ಬೆಂಗಳೂರು | ಸಿನಿ ಸ್ಟೈಲ್‌ನಲ್ಲಿ ನಕಲಿ ದಾಖಲೆ ಹಿಡಿದು ಎಸ್‌ಪಿ ಕಚೇರಿಯನ್ನ ಕಬಳಿಸಲು ಯತ್ನ | ಎನಾಯ್ತು ಓದಿ
A gang in Bengaluru created fake documents and attempted to seize the Bengaluru Rural SP office premises. Three accused have been arrested after a complaint was filed at the Highgrounds police station.
SHIVAMOGGA | MALENADUTODAY NEWS | Jun 7, 2024 ಮಲೆನಾಡು ಟುಡೆ
ಅಕ್ರಮಗಳು ಎಷ್ಟೊಂದು ಪೀಕ್‌ಗೆ ಹೋಗಿದೆ ಎಂದರೆ, ಇಲ್ಲೊಂದು ಗ್ಯಾಂಗ್ ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ಕಚೇರಿ ಜಾಗವನ್ನೆ ಕಬಳಿಸುವ ಹುನ್ನಾರವೊಂದು ಬೆಳಕಿಗೆ ಬಂದಿದೆ. ಹೈಗೌಂಡ್ಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆಯಷ್ಟೆ ಅಲ್ಲದೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ನಕಲಿ ದಾಖಲಾತಿ ಸೃಷ್ಟಿಸಿ ಎಸ್ಪಿ ಕಚೇರಿ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿದ ಆರೋಪಿಗಳು, ಅಕ್ರಮವಾಗಿ ವಿಡಿಯೋ ಮಾಡಿದ್ದಲ್ಲದೆ ಇದನ್ನು ಪ್ರಶ್ನಿಸಿದ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ವೈರ್‌ಲೆಸ್ ಜಿಲ್ಲಾ ನಿಯಂತ್ರಣ ಕೊಠಡಿ ಇನ್‌ಸ್ಪೆಕ್ಟರ್ ಹಾಗೂ ಎಸ್ಟೇಟ್ ಆಫೀಸರ್ ಸಂತೋಷ್ ಗೌಡ ದೂರು ನೀಡಿದ್ದರು.
ಆರೋಪಿಗಳು ಅನಧಿಕೃತ ಚಿತ್ರೀಕರಣ ಮಾಡುತ್ತಿದ್ದ ವೇಳೆ ಪ್ರಶ್ನಿಸಿದಾಗ ಪ್ರಶ್ನೆ ಮಾಡಿದ ಆರೋಪಿಗಳು, ಈ ಸ್ವತ್ತಿನ ದಾಖಲೆಗಳು ನಮ್ಮ ಬಳಿ ಇವೆ. ಅಲ್ಲದೆ ಈ ಸ್ವತ್ತಿನ ಮಾಲೀಕರಾದ ಗಣಪತಿ ಮತ್ತು ಜಹೀರ್ ಎಂಬುವವರು ನಮಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅವರನ್ನ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.