ಕಾಡಲ್ಲಿ ಅರಣ್ಯ ಸಿಬ್ಬಂದಿಗಳಿಗೆ ಕಾಣಿಸಿತ್ತು ಮಣ್ಣಿನ ದಿಬ್ಬ. ಅದರಡಿಯಲ್ಲಿತ್ತು ಕೊಳೆತ ಶವ.. JP FLASHBACK

Here's an exciting crime story uncovered by the Soraba police, who investigated a decomposed body found in the forest JP FLASHBACK

ಕಾಡಲ್ಲಿ ಅರಣ್ಯ ಸಿಬ್ಬಂದಿಗಳಿಗೆ ಕಾಣಿಸಿತ್ತು ಮಣ್ಣಿನ ದಿಬ್ಬ. ಅದರಡಿಯಲ್ಲಿತ್ತು ಕೊಳೆತ ಶವ.. JP FLASHBACK
the Soraba police,

MALENADUTODAY.COM  |SHIVAMOGGA| #KANNADANEWSWEB

ಅದು ಸೊರಬ ಪೊಲೀಸರಿಗೆ ಸವಾಲಾಗಿದ್ದ ಕೇಸು.ಕಾಡಿನಲ್ಲಿ ಸಿಕ್ಕ ಕೊಳೆತ ಶವ ಯಾವುದು.ಯಾರು ಕೊಲೆ ಮಾಡಿದ್ದಾರೆ ಎಂಬ ಹತ್ತಾರು ಪ್ರಶ್ನೆಗಳನ್ನು ಪೊಲೀಸರನ್ನು ಪೇಚಿಗೆ ಸಿಲುಕಿಸಿತ್ತು. ಮೃತದೇಹದ ಅವಶೇಷಗಳನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ದಾರಿಯುದ್ದಕ್ಕೂ ಆಘಾತ  ಕಾದಿತ್ತು.  ಅರಣ್ಯಾಧಿಕಾರಿಗಳು ಕಾಡಿನ ಆ ಜಾಗದಲ್ಲಿ  ಗಸ್ತು ತಿರುಗದೇ ಹೋಗಿದ್ರೆ  ಈ ಪ್ರಕರಣ ಬೆಳಕಿಗೆ ಬರ್ತಿರ್ಲಿಲ್ಲ. ಅಂದು ನಡೆದ ರೋಚಕ ಕೊಲೆ ರಹಸ್ಯ ಭೇದಿಸಿದ ಕಥೆಯೊಂದನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ.. 

ಸ್ನೇಹಿತರೇ, ಪರಸ್ಪರ ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಪ್ರೇಮಿಗಳ ಕಥೆಯಿದು.. ಈ ಸ್ಟೋರಿಯಲ್ಲಿ  ಪ್ರೇಯಸಿ ನಿಗೂಢವಾಗಿ ಕಾಡಿನಲ್ಲಿ ಸಾವನ್ನಪ್ಪುತ್ತಾಳೆ ಪತ್ನಿ ಕಳೆದುಕೊಂಡ ಗಂಡ ನ್ಯಾಯಕ್ಕಾಗಿ ಅವಲೊತ್ತುಕೊಳ್ಳುತ್ತಾನೆ. ಕಾಡಿನಲ್ಲಿ ದೊರೆತ ಸಾಕ್ಷ್ಯಾಧಾರಗಳು ಕೊನೆಗೆ ಯಾರನ್ನು ಬೊಟ್ಟು ಮಾಡಿ ತೋರಿಸುತ್ತೇ ಎನ್ನೋದೇ ಈ ಸ್ಟೋರಿಯ ಥ್ರಿಲ್.

ಕಾಡಿನಲ್ಲಿ ಗಸ್ತಿನಲ್ಲಿದ್ದ ಅರಣ್ಯಾ ಸಿಬ್ಬಂದಿಗಳಿಗೆ ಕಂಡಿದ್ದು, ಮರದ ದಿಣ್ಣೆಯ ದಿಬ್ಬ.

7.7.13 ರಂದು ಸೊರಬ ತಾಲೂಕಿನ ಸುಂಕದಗುಂಡಿಯ ಜಂಬೆನಳ್ಳಿ ಕಾಡಿನಲ್ಲಿ ಅರಣ್ಯ ಸಿಬ್ಬಂದಿ ಅನಿಲ್ ಕುಮಾರ್ ಮತ್ತು ಮೌನೇಶ್ ಕಾಡುಗಳ್ಳರ ಹಂಟಿಂಗ್ ನಲ್ಲಿರುತ್ತಾರೆ. ಜಂಬೇನಹಳ್ಳಿ ಕಾಡಿನ ಜೀಪ್ ರೂಟ್ ನಲ್ಲಿ ವಾಹನವೊಂದರ ಚಕ್ರದ ಗುರುತು, ಮಣ್ಣಿನ ರೋಡ್ ನಲ್ಲಿ ಕಂಡಾಗ ಅನುಮಾನಗೊಂಡ, ಅನಿಲ್ ಕುಮಾರ್ ಮತ್ತು ಮೌನೇಶ್, ಟೈರ್ ಗುರುತಿನ ಜಾಡು ಹಿಡಿದು ಕಾಡಿನ ದಾರಿಯಲ್ಲಿ ಸಾಗ್ತಾರೆ. ಕಾಡಿನಲ್ಲಿ ಬಹುದೂರ ಸಾಗಿದಾಗ ಇವರಿಗೆ ಎಲೆ ಮುಚ್ಚಿದ್ದ ದಿಬ್ಬ ಕಣ್ಣಿಗೆ ಬೀಳುತ್ತೆ. ಕಾಡುಗಳ್ಳರು ಮರದ ದಿಮ್ಮೆಗಳನ್ನು ಗುಂಡಿಯಲ್ಲಿ ಹೂತಿರಬೇಕೆಂಬ ಶಂಕೆಯಲ್ಲಿ ಮೌನೇಶ್ ಮತ್ತು ಇತರೆ ಸಿಬ್ಬಂದಿಗಳು ಗುಂಡಿ ಅಗೆಯುತ್ತಾರೆ. ಆದರೆ ಗುಂಡಿಯಲ್ಲಿ ಮರದ ತುಂಡುಗಳ ಬದಲು ಕೊಳೆತ ಶವ ಕಾಣಿಸುತ್ತೆ. ನಂತ್ರ ಅರಣ್ಯಾಧಿಕಾರಿಗಳು ಸೊರಬ ಪೊಲೀಸರಿಗೆ ಮಾಹಿತಿ ಮುಟ್ಟಿಸುತ್ತಾರೆ.

Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ? JP EXCLUSIVE

ಅರಣ್ಯ ಸಿಬ್ಬಂದಿಗಳ ಮಾಹಿತಿಂಯಂತೆ ಸೊರಬ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಸಿಬ್ಬಂದಿಗಳ ಜೊತೆ ಜಂಬೇನಹಳ್ಳಿ ಕಾಡಿನತ್ತ ಪಯಣ ಬೆಳೆಸ್ತಾರೆ. ದುರ್ಗಮ ಕಾಡಿನ ಮದ್ಯೆ ಗುಂಡಿಯಲ್ಲಿ ಕಂಡ ಶವವನ್ನು ಹೊರತಗೆಯುತ್ತಾರೆ. ಶವ ಕೊಳೆತು, ಅಸ್ಥಿಪಂಜರ ಮಾತ್ರ ಗೋಚರಿಸುತ್ತೆ. ಸ್ಥಳದಲ್ಲಿ ಒಡವೆ ಬಂಗಾರ,ಬಟ್ಟೆ ಪತ್ತೆಯಾಗಿತ್ತೆ. ಆದರೂ ಕೊಳೆತ, ಶವ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂಬ ಅನುಮಾನ ಪೊಲೀಸರನ್ನು ಕಾಡುತ್ತೆ. ಹೀಗಾಗಿ ಪೊಲೀಸ್ರು ಶಿವಮೊಗ್ಗದ ಪೊರೆನ್ಸಿಕ್ ವೈದ್ಯರನ್ನು ಸ್ಥಳಕ್ಕೆ ಕರೆಸ್ತಾರೆ. ಶವಪರೀಕ್ಷೆ ನಂತರ ಅದು ಮಹಿಳೆಯ ಅವಶೇಷ ಎಂದು ಗೊತ್ತಾಗುತ್ತೆ. ನಂತರ ಪೊಲೀಸರು ಯುಡಿಆರ್ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಳ್ತಾರೆ.

ಯುಡಿಆರ್ ಪ್ರಕರಣಕ್ಕೆ ಜೀವ ತುಂಬಿದ ಸೊರಬದ ಪೊಲೀಸರು.

ತಕ್ಷಣ ಕಾರ್ಯಪ್ರವೃತ್ತರಾದ ಸೊರಬ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ,ಮೊದಲು ಸೊರಬದಲ್ಲಿ ನಾಪತ್ತೆ ಪ್ರಕರಣಗಳು ಸೇರಿದಂತೆ ಯುಡಿಆರ್ ಕೇಸುಗಳ ಬಗ್ಗೆ ತನಿಖೆ ನಡೆಸ್ತಾರೆ. ಇದರಲ್ಲಿ 6 ತಿಂಗಳ ಹಿಂದೆ ಸೊರಬ ಪೊಲೀಸ್ ಠಾಣೆಯಲ್ಲಿ ಎಟೆಮ್ಟ್ ಟು ಸುಸೈಡ್ ಆದ ಪ್ರಕರಣವೊಂದು ದಾಖಲಾಗಿತ್ತು. ಗಗನ ಕುಸುಮ.(26) ಮಹಿಳೆ ಗಂಡನ ಮನೆಯವರ ಕಿರುಕುಳಕ್ಕೆ ಬೇಸೆತ್ತು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದೇ ಮಹಿಳೆಯ ಶವವೇ ಕಾಡಿನಲ್ಲಿ ದೊರಕಿರಬಹುದೇ ಎಂಬ ಅನುಮಾನ ಪೊಲೀಸರನ್ನು ಕಾಡಿತು. ಸೊರಬ ತಾಲೂಕಿನ ಕಂತನಹಳ್ಳಿ ಗ್ರಾಮದ ಗಗನ ಕುಸುಮಗಂಡನ ಮನೆಯಲ್ಲಿ ವಾಸವಿದ್ದ ಕುಟುಂಬಸ್ಥರನ್ನು ವಿಚಾರಿಸಿದ ಸಂದರ್ಭದಲ್ಲಿ ಗಗನ ಕುಸುಮ ಮತ್ತು ಅವರ ಗಂಡ ಬೆಂಗಳೂರಿನಲ್ಲಿ ವಾಸವಿದ್ದಾರೆಂಬ ಮಾಹಿತಿ ಲಭ್ಯವಾಗುತ್ತದೆ. ಹೀಗಾಗಿ ಶವ ಅ..ರದ್ದು ಅನ್ನೋ ನಿರ್ಧಾರಕ್ಕೆ ಬರೋದು ಪೊಲೀಸರಿಗೆ ಕಷ್ಟವಾಗುತ್ತೆ.

ಆದರೂ ಕಾಡಿನಲ್ಲಿ ಪತ್ತೆಯಾದ ಶವ ಯಾರದ್ದು ಎಂಬ ಅನುಮಾನ ಪೊಲೀಸರನ್ನ ಮತ್ತದೇ ಮಹಿಳೆಯ ಹಿಂದೆ ಬೀಳುವಂತೆ ಮಾಡುತ್ತೆ. ಎನೇ ಆಗ್ಲಿ ಆದ್ರೆ ಗ್ರಾಮದಲ್ಲಿರುವ ಗಗನ ಕುಸುಮ.ರವರ ಗಂಡನ ಕುಟುಂಬಸ್ಥರನ್ನು ಮತ್ತೆ ವಿಚಾರಿಸೋಣ ಅಂತಾ ಪೊಲೀಸ್ರು, ಸೀದಾ ಅವರ ಮನೆಗೆ ಬರ್ತಾರೆ. ಆದ್ರೆ ಗಗನ ಕುಸುಮರ ಪತಿಯ ಕುಟುಂಬಸ್ಥರು ವಾಸವಿದ್ದ ಮನೆಗೆ ಬೀಕಹಾಕಲಾಗಿರುತ್ತೆ. ಆಗ ಪೊಲೀಸ್ರು ಅಕ್ಕಪಕ್ಕದವರನ್ನು ವಿಚಾರಿಸಿದಾಗ ಸಾರ್ ಇತ್ತಿಚೇಗೆ ಈ ಮನೆ ಆಗ್ಗಾಗ್ಗೆ ಬೀಗ ಹಾಕಿರುತ್ತೆ. ಮನೆಯಲ್ಲಿ ಯಾರು ಇರೋದಿಲ್ಲ ಅನ್ನೋ ಸಂಗತಿಯನ್ನು ಹೇಳ್ತಾರೆ. ಈ ನಿಗೂಢ ಕಾಣೆ ಪೊಲೀಸರಿಗೆ ಮತ್ತಷ್ಟು ಅನುಮಾನ ತಂದಿಡುತ್ತದೆ. 

ಒಡವೆ ಬಟ್ಟೆ ನನ್ನ ಸಹೋದರಿಯದ್ದೇ ಅಂದಾ ಅಣ್ಣಾ

ಇಲ್ಲಿಂದ ಪೊಲೀಸರು ಪ್ರಕರಣದ ದಿಕ್ಕನ್ನೇ ಬದಲಿಸುತ್ತಾರೆ. ಗಗನ ಕುಸುಮ.ರ ಗಂಡನಿಗಾಗಿ ಹುಡುಕಾಟ ಆರಂಭಿಸ್ತಾರೆ, ಈ ಮಧ್ಗಯೆ ಗಗನ ಕುಸುಮರವರ ಅಣ್ಣನನ್ನ ಸಂಪರ್ಕಿಸುವ ಪೊಲೀಸರು, ಶವದ ಬಳಿ ಸಿಕ್ಕ ಒಡವೇ ಬಟ್ಟೆಯನ್ನು ತೋರಿಸುತ್ತಾರೆ. ಸಹೋದರ ಇದು ನನ್ನ ತಂಗಿಯದ್ದೇ ಎಂದು ಹೇಳುತ್ತಾನೆ. ಅಲ್ಲಿಗೆ ಪೊಲೀಸರಿಗೆ ವಿಷಯ ಪಕ್ಕವಾಗಿತ್ತು.

ಇಷ್ಟಕ್ಕೂ ಏನಾಗಿತ್ತು ಗೊತ್ತಾ? 

ಗಗನ ಕುಸುಮ.ರವರು ಮೂಲತ ಬೆಂಗಳೂರುನವರು. ಅಲ್ಲಿ ಸ್ಟಾಪ್​ ನರ್ಸ್ ಆಗಿದ್ದವರು. ಅವರ ಪತಿ ಬೆಂಗಳೂರಿನ ಬಾರ್ ಒಂದರಲ್ಲಿ ಸಪ್ಲೆಯರ್ ಆಗಿದ್ದ. ಇಬ್ಬರ ಮದ್ಯೆ ಪ್ರೀತಿ ಉಂಟಾಗಿದೆ. ನಂತರ ಇಬ್ಬರು ಬೆಂಗಳೂರಿನಲ್ಲಿ ಮದುವೆ ಕೂಡ ಆಗ್ತಾರೆ. ಇದರಿಂದ ಬೇಸರಗೊಂಡ ಗಗನ ಕುಸುಮ.ರವರ ಕುಟುಂಬಸ್ಥರು ಆಕೆಯನ್ನು ಮನೆಯಿಂದ ಹೊರಹಾಕ್ತಾರೆ. ನಂತರ ಆಕೆ, ತನ್ನ ಪತಿಯ ಬಳಿ, ನಿಮ್ಮೂರಿಗೆ ಕರೆದುಕೊಂಡು ಹೋಗು ಅಲ್ಲಿ ನಾವಿಬ್ಬರು ನೆಮ್ಮದಿಯಾಗಿ ಬಾಳೋಣ ಎಂತಾ ಅಲವತ್ತುಕೊಳ್ತಾಳೆ. ಅಂತೆಯೇ ಪತಿ ಗಗನ ಕುಸುಮರೊಂದಿಗೆ  ಸೊರಬದಲ್ಲಿದ್ದ ತನ್ನೂರಿಗೆ ಬರುತ್ತಾನೆ. 

ಆದರೆ ಆತನ ಮನೆಯಲ್ಲಿಯು ವಿರೋಧ ಎದುರಾಗುತ್ತೆ. ಮನೆಯವರು ಆಕೆಗೆ ಕಿರುಕುಳ ನೀಡಲು ಆರಂಭಿಸ್ತಾರೆ. ಇದರಿಂದ ಮನನೊಂದ ಗಗನ ಕುಸುಮರವರು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಮಧ್ಯೆ ಗಗನ ಕುಸುಮ.ರವರ ಪತಿಗೆ ಆತನ ಅಕ್ಕನ ಮಗಳನ್ನೇ ಕೊಟ್ಟು ಮದುವೆ ಮಾಡಲು ಸಿದ್ದತೆಗಳು ಕೂಡ ನಡೆದಿತ್ತು. ಈ ಬಗ್ಗೆ ಸ್ಥಳೀಯವಾಗಿ ಪಂಚಾಯ್ತಿ ನಡೆದಿತ್ತು. ಪಂಚಾಯಿತಿ ತೀರ್ಮಾನದಂತೆ ಗಗನ ಕುಸುಮರವರನ್ನ ಕರೆದುಕೊಂಡು ಆಕೆಯ ಪತಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲೇ ಬದುಕು ಕಟ್ಟಿಕೊಳ್ಳಲಿ ಎಂದು ತಿರ್ಮಾನ ಮಾಡಿದ್ದರು. ಇದಕ್ಕೆ ಇಬ್ಬರು ಸಹ ಒಪ್ಪಿದ್ದರು. 

ಪತ್ನಿಯನ್ನು ಕಾಡಿಗೆ ಕರೆದೊಯ್ದ ಹಂತಕ,

ಬೀರ್ ಬಾಟಲಿಯಿಂದ ತಲೆಗೆ ಹೊಡೆದ,

ಸೊಪ್ಪಿನಿಂದ ಉಸುಗಟ್ಟಿಸಿ ಕೊಂದ..

ಪಂಚಾಯ್ತಿ ತೀರ್ಮಾನದಂತೆ ಗಗನ ಕುಸುಮ..ರವರನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟ ಗಂಡ, ತನ್ನ ಮನಸ್ಸಿನಲ್ಲಿ ಹಾಕಿದ್ದ ಪ್ಲಾನ್ ಬೇರೆಯದ್ದೆ ಆಗಿತ್ತು.  ಹೆಂಡ್ತಿಯನ್ನು ಬಸ್ ನಿಲ್ದಾಣಕ್ಕೆ ಕರೆದುಕೊಂಡು ಹೋಗೋ ಬದಲು, ಪುಸಲಾಯಿಸಿ ಕಾಡಿಗೆ ಕರೆದೊಯ್ದಿದ್ದ.ಅಲ್ಲಿ ಆಕೆಯ ತಲೆಗೆ ಬೀರ್ ಬಾಟ್ಲಿಯಿಂದ ಹೊಡೆದು, ಪ್ರಜ್ಞೆ ತಪ್ಪಿಸಿದ್ದ, ಅಲ್ಲದೆ ಆಕೆಯನ್ನು ಕಾಡಿನಲ್ಲಿ ಬಚ್ಚಿಡಲು ಯತ್ನಿಸಿದ್ದ. ಅಷ್ಟರಲ್ಲಿ ಆಕೆಗೆ ಪ್ರಜ್ಞೆ ಬಂದಿದೆ. ಆದರೆ, ಪುನಃ ಆಕೆಯ ಮೇಲೆ ದಾಳಿಗಿಳಿದ ಗಂಡ,  ಕಾಡಿನ ಬಗಣಿಸೊಪ್ಪನ್ನು ಗಗನ ಕುಸುಮರವರ ಮೂಗಿಗೆ ಅದುಮಿ ಉಸುರುಗಟ್ಟಿ ಸಾಯಿಸ್ತಾನೆ.

ಹೆಣ ಹೂಳಲು ಅಣ್ಣ ಮತ್ತು ಅಳಿಯ ಸಾಥ್.

ಅಂದು ಮದ್ಯಾಹ್ನ ಸೊರಬದ ಕಾಡಿನಲ್ಲಿ ಹೆಂಡ್ತಿ ಕೊಲೆ ಮಾಡಿದ ಆರೋಪಿ, ತಕ್ಷಣ ಮನೆಗೆ ಹೋಗಿ ಅಣ್ಣ ಮತ್ತು ಅಳಿಯನಿಗೆ ಕೊಲೆ ಮಾಡಿರುವ ವಿಷಯ ಹೇಳ್ತಾನೆ. ಇದರಿಂದ ತೊಂದರೆ ತಪ್ಪಿದ್ದಲ್ಲ ಎಂದು ತಿಳಿದ ಕುಟುಂಬಸ್ಥರು, ಆತನ ಬೆಂಬಲಕ್ಕೆ ನಿಲ್ಲುತ್ತಾರೆ. ಇದಕ್ಕಾಗಿ ಮೃತ ಯುವತಿಯನ್ನು ಕಾಡಿನಲ್ಲಿಯೇ ಮಣ್ಣು ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಕಾಡಿನ ಪಕ್ಕದ ತೋಟದ  ಮಾಲೀಕರಿಂದ ಹಾರೆ, ಗುದ್ಲಿ, ಪಿಕಾಸಿ ತೆಗೆದುಕೊಂಡು ಕಾಡಿನಲ್ಲಿಯೇ ಗುಂಡಿ ತೋಡಿ, ಆಕೆಯನ್ನು ಹೂತು ಹಾಕಿ, ವಾಪಸ್ ಗ್ರಾಮಕ್ಕೆ ಬರುತ್ತಾರೆ. ನಂತರ ಕೊಲೆ ಮಾಡಿದ್ದ ಪತಿ ಬೆಂಗಳೂರಿಗೆ ವಾಪಸ್ ಹೋಗುತ್ತಾನೆ. ವಾರದಂತೆ ಆತನ ಮನೆಯವರು ಸಹ ಮನೆ ಖಾಲಿ ಮಾಡುತ್ತಾರೆ. ಅರಣ್ಯ ಅಧಿಕಾರಿಗಳು ಹೆಣ ಗುರುತಿಸಿ, ಸೊರಬ ಪೊಲೀಸರು ಪ್ರಕರಣ ಭೇದಿಸುವವರೆಗೂ ಗಗನ ಕುಸುಮರವರ ಮನೆಯಲ್ಲಿ ತಮ್ಮ ಮಗಳು ಸುಖವಾಗಿ ಬದುಕುತ್ತಿರಬೇಕು ಎಂದೇ ಭಾವಿಸಿದ್ದರು. 

ಪೊಲೀಸರಿಗೆ ಶರಣಾದ ನಾಗರಾಜ್

ಹೀಗೆ ಸೊರಬದ ಕಾಡಿನಲ್ಲಿನ ಹೆಣದ ವಾಸನೆ, ಅದರ ಕೊಲೆಗಾರ ಕುಟುಂಬದ ಸುತ್ತ ಸುತ್ತಿಕೊಳ್ಳುತ್ತಿರುವಾಗಲೇ ಪ್ರಕರಣದ ಆರೋಪಿ, ಘಟನೆ ನಡೆದು ಮೂರು ತಿಂಗಳ ನಂತರ ಶರಣಾಗುತ್ತಾನೆ. ಆಕೆ ಅಹಂಕಾರಿಯಾಗಿದ್ದಳು, ಹೊಂದಿಕೊಳ್ತಿರಲಿಲ್ಲ, ಮೇಲಾಗಿ ಮೊಬೈಲ್ ವಿಚಾರಕ್ಕೆ ನನ್ನ ಮತ್ತು ಅವಳ ನಡುವೆ ಜಗಳ ಆಗ್ತಾ ಇತ್ತು.ಆಕೆ ಶೀಲದ ಮೇಲೆ ಶಂಕೆಯಿತ್ತು. ಹೀಗಾಗಿ ಕೊಲೆ ಮಾಡ್ದೆ ಅಂತಾ ಪೊಲೀಸರ ಬಳಿ ತಪ್ಪೊಪ್ಪಿಕೊಳ್ತಾನೆ. ನಂತರ ಕೊಲೆ ಮಾಡಿದ ಜಾಗವನ್ನು  ಪೊಲೀಸರಿಗೆ ತೋರಿಸ್ತಾನೆ. ಸ್ಥಳದಲ್ಲಿ ಪೊಲೀಸರು,ಕೊಲೆಗೆ ಬಳಿಸಿದ ಬಿಯರ್ ಬಾಟಲ್ ಮತ್ತು ಗುಂಡಿ ತೆಗೆಯಲು ಬಳಸಿದ ಗುದ್ದಲಿಯನ್ನು ವಶಪಡಿಸಿಕೊಳ್ತಾರೆ.

ವೀಕ್ಷಕರೇ ಇದೊಂದು ಅಸಹಜ ಸಾವಿನ ಕೇಸ್​ ಎಂದು ಪೊಲೀಸರು ತೀರ್ಮಾನ ಬರೆಯುವುದು ತುಂಬಾ ಹೊತ್ತಿನ ಕೆಲಸವಾಗಿರಲಿಲ್ಲ. ಆದರೆ ಸೊರಬ ಪೊಲೀಸರು, ಕೇಸ್​ನ ಜಾಡು ಹಿಡಿದು ಆರೋಪಿಯನ್ನ ಅಂದರ್ ಮಾಡುವವರೆಗೂ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಒಂದು ಕಾಡಿನಲ್ಲಿ ಸಿಕ್ಕ ಶವಕ್ಕೆ ಯಾರು ಇಲ್ಲದಿದ್ದರೂ, ಪೊಲೀಸರು ಆಕೆಯ ಸಾವಿಗೆ ನ್ಯಾಯ ಕೊಡಿಸ್ತಾರೆ. ಇದೆಲ್ಲಕ್ಕಿಂತಲೂ, ಅರಣ್ಯ ಇಲಾಖೆ ಅಧಿಕಾರಿಗಳು ಇಂತಹದ್ದೊಂದು ಕೊಲೆ ಪ್ರಕರಣ ಬಯಲಾಗಲು ಮೊದಲ ಸಾಕ್ಷಿಯಾಗುತ್ತಾರೆ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!