ವಾದಿ-ಎ-ಹುದಾ ಎರಿಯಾದಲ್ಲಿ ಕೊಲೆ | ಲಷ್ಕರ್‌ ಮೊಹಲ್ಲಾ, ಇಲಿಯಾಸ್‌ ನಗರ ನಿವಾಸಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ | ಏನಿದು ಕೇಸ್

Two individuals, Mohammad Nakhi Ali and Mohammad Abu Swaleh, have been sentenced to life imprisonment by the Shivamogga 2nd Additional District and Sessions Court for the murder of Mohammad Jaidan

ವಾದಿ-ಎ-ಹುದಾ ಎರಿಯಾದಲ್ಲಿ ಕೊಲೆ | ಲಷ್ಕರ್‌ ಮೊಹಲ್ಲಾ, ಇಲಿಯಾಸ್‌ ನಗರ ನಿವಾಸಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ  | ಏನಿದು ಕೇಸ್
Shivamogga 2nd Additional District and Sessions Court

SHIVAMOGGA | MALENADUTODAY NEWS | Jun 25, 2024  ಮಲೆನಾಡು ಟುಡೆ

ಜಗಳದ ನಡುವೆ ಹೊಡೆದಾಟ ನಡೆದು ಕೊಲೆ ಮಾಡಿದ ಪ್ರಕರಣ ಸಂಬಂಧ ಶಿವಮೊಗ್ಗ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಬ್ಬಿರಿಗೆ ಜೀವಾವಧಿ ಶಿಕ್ಷೆ ನೀಡಿದೆ. ಶಿಕ್ಷೆಗೊಳಗಾದವರು  1) ಮಹಮ್ಮದ್ ನಖಿ ಅಲಿ @ ನಖಿ @ ಮಣಿ, 21  ವರ್ಷ, ಲಕ್ಷರ್ ಮೊಹಲ್ಲಾ, ಶಿವಮೊಗ್ಗ ಟೌನ್, 2) ಮಹಮ್ಮದ್ ಅಬು ಸ್ವಲೇಹ @ ಅಬು @ ಸೋನು, 21  ವರ್ಷ, ಇಲಿಯಾಸ್ ನಗರ, ಶಿವಮೊಗ್ಗ ಟೌನ್

ಪ್ರಕರಣದ ವಿವರ ಹೀಗಿದೆ ಶಿವಮೊಗ್ಗ ಟೌನ್ ವಾದಿ-ಎ-ಹುದಾ ವಾಸಿ ಮಹಮ್ಮದ್ ಜೈದಾನ್ ಮತ್ತು ಶಿವಮೊಗ್ಗ ಟೌನ್ ಲಕ್ಷರ್ ಮೊಹಲ್ಲಾದ ವಾಸಿ ನಕೀ ಅಲಿ ಇಬ್ಬರ ನಡುವೆ  ಯಾವುದೋ ವಿಚಾರವಾಗಿ ಹಿಂದೆ ಜಗಳವಾಗಿತ್ತು. ಈ ವಿಚಾರಕ್ಕೆ ದಿನಾಂಕಃ 29-10-2021  ರಂದು ರಾತ್ರಿ ಶಿವಮೊಗ್ಗ ಟೌನ್ ವಾದಿ-ಎ-ಹುದಾ ಹತ್ತಿರ ನಕೀ ಅಲಿ ಮತ್ತು ಮಹಮ್ಮದ್ ಅಬು ಸ್ವಲೇಹ ಇಬ್ಬರೂ ಸೇರಿಕೊಂಡು ಮಹಮ್ಮದ್ ಜೈದಾನ್ ನ ಮೇಲೆ ಹರಿತವಾದ ಆಯುಧಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಪೊರಿಣಾಮ ಜೈದಾನ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಸಂಬಂಧ ಮೃತನ ತಂದೆ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0353/2021  ಕಲಂ 302  ಸಹಿತ 34  ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು. 

ಕೇಸ್‌  ಕುರಿತಾಗಿ ಆಗಿನ ತನಿಖಾಧಿಕಾರಿಗಳಾದ ದೀಪಕ್ ಎಂ.ಎಸ್,  ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರು  ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಕೋರ್ಟ್‌ನಲ್ಲಿ  ಸರ್ಕಾರದ ಪರವಾಗಿ ಪಿ. ಓ. ಪುಷ್ಪಾ, ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದರು. 

ಇದೀಗ  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ಮುಗಿದಿದೆ. ಮಾನ್ಯ ನ್ಯಾಯಾಧಿಶರಾದ ಪಲ್ಲವಿ  ಬಿ.ಆರ್ ರವರು  ದಿನಾಂಕ:-24-06-2024 ರಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 50,500/- ದಂಡ ವಿಧಿಸಿದ್ದು, ಮೃತನ ತಂದೆ ಮತ್ತು ತಾಯಿ ಇಬ್ಬರಿಗೂ ದಂಡದ ಮೊತ್ತದಲ್ಲಿ ತಲಾ 40,000/- ಮತ್ತು ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಆದೇಶಿಸಿದ್ದಾರೆ. ಈ ಕುರಿತಾಗಿ ಪೊಲೀಸ್‌ ಇಲಾಖೆ ನೀಡಿದ ಪ್ರಕಟಣೆಯ ಪೂರ್ಣ ವಿವರವಷ್ಟೆ ಇದಾಗಿದೆ. 

Two individuals, Mohammad Nakhi Ali and Mohammad Abu Swaleh, have been sentenced to life imprisonment by the Shivamogga 2nd Additional District and Sessions Court for the murder of Mohammad Jaidan