ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ

Since the closure of balebare ghat, there is no bus facility for the villages under Sulagodu panchayat. The demand of the people of Hosanagartaluk should be recognised.

ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ
ಬಾಳೆಬರೆ ಘಾಟಿ ಬಂದ್​ ಆದಾಗಿನಿಂದ ಬಸ್​ಗೆ ಬರ! ಮಕ್ಕಳ ಎಕ್ಸಾಮ್​ ಟೈಂನಲ್ಲಿಯಾದ್ರೂ ಬಸ್​ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಮತ್ತೆ ಬಸ್​ಗಳ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಹುಲಿಕಲ್ ಘಾಟಿ ಬಂದ್ ಆಗಿರೋದು. ಹೊಸನಗರ ತಾಲ್ಲೂಕಿನಲ್ಲಿ, ಕರಾವಳಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಿಗುವ ಕೈಮರ, ಕೌರಿಬೈಲು, ಯಡೂರು, ಮಾಸ್ತಿಕಟ್ಟೆಯ ಜನರು ಈ ಭಾಗದಲ್ಲಿ ಓಡಾಡುವ ಬಸ್​ಗಳನ್ನೆ ಆದರಿಸಿದ್ದಾರೆ. ಆದರೆ ರಸ್ತೆ ದುರಸ್ತಿಗಾಗಿ ಬಾಳೆಬರೆ ಘಾಟಿ ಬಂದ್ ಆಗಿದೆ. ಹೀಗಾಗಿ ಕರಾವಳಿಗೆ ಹೋಗುವ ಬಸ್​ಗಳು ಕೊಲ್ಲೂರು ಘಾಟಿ ಮೇಲೆ ಘಟ್ಟದ ಕೆಳಕ್ಕೆ ಸಂಚರಿಸುತ್ತಿವೆ. ಆದರೆ, ದಿನಕ್ಕೆ ನಾಲ್ಕು ಬಸ್​ಗಳಷ್ಟೆ ಓಡಾಡುತ್ತಿದ್ದು, ಅವುಗಳು ಜನರ ಅವಶ್ಯಕ ಸಮಯಕ್ಕೆ ಸರಿಯಾಗಿ ಲಭ್ಯವಾಗುತ್ತಿಲ್ಲ. 

READ | ಫೋಟೋ ಕ್ಲಿಕ್ಕಿಸುವಾಗ ಇರಲಿ ಎಚ್ಚರ! ಬದುಕಿಗೆ ಕಂಟಕವಾಗಬಲ್ಲದು ಒಂದೇ ಒಂದು ಇಮೇಜ್​! ಸೈಬರ್​ ಕ್ರೈಂ ಅಲರ್ಟ್!

ಸುಳುಗೋಡು ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಯಕ್ಕೆ ಸಿಗದ ಬಸ್!

ಬೆಳಗ್ಗೆ ನಾಲ್ಕು ಬಸ್​ಗಳ ಓಡಾಟ ಬಿಟ್ಟರೇ, ಆನಂತರ ಈ ಭಾಗದಲ್ಲಿ ಬಸ್​ಗಳ ಸುಳಿವೆ ಸಿಗೋದಿಲ್ಲ. ಕುಂದಾಪುರ ಕಡೆಯಿಂದಲೂ ಬಸ್​ ಬರುತ್ತಿಲ್ಲ. ಹೀಗಾಗಿ ಹೊಸನಗರಕ್ಕೆ ಹೋಗಬೇಕಂದರೂ ಕಷ್ಟ, ಅಲ್ಲಿಂದ ವಾಪಸ್ ಬರುವುದಕ್ಕೂ ಕಷ್ಟವಾಗ್ತಿದೆ. ಇನ್ನೂ ನಗರಕ್ಕೆ ಹೋಗುವುದು ಸಹ ಜನರಿಗೆ ಕಷ್ಟವಾಗುತ್ತಿದೆ.  ಮುಖ್ಯವಾಗಿ ಮಾಸ್ತಿಕಟ್ಟೆಯಲ್ಲಿರುವ ಶಾಲೆಗೆ ಹೋಗುವ, ಹಳ್ಳಿಗಳ ಮಕ್ಕಳಿಗೆ ಬೆಳಗ್ಗೆ ಬೆಳಗ್ಗೆ ಬಸ್​ಗಳು ಸಿಗುತ್ತಿಲ್ಲ. ಇನ್ನೂ ಕೆಲಸಕ್ಕೆ ಹೋಗುವವರಿಗೂ ಬಸ್​ಗಳ ಸಂಚಾರ ಇಲ್ಲದಿರುವುದು ಇನ್ನಿಲ್ಲದ ಸಮಸ್ಯೆ ತಂದೊಡ್ಡಿದೆ. ಅಷ್ಟೆಅಲ್ಲದೆ ರೈತಾಪಿ ವರ್ಗ ಮತ್ತು ಜನಸಾಮಾನ್ಯರು ಬ್ಯಾಂಕ್​, ಸರ್ಕಾರಿ ಕಚೇರಿ ಸೇರಿದಂತೆ ಪ್ರತಿ ಕೆಲಸಕ್ಕೂ ನಗರ, ಹೊಸನಗರ ಹೋಗಿ ಬರಬೇಕಾಗಿದ್ದರಿಂದ ಅದಕ್ಕೂ ಬಸ್​ಗಳು ಸಮಯಕ್ಕೆ ಸರಿಯಾಗಿ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಸುಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಆರೋಪಿಸಿದ್ದಾರೆ. ಹೀಗಾಗಿ ಕಚೇರಿ ಹಾಗೂ ಶಾಲೆ, ಕಾಲೇಜುಗಳ ಸಮಯಕ್ಕೆ ಸರಿಯಾಗಿ, ಘಾಟಿ ಓಪನ್​ ಆಗುವವರೆಗೂ ತಾತ್ಕಾಲಿಕ ಬಸ್​ ಸೌಲಭ್ಯದ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದಾರೆ. 

ಬಸ್​ ಹೀಗೆ ಸಂಚರಿಸಿದರೇ ಅನುಕೂಲ!

ಶಿವಮೊಗ್ಗದಿಂದ ಬೆಳಗ್ಗೆ 6.15 ಕ್ಕೆ ಬಿಟ್ಟರೆ, ತೀರ್ಥಹಳ್ಳಿ ಕೈಮರ, ಕೌರಿಬೈಲು, ಯಡೂರು, ಮಾಸ್ತಿಕಟ್ಟೆ ಮೂಲಕ ನಗರಕ್ಕೆ 9.30 ಕ್ಕೆ ತಲುಪುವಂತೆ ಬಸ್​ ಸೌಲಭ್ಯದ ಅಗತ್ಯವಿದೆ. ಎರಡನೇಯದ್ದಾಗಿ, ಇದೇ ಬಸ್​ ಆ ಕಡೆ ನಗರದಿಂದ ಬೆಳಗ್ಗೆ 10 ಕ್ಕೆ ಹೊರಟು, ಮಾಸ್ತಿಕಟ್ಟೆ ಯಡೂರು ಕೌರಿಬೈಲು, ಕೈಮರ, ತೀರ್ಥಹಳ್ಳಿ ಮೂಲಕ ಶಿವಮೊಗ್ಗಕ್ಕೆ ಮಧ್ಯಾಹ್ನ 1 ಗಂಟೆಗೆ ತಲುಪುವಂತೆ ಬಸ್​ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಿದೆ. ಇನ್ನೂ ಮಧ್ಯಾಹ್ನ 3 ಗಂಟೆ ಶಿವಮೊಗ್ಗದಿಂದ ಬಸ್ ಬಿಟ್ಟರೆ, ಅದು ನಗರಕ್ಕೆ ಇದೇ ಮಾರ್ಗದಲ್ಲಿ 5.30 ಕ್ಕೆ ತಲುಪುತ್ತದೆ. ನಗರದಿಂದ ಸಂಜೆ ಆರಕ್ಕೆ ಹೊರಟರೆ,, ಶಿವಮೊಗ್ಗಕ್ಕೆ ಇದೇ ಮಾರ್ಗವಾಗಿ 8.30 ಕ್ಕೆ ಬರುತ್ತದೆ. ಇನ್ನೂ ಇನ್ನೊಂದು ಬಸ್ಸನ್ನು ಬೆಳಗ್ಗೆ ಏಳಕ್ಕೆ ನಗರದಿಂದ ಹೊರಡುವಂತೆ ಅನುಕೂಲ ಮಾಡಿಕೊಟ್ಟರೆ, ಆ ಬಸ್​ ಬೆಳಗ್ಗೆ  10 ಗಂಟೆಗೆ ಶಿವಮೊಗ್ಗ ತಲುಪುತ್ತದೆ. ಶಿವಮೊಗ್ಗದಿಂದ 12 ಕ್ಕೆ ಹೊರಟು, ನಗರಕ್ಕೆ ಇದೇ ಮಾರ್ಗದಲ್ಲಿ 3.30 ಕ್ಕೆ ತಲುಪುತ್ತೆ. ಇನ್ನೂ ಇದೇ ಬಸ್ ಮತ್ತೆ 4.00 ಗಂಟೆಗೆ ನಗರದಿಂದ ವಾಪಸ್ ಬಂದರೆ, ಸಂಜೆ 5.30 ಕ್ಕೆ ತೀರ್ಥಹಳ್ಳಿಗೆ ಬರುತ್ತೆ ಅಲ್ಲಿಂದ ಮತ್ತೆ 7.45 ಕ್ಕೆ ಹೊರಟರೇ ನಗರ 9 ಗಂಟೆಗೆ ತಲುಪುತ್ತದೆ. ಹೀಗೇ ಈ ಸಮಯಕ್ಕೆ ಬಸ್​ ಸೌಲಭ್ಯದ ವ್ಯವಸ್ಥೆ ಮಾಡಿದರೇ ಮಕ್ಕಳಿಂದ ಹಿಡಿದು ನೌಕರರಿಗೂ , ರೈತರಿಗೂ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ. 

ಜಿಲ್ಲಾಡಳಿತ & ಕೆಎಸ್​ಆರ್​ಟಿಸಿ ಗಮನಹರಿಸಲಿ

ಇನ್ನೂ ಈ ಸಂಬಂಧ ಈಗಾಗಲೇ ಕೆಎಸ್​ಆರ್​ಟಿಸಿಗೂ ಮತ್ತು ಜಿಲ್ಲಾಡಳಿತಕ್ಕೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರಂತೆ. ಆದರೆ, ಈ ಬಗ್ಗೆ ಸಮರ್ಪಕ ಗಮನ ವಹಿಸಲಾಗಿಲ್ಲ ಎಂಬುದು ಸ್ಥಳೀಯರ ಆರೋಪ. ಅಲ್ಲದೆ ಶಾಲೆ ಹಾಗೂ ಕಾಲೇಜು ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ಪರೀಕ್ಷಾ ಸಮಯಕ್ಕೆ ಶಿಕ್ಷಣ ಸಂಸ್ಥೆಗಳನ್ನು ತಲುಪುವ ನಿಟ್ಟಿನಲ್ಲಿ ಬಸ್​ಗಳ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಿ ಎಂದು ಸ್ಥಳೀಯರು ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಿದೆ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!