ಹೊಸ ಆರಂಭ! VISL ನಲ್ಲಿನ NRM ಘಟಕದಲ್ಲಿ ಮಷಿನ್​ ಸದ್ದು! ವಿಡಿಯೋ ಹಂಚಿಕೊಂಡ ಸಂಸದ ಬಿ.ವೈ.ರಾಘವೇಂದ್ರ

Production has started at Bhadravathi Visvesvaraya Iron and Steel Plant ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭವಾಗಿದೆ

ಹೊಸ ಆರಂಭ! VISL ನಲ್ಲಿನ NRM  ಘಟಕದಲ್ಲಿ ಮಷಿನ್​ ಸದ್ದು! ವಿಡಿಯೋ ಹಂಚಿಕೊಂಡ ಸಂಸದ ಬಿ.ವೈ.ರಾಘವೇಂದ್ರ

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿರುವ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ  (Bhadravathi Vishweshwara Iron and Steel Factory) ಯಲ್ಲಿ ಮತ್ತೆ ಉತ್ಪಾದನೆ ಆರಂಭಗೊಂಡಿದೆ. ಈ ಸಂಬಂಧ ಸಂಸದ ಬಿ.ವೈ.ರಾಘವೇಂದ್ರರವರು ಟ್ವೀಟ್ ಮಾಡಿದ್ಧಾರೆ. ತಮ್ಮಟ್ವಿಟ್ಟರ್​ನಲ್ಲಿ ಸಂಸದರು,  ವಿಐಎಸ್ಎಲ್ ಮತ್ತೆ ಕೆಲಸ ಶುರು ಮಾಡಿರುವುದು ಎಲ್ಲ ಕಾರ್ಮಿಕರ ನಿರಂತರ ಪ್ರಾರ್ಥನೆ ಹಾಗೂ ಪ್ರಯತ್ನಕ್ಕೆ ಸಂದ ಫಲ. ಆ ಪ್ರಯತ್ನದಲ್ಲಿ ಭಾಗಿಯಾಗಿರುವ ಕಿಂಚಿತ್ ಸಂತೋಷ ಹಾಗೂ ಸಾರ್ಥಕ ಭಾವ ನನ್ನದು. ಸದ್ಯದಲ್ಲೇ ಈ ಹೆಮ್ಮೆಯ ಕಾರ್ಖಾನೆ ಪೂರ್ಣರೂಪದಲ್ಲಿ ಮತ್ತೆ ಹಿಂದಿನ ವೈಭವಕ್ಕೆ ಮರಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರ ಎಂದು ಬರೆದುಕೊಂಡಿದ್ಧಾರೆ. 

 ಕಾರ್ಖಾನೆಯಲ್ಲಿ ನಿನ್ನೆ  ಸೋಮವಾರ ಬೆಳಿಗ್ಗೆ  ಎನ್‌ಆರ್‌ಎಂ ಘಟಕ ಆರಂಭಗೊಂಡಿದೆ. 6 ದಿನಗಳ ಹಿಂದೆ ಉಕ್ಕು ಪ್ರಾಧಿಕಾರ ಬಿಲಾಯ್ ಘಟಕದಿಂದ ಕಾರ್ಖಾನೆಗೆ19 ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳು ಕಾರ್ಖಾನೆಗೆ ಬಂದಿದ್ದವು. ಇದರ ಮುಂದಿನ ಭಾಗವಾಗಿ, ಎನ್‌ಆರ್‌ಎಂ ಘಟಕ ಆರಂಭಗೊಂಡಿದೆ. ಈ ನಡುವೆ ಕಳೆದ ಸುಮಾರು 8 ತಿಂಗಳಿನಿಂದ ಕಾರ್ಖಾನೆ ಮುಂಭಾಗದಲ್ಲಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ತಮ್ಮ ಹೋರಾಟ ಮುಂದುವರೆಸಿದ್ದಾರೆ.  


ಇನ್ನಷ್ಟು ಸುದ್ದಿಗಳು