ಮಕ್ಕಳ ಕೈಗೆ ಬೈಕ್‌ ಕೊಡುವ ಮೊದಲು ಹುಷಾರ್!‌ ಪೋಷಕರೇ ತೀರ್ಥಹಳ್ಳಿಯಲ್ಲಿ ಹೀಗಾಯ್ತು!

Be careful before handing over the bike to your children! Parents, this is what happened in Thirthahalli!

ಮಕ್ಕಳ ಕೈಗೆ ಬೈಕ್‌ ಕೊಡುವ ಮೊದಲು ಹುಷಾರ್!‌ ಪೋಷಕರೇ ತೀರ್ಥಹಳ್ಳಿಯಲ್ಲಿ ಹೀಗಾಯ್ತು!
Thirthahalli court

SHIVAMOGGA | MALENADUTODAY NEWS | Jun 23, 2024  ಮಲೆನಾಡು ಟುಡೆ

ಹದಿನೆಂಟು ತುಂಬದ ಮಕ್ಕಳಿಗೆ ಬೈಕ್‌ ಚಲಾಯಿಸಲು ಕೊಡುವುದು ಅಪರಾಧ ಎಂಬುದು ಗೊತ್ತಿದ್ದರೂ ಕೆಲವು ಪೋಷಕರು ಏನಾಗುತ್ತೆ ಎಂಬಂತೆ ವರ್ತಿಸುತ್ತಾರೆ. ಅದರ ಪರಿಣಾಮ ಎಂಬಂತೆ ತೀರ್ಥಹಳ್ಳಿ ಕೋರ್ಟ್‌ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಬೈಕ್ ಚಲಾಯಿಸಲು ನೀಡಿದ ಬಾಲಕನ ತಂದೆಗೆ 25,000 ದಂಡ ಹಾಕಿದೆ. 

ಕಳೆದ 19-06-2024 ರಂದು ಪೊಲೀಸರು ವಾಹನ ತಪಾಸಣೆ ನಡೆಸ್ತಿದ್ದರು. ಈ ವೇಳೆ 17 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬ ಬೈಕ್‌ ಚಲಾಯಿಸಿಕೊಂಡು ಬರುವುದನ್ನ ಗಮನಿಸಿದ್ದಾರೆ. ಆತನನ್ನ ತಡೆದು , ವಾಹನದ ದಾಖಲಾತಿ ಪರಿಶೀಲನೆ ನಡೆಸಿದ ಪೊಲೀಸರು ಬಾಲಕನ ತಂದೆ  ವಿರುದ್ಧ ಲಘು ಪ್ರಕರಣವನ್ನು ದಾಖಲಿಸಿದ್ದರು. 

ಆ ಬಳಿಕ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದು, ದಿನಾಂಕಃ 21-06-2024 ರಂದು ಘನ ಪಿಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಥಹಳ್ಳಿಯ ಮಾನ್ಯ ನ್ಯಾಯಾಧೀಶರು ಅಪ್ರಾಪ್ತನ ತಂದೆಗೆ ರೂ 25,000/- ದಂಡ ವಿಧಿಸಿದ್ದಾರೆ. ಈ ಬಗ್ಗೆ ಪೊಲೀಸ್‌ ಇಲಾಖೆ ತನ್ನ ಪ್ರಕಟಣೆಯುಲ್ಲಿ ಪೂರ್ತಿ ವಿವರವನ್ನು ನೀಡಿದೆ 

ವಿಶೇಷ ಸೂಚನೆ (ಅಪ್ರಾಪ್ತರೊಬ್ಬರಿಗೆ ಸೇರಿದ ಪ್ರಕರಣವಾದ್ದರಿಂದ ವೈಯಕ್ತಿಕ ವಿವರಗಳನ್ನ ನೀಡಿಲ್ಲ ಮತ್ತು ಇಡೀ ವರದಿಯು ಪೊಲೀಸ್‌ ಇಲಾಖೆಯ ಪ್ರಕಟಣೆಗೆ ಸಂಬಂಧಿಸಿದ್ದಾಗಿದೆ)