KARNATAKA NEWS/ ONLINE / Malenadu today/ Jun 22, 2023 SHIVAMOGGA NEWS
ಇವತ್ತಿನಿಂದ ಜೂನ್ 25 ವರೆಗೂ ಶಿವಮೊಗ್ಗವೂ ಸೇರಿದಂತೆ ಹಲವು ಕಡೆಗಳಿಂದ ಹೊರಡುವ ಮತ್ತು ತೆರಳುವ ಟ್ರೈನ್ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ. ನೈಋತ್ಯ ರೈಲ್ವೆ ಇಲಾಖೆ ಜೂನ್ 25ರವರೆಗೆ ಇಂಜಿನಿಯರಿಂಗ್ ಸುರಕ್ಷತಾ ಕ್ರಮಗಳ ಪರಿಶೀಲನೆ ಕಾರ್ಯ ಹಮ್ಮಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದು, ಕೆಲವು ರೈಲುಗಳ ಸಂಚಾರವನ್ನು (Railway Timing) ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮತ್ತೆ ಕೆಲವು ರೈಲುಗಳನ್ನು ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತಿದೆ. ಪೂರ್ತಿ ವಿವರ ಇಲ್ಲಿದೆ ನೋಡಿ!
ತುಮಕೂರು – ಶಿವಮೊಗ್ಗ ಡೆಮು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06513) ರೈಲು ಜೂ.22ರಿಂದ 24ರವರೆಗೆ ಅರಸೀಕರೆವರೆಗೆ ಮಾತ್ರ ಸಂಚರಿಸಲಿದೆ.
ಶಿವಮೊಗ್ಗ – ತುಮಕೂರು ಡೆಮು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06514) ರೈಲು ಜೂ.22 ರಿಂದ 24ರವರೆಗೆ ಶಿವಮೊಗ್ಗ ನಿಲ್ದಾಣದ ಬದಲು ಅರಸೀಕೆರೆ ರೈಲ್ವೆ ನಿಲ್ದಾಣದಿಂದ ಸಂಚಾರ ಆರಂಭಿಸಲಿದೆ.
ಶಿವಮೊಗ್ಗ – ಚಿಕ್ಕಮಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07365) ರೈಲನ್ನು ಜೂ.22ರಂದು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.
ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20652) ಜೂ.22 ಮತ್ತು 23ರಂದು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಿಸಲಾಗುತ್ತದೆ.
ಬೆಂಗಳೂರು – ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20651) ರೈಲನ್ನು ಜೂ.23ರಂದು ಮಾರ್ಗ ಮಧ್ಯೆ 15 ನಿಮಿಷ ನಿಯಂತ್ರಿಸಲಾಗುತ್ತದೆ.
ಮೈಸೂರು – ಶಿವಮೊಗ್ಗ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16225) ರೈಲನ್ನು ಜೂ. 22, 23 ಮತ್ತು 24ರಂದು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.
ಶಿವಮೊಗ್ಗ – ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16226) ರೈಲನ್ನು ಜೂ. 22, 23 ಮತ್ತು 24ರಂದು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.
ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16579) ರೈಲನ್ನು ಜೂ.25ರಂದು ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತಿದೆ.
ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16580) ರೈಲನ್ನು ಜೂ. 25ರಂದು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಿಸಲಾಗುತ್ತಿದೆ.
