ಸಾರ್ವಜನಿಕರ ಗಮನಕ್ಕೆ ಮಾರ್ಚ್​ 5 -7 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ!

There will be no electricity in these parts of Shivamogga on March 5-7

ಸಾರ್ವಜನಿಕರ ಗಮನಕ್ಕೆ  ಮಾರ್ಚ್​ 5 -7 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ!
ಸಾರ್ವಜನಿಕರ ಗಮನಕ್ಕೆ ಮಾರ್ಚ್​ 5 -7 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ!

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ನಗರ ಉಪವಿಭಾಗ-2 ಮಂಡ್ಲಿ ಭಾಗದಲ್ಲಿ  ವ್ಯಾಪ್ತಿಯ ಘಟಕ-5 ಮತ್ತು 6 ರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಇರುವ ಕಾರಣ ದಿನಾಂಕ: 05/03/2023 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಂಡ್ಲಿ ಕೈಗಾರಿಕಾ ಪ್ರದೇಶ, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವ ನಗರ, ಮಂಡ್ಲಿ ವೃತ್ತ, ಶಂಕರ ಕಣ್ಣಿನ ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ, ಶಾರದ ನಗರ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್‍ಮಿಲ್, ಬೆನಕೇಶ್ವರ ರೈಸ್‍ಮಿಲ್, ಸವಾಯಿ ಪಾಳ್ಯ, ಕರುಬರ ಪಾಳ್ಯ, ಇಲಿಯಾಜ್ ನಗರ 1ನೇ ಕ್ರಾಸ್‍ನಿಂದ 4ನೇ ಕ್ರಾಸ್, 1000 ಅಡಿ ರಸ್ತೆ, ಎಫ್-05 ಗಾಜನೂರು ಗ್ರಾಮಾಂತರ ಪ್ರದೇಶ, ಎಫ್-08 ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಎಫ್-18 ಹೊಸಳ್ಳಿ, ಎಫ್-06 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಎಫ್-17 ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್ ಹಾಗೂ ಹನುಂತಾಪುರ, ಶರಾವತಿ ನಗರ, ಶಾರದ ಕಾಲೋನಿ ಸುತ್ತಮುತ್ತಲಿನ ಐಪಿ ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

READ | ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್​! ಸೈಬರ್​ ಕ್ರೈಂ ಅಲರ್ಟ್!

ನಾಳೆ ಈ ಭಾಗಗಳಲ್ಲಿ ಕರೆಂಟ್ ಇರೋದಿಲ್ಲ

ಶಿವಮೊಗ್ಗ ಮೆಸ್ಕಾಂ ಮಂಡ್ಲಿ ವಿವಿ ಕೇಂದ್ರದ ಊರಗಡೂರು ಫೀಡರ್-07 ರಲ್ಲಿ ಕಂಬ ಸ್ಥಳಾಂತರ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ಮಾರ್ಚ್ 05 ರಂದು  ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಿಂಗಪ್ಪ ಲೇಔಟ್, ಸೂಳೆಬೈಲು, ಊರಗಡೂರು, ಮಳಲಿಕೊಪ್ಪ, ಇಂದಿರಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

ಮಾರ್ಚ್​ 7 ರಂದು ವಿದ್ಯುತ್ ಇರೋದಿಲ್ಲ

ಶಿವಮೊಗ್ಗ ಮೆಸ್ಕಾಂ ನಉವಿ-01 ದಲ್ಲಿ ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೀಡರ್-3 ರ ವ್ಯಾಪ್ತಿಯಲ್ಲಿ ಮಾರ್ಚ್ 07 ರಂದು  ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯಾನಗರ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ವೆಂಕಟೇಶನಗರ  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಯ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

READ |ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!

ಅಗ್ನಿವೀರ್ ನೇಮಕಾತಿಗೆ ನೋಂದಣಿ ಆರಂಭ

2023-24 ನೇ ಸಾಲಿಗೆ ಭಾರತ ಸರ್ಕಾರವು ಅಗ್ನಿವೀರ್ ನೇಮಕಾತಿ ಯೋಜನೆಯಡಿ ಸಶಸ್ತ್ರ ಪಡೆಗೆ ನೇಮಕಾತಿ ಮಾಡಿಕೊಳ್ಳಲು ಆನ್‍ಲೈನ್ ನೋಂದಣಿಯನ್ನು ಆರಂಭಿಸಿದ್ದು, ಮಾರ್ಚ್ 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಅಗ್ನಿವೀರ್ ನೇಮಕಾತಿಯ ಪರೀಕ್ಷೆಗಳು ಏಪ್ರಿಲ್ 17 ರಿಂದ ಆರಂಭವಾಗಲಿದ್ದು ಫೇಸ್-1 ರಲ್ಲಿ ಆನ್‍ಲೈನ್ ಕಂಪ್ಯೂಟರ್ ಆಧಾರಿತ ಸಾಮಾನ್ಯ ಪ್ರವೇಶ ಪರೀಕ್ಷೆ(ಆನ್‍ಲೈನ್ ಸಿಇಇ) ಮತ್ತು ಫೇಸ್-2 ರಲ್ಲಿ ನೇಮಕಾತಿ ರ್ಯಾಲಿ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಆನ್‍ಲೈನ್ ನೋಂದಣಿ ಮತ್ತು ಪರೀಕ್ಷೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ www.joinindianarmy.nic.in ಗೆ ಭೇಟಿ ನೀಡಿ ಪಡೆದುಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.

ಸಮುದಾಯ ಅಭಿವೃದ್ದಿ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆಯು 'ಯುವ ಸಂವಾದ ಇಂಡಿಯಾ@ 2047 ' ಎನ್ನುವ ಹೊಸ ಕಾರ್ಯಕ್ರಮವನ್ನು ಹೊರ ತಂದಿದ್ದು,  ಈ ಕಾರ್ಯಕ್ರಮವನ್ನು ಸಮುದಾಯ ಆಧಾರಿತ ಸಂಸ್ಥೆಗಳ ಸಹಯೋಗದಲ್ಲಿ ಭಾರತದ ಎಲ್ಲಾ ಜಿಲ್ಲೆಗಳಲ್ಲಿ  ಏ.01 ರಿಂದ ಮೇ.31 ರವರೆಗೆ ಆಚರಿಸಲು ನಿರ್ಧರಿಸಿದೆ.

ಪ್ರಧಾನ ಮಂತ್ರಿಗಳ ಮಾರ್ಗದರ್ಶನ ಮತ್ತು ಸ್ಫೂರ್ತಿಯಿಂದ ಭಾರತ 75ನೇ ವರ್ಷದ ಸ್ಮರಣಾರ್ಥವಾಗಿ 'ಅಜಾದೀ ಕಾ ಅಮೃತ ಮಹೋತ್ಸವ' ವನ್ನು ಆಚರಿಸುತ್ತಿದೆ. ಭಾರತದ ಇತಿಹಾಸದಲ್ಲಿ ಖ್ಯಾತಿ ಪಡೆದ ಗಣ್ಯರ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನದೊಂದಿಗೆ, ನರೇಂದ್ರ ಮೋದಿಜಿ ರವರು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ 'ಪಂಚ ಪ್ರಾಣ್' ಎನ್ನುವ ಮಂತ್ರವನ್ನು ಘೋಷಿಸಿದ್ದಾರೆ. ಅಮೃತ ಕಾಲ ಇಂಡಿಯಾ@ 2047 ಎನ್ನುವ ದೃಷ್ಠಿಕೋನವನ್ನು ಜನತೆಯ ಮುಂದಿಟ್ಟಿದ್ದಾರೆ.ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಸಮುದಾಯ ಅಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಆಚರಿಸಲು ಯೋಜನೆ ರೂಪಿಸಿದ್ದು, ಜಿಲ್ಲಾ ನೆಹರು ಯುವ ಕೇಂದ್ರಗಳು ಕೈಜೋಡಿಸಿ ದೇಶದ ಭವಿಷ್ಯದ ಬಗ್ಗೆ ಸಕರಾತ್ಮಕವಾಗಿ ಚಿಂತಿಸಿ, ಪ್ರಧಾನ ಮಂತ್ರಿಗಳ ಆಶಯದಂತೆ ಪಂಚ ಪ್ರಾಣ್ ಯೋಜನೆಯನ್ನು ವ್ಯವಸ್ಥಿತ ಗುರಿಯೊಂದಿಗೆ ಸಾಧಿಸಬೇಕಿದೆ.

ಸುಮಾರು 500 ಕ್ಕೂ ಹೆಚ್ಚು ಯುವಜನರೊಡನೆ ಪ್ರಶ್ನೋತ್ತರ ಮೂಲಕ ಸಂವಾದ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿದೆ. ಮತ್ತು ಪ್ರತಿ ಜಿಲ್ಲೆಯಲ್ಲಿ ಸಮುದಾಯ ಅಭಿವೃದ್ದಿ ಸಂಸ್ಥೆಗಳ ಮೂಲಕ ಮೂರು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಪ್ರತಿ ಕಾರ್ಯಕ್ರಮಕ್ಕೆ ರೂ.20 ಸಾವಿರ ಅನುದಾನ ನಿಗದಿಪಡಿಸಲಾಗಿದೆ. ಈ ಅನುದಾನವನ್ನು ಸಮುದಾಯ ಅಭಿವೃದ್ದಿ ಸಂಸ್ಥೆಗಳಿಗೆ ಕೊಡಲಾಗುವುದು.ಆದ್ದರಿಂದ ಜಿಲ್ಲೆಯ ಸಮುದಾಯ ಅಭಿವೃದ್ದಿ ಸಂಸ್ಥೆಗಳು ಈ ಯುವ ಸಂವಾದ ಕಾರ್ಯಕ್ರಮ ನಡೆಸಲು ಮುಂದೆ ಬರಬಹುದು. ಅರ್ಹ 03 ಸಂಸ್ಥೆಗಳನ್ನು ಜಿಲ್ಲೆಯಿಂದ ಆಯ್ಕೆ ಮಾಡಲಾಗುವುದು. ನಿಗದಿತ ಅರ್ಜಿ ನಮೂನೆ ಜಿಲ್ಲಾ ನೆಹರು ಯುವ ಕೇಂದ್ರ ಶಿವಮೊಗ್ಗ ಇಲ್ಲಿ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 12 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಬಾಲರಾಜ್ ಅರಸ್ ರಸ್ತೆ ಶಿವಮೊಗ್ಗ, ದೂ.ಸಂ: 08182-220883, ಮೊ.ಸಂ: 9961332968 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!