾಗಿದೆ.

ವೃತ್ತಿ ಬಿಡುತ್ತೇನೆಂದರೂ ಪೊಲೀಸರು ಒಪ್ಪಲು ರೆಡಿಯಿಲ್ಲ

ಹೊಸಮನೆ,ಭೋವಿ ಕಾಲೋನಿ,ಹನುಮಂತ ನಗರ,ವಿಜಯನಗರ ಪ್ರದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದೆ.ಬಹಳಷ್ಟು ಮಂದಿ ಮರ್ಯಾದಸ್ಥ ಕುಟುಂಬಗಳು ಇಲ್ಲಿನ ವಾತವರಣ ನೋಡಿ,ತಮ್ಮ ಮನೆ ಅಂಗಡಿಗಳನ್ನು ಅರ್ದಬೆಲೆಗೆ ಮಾರಿ ಬೇರೆಡೆ ಸೆಟ್ಲ್ ಆಗಿದ್ದಾರೆ…,ಆದರೆ ಈ ಪರಿಸರದಲ್ಲಿ ಹುಟ್ಟುವ ಮಗುವಿಗೆ ವಾತಾವರಣವೇ ಕಳ್ಳತನದ ಪಾಠ ಕಲಿಸುತ್ತೆ..,ಶೈಕ್ಷಣಿಕವಾಗಿ ಈ ಪ್ರದೇಶಗಳು ಹಿಂದುಳಿದಿವೆ,ಆರ್ಥಿಕತೆಯ ಮೂಲ ಇಲ್ಲ..,ಸಾಮಾಜಿಕವಾಗಿ ಶೋಷಣೆಗೊಳಗಾದ ಕುಟುಂಬಗಳಿಗೆ ಕಳ್ಳತನ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ.ಹುಟ್ಟಿದ್ದು ಮನೆಯಲ್ಲಾದ್ರೆ ಇವರೆಲ್ಲಾ ಬಹುತೇಕ ಬೆಳೆದಿದ್ದು,ಸ್ಟೇಷನ್ನು ಜೈಲುಗಳಲ್ಲಿ.ಹೀಗಾಗಿ ಬೆಳೆದಂತೆಲ್ಲಾ ಇವೆರೆಲ್ಲಾ ಪಕ್ಕಾ ಪ್ರೊಪೇಷನಲ್ ಸ್ನಾಚರ್ಸ್ ಗಳಾದರೇ ಹೊರತು ಬದುಕು ಬದಲಿಸಿಕೊಳ್ಳುವ ಪ್ರಯತ್ನ ನಡೆಸಿಲ್ಲ.ಇವರು ರಾಜಕಾರಣಿಗಳಿಗೆ ಓಟ್ ಬ್ಯಾಂಕ್ ಗಳಾದ್ರು,ನೋಟ್ ಬ್ಯಾಂಕ್ ಗಳಾದ್ರು..,ಆದರೆ ಈ ಕಳ್ಳರನ್ನು ಮನ ಪರಿವರ್ತಿಸುವ ಕಾರ್ಯ ಇದುವರೆಗೂ ಯಾರಿಂದಲೂ ನಡೆದಿಲ್ಲ.

ಕಳ್ಳತನ ಬಿಡ್ತಿನಿಂದರೂ ಪೊಲೀಸ್ ವ್ಯವಸ್ಥೆ ಬಿಡುತ್ತಿಲ್ಲ. ಹಾಗಂತ ಈಗಲೂ ಕಾಲ ಮಿಂಚಿಲ್ಲ. ಕರ್ತವ್ಯಕ್ಕೆ ಹಾಜರಾಗಿನಿಂದ ಈವರೆಗೂ ಕ್ರೈಂ ಬೀಟ್ ನಲ್ಲಿರುವ ಹಳೆ ಹುಲಿಗಳಿಂತಿರುವ ಪೊಲೀಸರನ್ನು ಜೋಗ ದಂತಾ ದೂರದ ಊರುಗಳಿಗೆ ಎತ್ತಂಗಡಿ ಮಾಡಿದ್ರೆ ಭದ್ರಾವತಿ ನಗರ ಸುಧಾರಣೆ ಕಾಣುತ್ತೆ. ದುಡ್ಡು ಕೊಟ್ಟು ವರ್ಗಾವಣೆಯಾಗಿ ಬರುವ ಪೊಲೀಸ್ ಅಧಿಕಾರಿಗಳಿಂದ ಕ್ರೈಂ ತಹಬದಿಗೆ ಬರವು ಸಾಧ್ಯವಿಲ್ಲ.ಗೃಹ ಸಚಿವರು ಇಡೀ ಸಬ್ ಡಿವಿಜನ್ ನನ್ನೇ ರಿಷಫಲ್ ಮಾಡಬೇಕಿದೆ.

ಇನ್ನು ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕಳ್ಳತನದ ಪ್ರದೇಶಗಳಿಗೆ ಭೇಟಿ ನೀಡಿ ಸಾಮಾಜಿಕ ನ್ಯಾಯ ನೀಡಿದ್ರೆ ಇಲ್ಲಿನ ಕಳ್ಳರ ಮನಸ್ಸುಗಳನ್ನು ಬದಲಿಸಬಹುದು..,ಕದಿಯುವ ಕೈಗಳಿಗೆ ಪೆನ್ನು ನೀಡಿ ಬವಿಷ್ಯವನ್ನೇ ರೂಪಿಸಬಹುದು.ಈ ನಿಟ್ಟಿನಲ್ಲಿ ಜಿಲ್ಲೆಯವರೆ ಆದ ಗೃಹ ಸಚಿವ ಆರಗಾ ಜ್ಞಾನೇಂದ್ರರ