ಶಿವಮೊಗ್ಗ| ಸ್ಚಿಚ್‌ಬೋರ್ಡ್‌ನಲ್ಲಿ ಮೊಬೈಲ್‌ ಇಟ್ಟು ವಿಡಿಯೋ ಶೂಟ್‌ | ಕ್ರಿಮಿನಲ್‌ ಕೇಸ್‌ ರದ್ದತಿಗೆ ಹೈಕೋರ್ಟ್‌ ನಕಾರ

High Court of Karnataka has dismissed a plea to drop a criminal case involving voyeurism in Shivamogga

ಶಿವಮೊಗ್ಗ|  ಸ್ಚಿಚ್‌ಬೋರ್ಡ್‌ನಲ್ಲಿ ಮೊಬೈಲ್‌ ಇಟ್ಟು ವಿಡಿಯೋ ಶೂಟ್‌ | ಕ್ರಿಮಿನಲ್‌ ಕೇಸ್‌ ರದ್ದತಿಗೆ ಹೈಕೋರ್ಟ್‌ ನಕಾರ
High Court of Karnataka

SHIVAMOGGA | MALENADUTODAY NEWS | Jun 23, 2024  ಮಲೆನಾಡು ಟುಡೆ

ಶಿವಮೊಗ್ಗದ ಪ್ರಕರಣವೊಂದರ ವಿಚಾರಣೆಯಲ್ಲಿ, ಕೇಸ್‌ ಕೈ ಬಿಡಬೇಕು ಎಂಬ ಅರ್ಜಿಯನ್ನು ಹೈಕೋರ್ಟ್‌ ನಿರಕಾರಿಸಿದೆ. ವಾಯಿಸರಂ ಪ್ರಕರಣ ಇದಾಗಿದ್ದು, ಇದರಲ್ಲಿನ ಗಂಭೀರ ಆರೋಪ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ ಎಂದು ಹೈಕೋರ್ಟ್‌ ಹೇಳಿದೆ. 

2021 ರಲ್ಲಿ ನಡೆದಿದ್ದ ಘಟನೆಯೊಂದರಲ್ಲಿ ದೂರುದಾರ ಸಂತ್ರಸ್ತ ಮಹಿಳೆಯೊಬ್ಬರು ತಮ್ಮ ಮನೆಯ ಹಾಲ್‌ನಲ್ಲಿರುವ ಸ್ವಿಚ್‌ ಬೋರ್ಡ್‌ನಲ್ಲಿ ಮೊಬೈಲ್‌ ಇಟ್ಟು ವ್ಯಕ್ತಿಯೊಬ್ಬ ವಿಡಿಯೋ ಹಾಗೂ ಫೋಟೋ ಶೂಟ್‌ ಮಾಡಿದ್ದ. ಅಲ್ಲದೆ ಅದನ್ನ ಕುಟುಂಬಸ್ಥರೊಂದಿಗೆ ಹಂಚಿಕೊಂಡು ತಮ್ಮ ಘನತೆಗೆ ಕುಂದು ತಂದಿದ್ದ ಎಂದು ಆರೋಪಿಸಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು. ಈ ಸಂಬಂಧ ಚಾರ್ಜ್‌ ಶೀಟ್‌ ಸಹ ದಾಖಲಾಗಿತ್ತು. 

ಇದರ ನಡುವೆ ಆರೋಪಿಯು ಹೈಕೋರ್ಟ್‌ ಮೆಟ್ಟಿಲೇರಿದ್ದರು ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅಹವಾಲು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ ನಾಗಪ್ರಸನ್ನರವರ ಪೀಠ ಪ್ರಕರಣವೂ ವಾಯರಿಸಂ  ಅಂದರೆ ಲೈಂಗಿಕ ದೃಶ್ಯಗಳನ್ನು ನೋಡಿ ತೃಪ್ತಿ ಪಡುವಂತಹ ಆರೋಪವಿದ್ದು, ಅರ್ಜಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಆರೋಪಿ ವಿಚಾರಣೆಯನ್ನು ಎದುರಿಸಲಿ ಎಂದು ಸೂಚಿಸಿದೆ. 

The High Court of Karnataka has dismissed a plea to drop a criminal case involving voyeurism in Shivamogga. The case pertains to a 2021 incident where a woman alleged that a man had taken photos and videos of her without consent and shared them with her family.