KARNATAKA NEWS/ ONLINE / Malenadu today/ Aug 29, 2023 SHIVAMOGGA NEWS
ಫೇಸ್ಬುಕ್ ವಿಚಾರವೊಂದಕ್ಕೆ ಮಾಡಿದ್ದ ಕಾಮೆಂಟ್ ವಿರುದ್ಧ ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕಾ ರಘುನಾಥ್ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಿಸಿದ್ದರು. ಸದ್ಯ ಈ ಸಂಬಂಧ ವಿನೋಬನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ತಮ್ಮನ್ನು ಸಾಮಾಜಿಕ ಜಾಲತಾಣತಲ್ಲಿ ಕೀಳು ಅಭಿರುಚಿಯಲ್ಲಿ ನಿಂದಿಸಿದ್ದಾರೆಂದು ಸೌಗಂಧಿಕಾ ರಘುನಾಥ್ ಅವರು ಸೂಲಿಬೆಲೆ ವಿರುದ್ಧ ಪೊಲೀಸರಿಗೆ ಕಳೆದ ಶನಿವಾರ ದೂರು ನೀಡಿದ್ದರು. ಪೊಲೀಸರು ಸೂಲಿಬೆಲೆ ವಿರುದ್ಧ ಐಪಿಸಿ ಸೆಕ್ಷನ್ 504, 509ರಡಿ ಕೇಸು ದಾಖಲಿಸಿದ್ದಾರೆ.
ಇನ್ನೂ ಈ ಸಂಬಂಧ ಮಾತನಾಡಿರುವ ಚಕ್ರವರ್ತಿ ಸೂಲಿಬೆಲೆ, ಈ ಒಂದು ಸಣ್ಣ ಘಟನೆಗೆ ಪೊಲೀಸರು ಎಫ್ಐಆರ್ ಹೇಗೆ ದಾಖಲಿಸಿದರು ಎಂಬುದನ್ನು ಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ ಎಂದಿದ್ದಾರೆ. ಶಿವಮೊಗ್ಗದಲ್ಲಿಯೇ ಈ ಬಗ್ಗೆ ಮಾತನಾಡಿರುವ ನಮೋ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ನನ್ನ ವಿರುದ್ಧ ಪೊಲೀಸರು ಎಪ್.ಐ.ಆರ್ ದಾಖಲಿಸಿದ್ದಾರೆ. ನನ್ನ ಫೇಸ್ ಬುಕ್ ಅಕೌಂಟ್ ನ್ನು ಬೇರೆಯವರು ಹ್ಯಾಂಡಲ್ ಮಾಡುತ್ತಾರೆ. ನಾನು ಅದಕ್ಕೆ ಖಂಡಿತವಾಗಿ ಆನ್ಸರಬಲ್ಲ್ ಆಗಿದ್ದಾನೆ. ಖಂಡೀತವಾಗಿಯೂ ಕೋರ್ಟ್ ನಲ್ಲಿ ಫೇಸ್ ಮಾಡುತ್ತೇನೆ. ಸಣ್ಣ ಪುಟ್ಟ ಪ್ರಕರಣಗಳಿಗೆ ಕೇಸ್ ದಾಖಲಿಸದ ಪೊಲೀಸರು ಈ ಒಂದು ಸಣ್ಣ ಘಟನೆಗೆ ಹೇಗೆ ಕೇಸ್ ದಾಖಲಿಸಿದರು ಎಂಬುದನ್ನು ಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ. ಪೊಲೀಸರನ್ನು ಕೋರ್ಟ್ ಗೆ ಕರೆಸುತ್ತೇನೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು
ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್ಐಆರ್!
ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?


