ಹೆಂಡತಿ ಕೊಂದ ಗಂಡನಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಂತದ್ದು ಗೊತ್ತಾ? ಭದ್ರಾವತಿ ಕೇಸ್ 0101/2020 ರಲ್ಲಿ ಏನಾಯ್ತು ಓದಿ

Do you know what the court has awarded to a man who killed his wife? Bhadravathi case Read what happened in 0101/2020

ಹೆಂಡತಿ ಕೊಂದ ಗಂಡನಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಂತದ್ದು ಗೊತ್ತಾ? ಭದ್ರಾವತಿ ಕೇಸ್ 0101/2020 ರಲ್ಲಿ ಏನಾಯ್ತು ಓದಿ

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS

ಶಿವಮೊಗ್ಗ / ಹೆಂಡತಿಯನ್ನು ಕೊಂದ ಆರೋಪಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ಭದ್ರಾವತಿ  ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆಯಾಗಿದೆ. 

ಪ್ರಕರಣವೇನು?

ದಿನಾಂಕಃ 03-05-2020   ರಂದು ಹೊಳೆಹೊನ್ನೂರು ಟೌನ್ ನ ನಿವಾಸಿ ಗಣೇಶ್  ತನ್ನ ಪತ್ನಿ ಗೀತಾ,  ತಲೆಗೆ  ಹೊಡುದ ಕೊಲೆಮಾಡಿದ್ದ, ಈ ಸಂಬಂಧ ಗೀತಾರ ಸಹೋದರಿ ದೂರು ನೀಡಿದ್ದರು.   ಹೊಳೆಹೊನ್ನೂರು ಪೊಲೀಸ್ ಠಾಣೆ ಗುನ್ನೆ ಸಂಖ್ಯೆ  0101/2020  ಕಲಂ 302 ಐಪಿಸಿ ಅಡಿಯಲ್ಲಿ ಕೇಸ್ ಆಗಿತ್ತು. 

ಈ ಸಂಬಂಧ ಅಂದಿನ ತನಿಖಾಧಿಕಾರಿ ಮಂಜುನಾಥ್ ಇ. ಒ., ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಈ ಸಂಬಂಧ ಸರ್ಕಾರಿ ಅಭಿಯೋಜಕರು ರತ್ನಮ್ಮ,  ಪ್ರಕರಣದಲ್ಲಿ ವಾದ ಮಂಡಿಸಿದ್ದರು. ಇದೀಗ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ಭದ್ರಾವತಿ  ನ್ಯಾಯಾಲಯ ತೀರ್ಪು ನೀಡಿದ್ದು ಆರೋಪಿ ಗಣೇಶ್​ಗೆ  ಜಿವಾವಧಿ ಶಿಕ್ಷೆ ಮತ್ತು 50,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 03 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 


ತಿರುಪತಿ-ಚೆನ್ನೈಗೆ ಹೋಗಲು ಇನ್ನಷ್ಟು ಅನುಕೂಲ! ಶಿವಮೊಗ್ಗ- ಎಂಜಿಆರ್​ ಚನ್ನೈ ಸೆಂಟ್ರಲ್​ ಟ್ರೈನ್​ಗೆ ಮತ್ತಷ್ಟು ಅವಕಾಶ! ಡಿಟೇಲ್ಸ್ 

ಶಿವಮೊಗ್ಗ ರೈಲ್ವೆ ನಿಲ್ದಾಣ (shivamogga railway station (SMET))ದಿಂದ ಸಂಚರಿಸುವ 06223/Shivamogga Town - MGR Chennai Central Special ರೈಲು ಹಾಗೂ 06224/MGR Chennai Central - Shivamogga Town Special ಟ್ರೈನ್​ ಓಡಾಟವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. 

ಕಳೆದ ಜೂನ್ 27 ಕ್ಕೆ ಈ ರೈಲು ಓಡಾಟದ ಅವಧಿ ಮುಕ್ತಾಯಗೊಂಡಿತ್ತು. ಇದೀಗ ರೈಲು ಸಂಚಾರದ ಅವಧಿಯನ್ನು ಮುಂದಿನ ಸೆಪ್ಟೆಂಬರ್ 26 ರವರೆಗೂ ಮುಂದುವರಿಸಲಾಗಿದೆ. ಆಂಧ್ರ ಹಾಗೂ ತಮಿಳುನಾಡಿನ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಟ್ರೈನ್ MGR Chennai Ctrl ,ಅರಕ್ಕೋಣಂ ಜೆಎನ್, ರೇಣಿಗುಂಟಾ ಜೆಎನ್, ರಜಂಪೇಟಾ, ಕಡಪ, ಯೆರ್ರಗುಂಟಾ ಜೆಎನ್,ತಾಡಿಪತ್ರಿ,ಗೂಟಿ ಜಂಕ್ಷನ್​, ಗುಂತಕಲ್ ಜಂಕ್ಷನ್, ಬಳ್ಳಾರಿ ಜಂಕ್ಷನ್, ರಾಯದುರ್ಗ ಜಂಕ್ಷನ್, ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಜಾಜೂರು ಜಂಕ್ಷನ್, ಹೊಸದುರ್ಗ ರಸ್ತೆ, ಅಜ್ಜಂಪುರ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ  ಮೂಲಕ  ಶಿವಮೊಗ್ಗ ನಗರ ತಲುಪುತ್ತೆ. ಇದೇ ರೀತಿಯಲ್ಲಿ ಶಿವಮೊಗ್ಗದಿಂಧ ಎಂಜಿಆರ್ ಚೆನ್ನೈ ಸೆಂಟ್ರಲ್​ಗೆ ತೆರಳುತ್ತದೆ.