ಬೆಂಗಳೂರಿಗೆ ಶಿಫ್ಟ್‌ ಆದ ಶಿವಮೊಗ್ಗ ರಾಜಕಾರಣ | ಕುಮಾರ್‌ ಬಂಗಾರಪ್ಪರವರ ಮನೆಗೆ ಶಿವಣ್ಣ ಅಭಿಮಾನಿಗಳ ಮುತ್ತಿಗೆ

Shivarajkumar's fans gheraoed Kumar Bangarappa's house in Sadashivanagar, Bengaluru. Shivanna's fans are angry with Kumar Bangarappa for his comments on Shivanna

ಬೆಂಗಳೂರಿಗೆ ಶಿಫ್ಟ್‌ ಆದ ಶಿವಮೊಗ್ಗ ರಾಜಕಾರಣ | ಕುಮಾರ್‌ ಬಂಗಾರಪ್ಪರವರ ಮನೆಗೆ ಶಿವಣ್ಣ ಅಭಿಮಾನಿಗಳ ಮುತ್ತಿಗೆ
Shivamogga politics , Bangalore,Geetha Shivarajkumar, Congress party in Shivamogga, Kumar Bangarappa, Madhu Bangarappa ,Shiva Rajkumar fans, Shiva Rajkumar.

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆ 

ಶಿವಮೊಗ್ಗ ರಾಜಕಾರಣ ಇದೀಗ ಬೆಂಗಳೂರು ನಲ್ಲಿ ಪ್ರತಿಧ್ವನಿಸಲು ಆರಂಭವಾಗಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಗೀತಾ ಶಿವರಾಜಕುಮಾರ್‌ ಸೋತಿದ್ದರು. ಅದರ ಬೆನ್ನಲ್ಲೆ ಕುಮಾರ್‌ ಬಂಗಾರಪ್ಪ ತಮ್ಮ ಕುಟುಂಬದ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೀತಾ ಸೋತ ಬೆನ್ನಲ್ಲೆ ಮಧು ಬಂಗಾರಪ್ಪ ಮೌನಕ್ಕೆ ಜಾರಿದರೆ, ಕುಮಾರ್‌ ಬಂಗಾರಪ್ಪ ಚುನಾವಣೆ ವೇಳೆ ಆಡಿದ ಮಾತಿಗೆ ಪ್ರತಿಯಾಗಿ ಖಾರದ ಮಾತುಗಳಲ್ಲಿ ಉತ್ತರಿಸಿದ್ದರು. ಅಲ್ಲದೆ ಈ ವೇಳೆ ನಟ ಶಿವರಾಜ್‌ ಕುಮಾರ್‌ ಬಗ್ಗೆ ಆಡಿದ್ದರು ಎನ್ನಲಾದ ಮಾತಿಗೆ ಇದೀಗ ಶಿವಣ್ಣರ ಅಭಿಮಾನಿಗಳು ಸಿಟ್ಟಾಗಿದ್ದಾರೆ. 

ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ಸದಾಶಿವ ನಗರದಲ್ಲಿರುವ ಕುಮಾರ್‌ ಬಂಗಾರಪ್ಪನವರ ನಿವಾಸಕ್ಕೆ ಶಿವಣ್ಣರ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಪೊಲೀಸರ ನಡುವೆ ಜಟಾಪಟಿಯು ಆಗಿದೆ. ಕುಮಾರ್‌ ಬಂಗಾರಪ್ಪನವರು ಆಡಿದ ಮಾತಿಗೆ ಶಿವಣ್ಣರವರ ಕ್ಷಮೆ ಕೋರಬೇಕು ಎಂದು ಹ್ಯಾಟ್ರಿಕ್‌ ಹೀರೋ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಇನ್ನೊಂದು ಇದೊಂದು ರಾಜಕಾರಣದ ಪ್ರತೀಕಾರದ ಕ್ರಮ ಎಂದು ಕುಮಾರ್‌ ಬಂಗಾರಪ್ಪ ಬೆಂಬಲಿಗರು ಆರೋಪಿಸಿದ್ದರು. ಈ ಮುತ್ತಿಗೆ ವಿರುದ್ಧ ಧನ್ವಿ ಎತ್ತುವುದಾಗಿ ಹೇಳುತ್ತಿದ್ದಾರೆ. 

Shivarajkumar's fans gheraoed Kumar Bangarappa's house in Sadashivanagar, Bengaluru. Shivanna's fans are angry with Kumar Bangarappa for his comments on Shivanna Shivamogga politics ,  Bangalore,Geetha Shivarajkumar, Congress party in Shivamogga,  Kumar Bangarappa, Madhu Bangarappa ,Shiva Rajkumar fans, Shiva Rajkumar.