KARNATAKA NEWS/ ONLINE / Malenadu today/ Jul 2, 2023 SHIVAMOGGA NEWS
ಶಿವಮೊಗ್ಗ ರೈಲ್ವೆ ನಿಲ್ದಾಣ (shivamogga railway station (SMET))ದಿಂದ ಸಂಚರಿಸುವ 06223/Shivamogga Town – MGR Chennai Central Special ರೈಲು ಹಾಗೂ 06224/MGR Chennai Central – Shivamogga Town Special ಟ್ರೈನ್ ಓಡಾಟವನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ.
ಕಳೆದ ಜೂನ್ 27 ಕ್ಕೆ ಈ ರೈಲು ಓಡಾಟದ ಅವಧಿ ಮುಕ್ತಾಯಗೊಂಡಿತ್ತು. ಇದೀಗ ರೈಲು ಸಂಚಾರದ ಅವಧಿಯನ್ನು ಮುಂದಿನ ಸೆಪ್ಟೆಂಬರ್ 26 ರವರೆಗೂ ಮುಂದುವರಿಸಲಾಗಿದೆ. ಆಂಧ್ರ ಹಾಗೂ ತಮಿಳುನಾಡಿನ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಈ ಟ್ರೈನ್ MGR Chennai Ctrl ,ಅರಕ್ಕೋಣಂ ಜೆಎನ್, ರೇಣಿಗುಂಟಾ ಜೆಎನ್, ರಜಂಪೇಟಾ, ಕಡಪ, ಯೆರ್ರಗುಂಟಾ ಜೆಎನ್,ತಾಡಿಪತ್ರಿ,ಗೂಟಿ ಜಂಕ್ಷನ್, ಗುಂತಕಲ್ ಜಂಕ್ಷನ್, ಬಳ್ಳಾರಿ ಜಂಕ್ಷನ್, ರಾಯದುರ್ಗ ಜಂಕ್ಷನ್, ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಜಾಜೂರು ಜಂಕ್ಷನ್, ಹೊಸದುರ್ಗ ರಸ್ತೆ, ಅಜ್ಜಂಪುರ, ಬೀರೂರು ಜಂಕ್ಷನ್, ತರೀಕೆರೆ, ಭದ್ರಾವತಿ ಮೂಲಕ ಶಿವಮೊಗ್ಗ ನಗರ ತಲುಪುತ್ತೆ. ಇದೇ ರೀತಿಯಲ್ಲಿ ಶಿವಮೊಗ್ಗದಿಂಧ ಎಂಜಿಆರ್ ಚೆನ್ನೈ ಸೆಂಟ್ರಲ್ಗೆ ತೆರಳುತ್ತದೆ.




