ನಂದಿನಿ ಹಾಲಿನ ವಾಹನಕ್ಕೆ 25 ಸಾವಿರ ರೂಪಾಯಿ ಫೈನ್‌ | ಕಾರಣವೇನು ಗೊತ್ತಾ?

Nandini milk vehicle was fined Rs 25,000 by the Shivamogga Court

ನಂದಿನಿ ಹಾಲಿನ ವಾಹನಕ್ಕೆ 25 ಸಾವಿರ ರೂಪಾಯಿ ಫೈನ್‌ | ಕಾರಣವೇನು ಗೊತ್ತಾ?
Nandini milk vehicle

SHIVAMOGGA | MALENADUTODAY NEWS | Jun 23, 2024  ಮಲೆನಾಡು ಟುಡೆ

ನಂದಿನ ಹಾಲಿನ ವಾಹನವೊಂದಕ್ಕೆ ಶಿವಮೊಗ್ಗ ಕೋರ್ಟ್‌ ಬರೋಬ್ಬರಿ 25 ಸಾವಿರ ರೂಪಾಯಿ ದಂಡ ವಿಧಿಸಿದೆ.  ಪ್ರಕರಣದ ವಿವರ ಹೀಗಿದೆ. ದಿನಾಂಕ:- 20-06-2024 ರಂದು ಸಂಜೆ  ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಮೋಹನ್ ಎಎಸ್ಐ, ಹಾಗೂ  ಕಿರಣ್ ಸಿಪಿಸಿ ರವರು ಶಿವಮೊಗ್ಗ ನಗರದ ಎ ಎ ವೃತ್ತದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. 

ಈ ವೇಳೆ ನಂದಿನಿ ಹಾಲಿನ ವಾಹನದ ಚಾಲಕನು ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅವರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ವಾಹನಕ್ಕೆ Defective Number plate ಅಳವಡಿಸಿರುತ್ತಾರೆ ಮತ್ತು ವಾಹನ ಚಾಲನಾ ಪರವಾನಿಗೆ ಇಲ್ಲದ  17  ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನ ಚಲಾಯಿಸಲು ನೀಡಿರುವುದು ಕಂಡುಬಂದಿರುತ್ತದೆ. 

ಈ ಹಿನ್ನೆಲೆಯಲ್ಲಿ  ತಿರುಮಲೇಶ್, ಪಿಎಸ್ಐ, ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಶಿವಮೊಗ್ಗ ರವರು ನಂದಿನಿ ಹಾಲಿನ ವಾಹನದ ಮಾಲೀಕನಾದ ಧನುಷ್, 35 ವರ್ಷ, ಟಿಪ್ಪು ನಗರ ಶಿವಮೊಗ್ಗ ಈತನ  ವಿರುದ್ಧ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಶಿವಮೊಗ್ಗದಲ್ಲಿ ಲಘು ಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು. 

ಇದೀಗ ದಿನಾಂಕಃ 22-06-2024 ರಂದು ಘನ  4ನೇ ಎಸಿಜೆ ಮತ್ತು ಜೆಎಂಎಫ್.ಸಿ  ನ್ಯಾಯಾಲಯ ಶಿವಮೊಗ್ಗದ ಮಾನ್ಯ ನ್ಯಾಯಾಧೀಶರು ವಾಹನದ ಮಾಲೀಕನಾದ ಧನುಷ್ ನಿಗೆ ರೂ 25,500/- ದಂಡ ವಿಧಿಸಿದೆ

A Nandini milk vehicle was fined Rs 25,000 by the Shivamogga Court. 4th ACJ and JMFC Court in Shivamogga imposed a fine of Rs 25,500 on Dhanush.