ವಿಜಯೇಂದ್ರ ವಿಜಯಕ್ಕೆ ಸವಾಲುಗಳೇ ಜಾಸ್ತಿ! ಬಂಡಾಯಕ್ಕೆ ಬಿಎಸ್​ವೈ ವಿರೋಧಿ ವೋಟಿನ ಲೆಕ್ಕ! ಶಿಕಾರಿಪುರದಿಂದ ಜೆಪಿ ಗ್ರೌಂಡ್ ರಿಪೋರ್ಟ್​!

JP Ground Report from Shikaripura!

ವಿಜಯೇಂದ್ರ ವಿಜಯಕ್ಕೆ ಸವಾಲುಗಳೇ ಜಾಸ್ತಿ! ಬಂಡಾಯಕ್ಕೆ ಬಿಎಸ್​ವೈ ವಿರೋಧಿ ವೋಟಿನ ಲೆಕ್ಕ! ಶಿಕಾರಿಪುರದಿಂದ ಜೆಪಿ  ಗ್ರೌಂಡ್ ರಿಪೋರ್ಟ್​!

KARNATAKA NEWS/ ONLINE / Malenadu today/ May 4, 2023 GOOGLE NEWS

ಶಿಕಾರಿಪುರ/ ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ / ರಾಜ್ಯದ ಗಮನ ಸೆಳೆದಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರರಿಗೆ ಒಂದು ರೀತಿಯ ಸವಾಲಾಗಿ ಪರಿಣಮಿಸಿದೆ. ಏಕೆ ಎನ್ನುವುದರ ಜೆಪಿ ಗ್ರೌಂಡ್​ ರಿಪೋರ್ಟ್​ ಇದು! 

ಶಿಕಾರಿಪುರ ವಿಧಾನಸಭಾ  ಕ್ಷೇತ್ರದ ಚುನಾವಣೆ ಈ ಬಾರಿ ದೇಶದ ಗಮನ ಸೆಳೆದಿದೆ. ಹೈವೋಲ್ಟೇಜ್ ಕ್ಷೇತ್ರವೆಂದು ಬಿಂಬಿತವಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಪಡೆದಿರೋ ಬಿ.ಎಸ್ ಯಡಿಯೂರಪ್ಪರ ಪುತ್ರ  ಬಿ.ವೈ ವಿಜಯೇಂದ್ರ ಬಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. 

ಬಿ.ಎಸ್.ಯಡಿಯೂರಪ್ಪರವರರು ನಲ್ವತ್ತು ವರ್ಷಗಳ ರಾಜಕಾರಣದಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿಯೇ ಅವರ ಪುತ್ರನಿಗೆ ಕ್ಷೇತ್ರದ ಮತದಾರ ಹೆಚ್ಚಿನ ಲೀಡ್ ನಲ್ಲಿ ಗೆಲ್ಲಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ರಾಜಕೀಯ ಗಣಿತದ ಲೆಕ್ಕಚಾರ ಅಂದುಕೊಂಡಷ್ಟು ಸುಲಭವಾಗಿಲ್ಲ

ಅಚ್ಚರಿ ಫಲಿತಾಂಶ ಹೊರಬೀಳುತ್ತಾ? 

ಶಿಕಾರಿಪುರ ಕ್ಷೇತ್ರದ ಮತದಾರ ಈ ಬಾರಿ ಅಚ್ಚರಿಯ ಫಲಿತಾಂಶ ನೀಡಿದರು ಅಚ್ಚರಿಪಡಬೇಕಾಗಿಲ್ಲ. ಶಿಕಾರಿಪುರ ಕ್ಷೇತ್ರದಲ್ಲಿ ಕಳೆದ ಆರು ತಿಂಗಳ ಹಿಂದೆ  ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ವೈ ವಿಜಯೇಂದ್ರ ಒಂದು ಲಕ್ಷದ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದೇ ಅರ್ಥೈಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಸನ್ನಿವೇಶ ಎರಡು ಸಹ ಭಿನ್ನವಾಗಿದೆ. 

ಕಾಂಗ್ರೆಸ್ ಪಕ್ಷದಿಂದ ಕೈ ತಪ್ಪಿದ ಟಿಕೆಟ್​ ನಾಗರಾಜಗೌಡರಿಗೆ ಅದ್ಭುತ ವೇದಿಕೆಯೊಂದನ್ನ ಒದಗಿಸಿದೆ.  ಅಲ್ಲದೆ  ಅನುಕಂಪದ ಅಲೆಯನ್ನು ಸೃಷ್ಟಿಸಿದೆ.  ರಾಜಕೀಯ ಒಳಒಪ್ಪಂದ ಎಂಬ ಆರೋಪ ಕಾಂಗ್ರೆಸ್​ನ ವಿರುದ್ಧ ಆಕ್ರೋಶ ಮೂಡುವಂತೆ ಮಾಡಿದೆ. ಸಾಲದ್ದಕ್ಕೆ ಸಮುದಾಯ ಹಾಗೂ ಕಾಂಗ್ರೆಸ್​ನ ಸ್ಥಳೀಯ ನಾಯಕರೇ ನಾಗರಾಜ್​ ಗೌಡರಿಗೆ ಜೈಕಾರ ಹಾಗಿ ದೇಣಿಗೆ ಕೊಟ್ಟು ಎಲೆಕ್ಷನ್​ ಉಸ್ತುವಾರಿ ನೋಡಿಕೊಳ್ತಿದ್ದಾರೆ. ಹೀಗಾಗಿ ಶಿಕಾರಿಪುರದ ವಾತಾವರಣ ಸದ್ಯ ಬೇರೆಯದ್ದೇ ಆಗಿದೆ.  ಬೇರೆಯವರ ನೋಟು ನಾಗರಾಜ ಗೌಡರಿಗೆ ಓಟು ಎನ್ನುವ ಘೋಷಣೆಗಳು ಕೇಳಿಬರುತ್ತಿದೆ.   



ರಾಘವೇಂದ್ರರ ಹಠ ಓಡಾಟ 

ಹಾಗಂತ ಅತ್ತ ಬಿಎಸ್​ವೈ ಕುಟುಂಬಕ್ಕೆ ನಾಗರಾಜ್​ ಗೌಡರ ಸ್ಪರ್ಧೆ ಮತ್ತು ಬದಲಾದ ಚುನಾವಣಾ ವಾತಾವರಣದ ಬಗ್ಗೆ ಗೊತ್ತಿಲ್ಲವೇನಂತಿಲ್ಲ.ಗೊತ್ತಿದೆ. ಆ ಕಾರಣಕ್ಕೆ ಬಿವೈ ರಾಘವೇಂದ್ರ ತಮ್ಮನನ್ನು ಗೆಲ್ಲಿಸಿಕೊಂಡು ಬರಲು ಶಿಕಾರಿಪುರದ ಮೂಲೇ ಮೂಲೆ ಸುತ್ತುತ್ತಿದ್ಧಾರೆ. ತಂದೆಯವರ ಎಲೆಕ್ಷನ್​ ನೋಡಿಕೊಂಡ ಅನುಭವವನ್ನ ತಮ್ಮನನ್ನ ಗೆಲ್ಲಿಸಿಕೊಂಡು ಬರಲು ಖರ್ಚು ಮಾಡುತ್ತಿರುವ ಸಂಸದರು,  ಹಗಲು ರಾತ್ರಿ ಎನ್ನದೆ ಕ್ಷೇತ್ರದ ಮತದಾರರ ಮನೆ ಬಾಗಿಲು ತಟ್ಟಿ ಮತ ಕೇಳುತ್ತಿದ್ದಾರೆ. ಇನ್ನೊಂದಡೆ ಸದ್ದಿಲ್ಲದೇ ಮಾಜಿ ಸಿಎಂ  ಬಿ.ಎಸ್.ಯಡಿಯೂರಪ್ಪ ಎಲ್ಲಾ ಸಮುದಾಯದ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ, ಪುತ್ರನ ಗೆಲುವಿಗಾಗಿ ಮನವಿ ಮಾಡಿದ್ದಾರೆ.

ಏನನ್ನುತ್ತೆ ಗುಪ್ತಚರ ಮಾಹಿತಿ

ಗುಪ್ತಚರ ಮಾಹಿತಿ ಕೂಡ ಸಮಬಲದ ಹೋರಾಟವನ್ನೇ ಈವರೆಗೂ ಬಿಂಬಿಸಿದೆ. ಸಮಬಲದ ಹೋರಾಟದಲ್ಲಿ ಅಂತಿಮವಾಗಿ ನಿಕ್ಕಿಯಾಗುವ ಟ್ರೆಂಡ್ ಹಾಗೂ ಹಣದ ಆಟಗಳು ನಿರ್ಣಾಯಕವಾಗುತ್ತದೆ. ಹೀಗಾಗಿ ಎರಡು ಕಡೆಗಳಲ್ಲೂ ಈಗ ಲಾಸ್ಟ್​ ಓವರ್​ನ ರೋಚಕ ಮ್ಯಾಚ್​ ನಡೆಯುತ್ತಿದೆ. 

ಕ್ಷೇತ್ರ ದಲ್ಲಿ ಕಟ್ಟಿ ಹಾಕಿದ ಬಂಡಾಯ ಅಭ್ಯರ್ಥಿ

ಒಳ ಮೀಸಲಾತಿ ಪರಿಷ್ಕರಣೆಗೂ ಮೊದಲು ಬಿಎಸ್​ವೈ ಪುತ್ರ ವಿಜಯೇಂದ್ರ ಶಿಕಾರಿಪುರವನ್ನು ಅದಾಗಲೇ ಗೆದ್ದುಬಿಟ್ಟಿದ್ದರು. ಆದರೆ ಬಂಜಾರ ಸಮುದಾಯದ ಆಕ್ರೋಶ ಮತ್ತು ಮುಸ್ಲಿಮ್​ ಮೀಸಲಾತಿ ರದ್ದುಎರಡು ವಿಚಾರವೂ ಚುನಾವಣಾ ಹೊಲದಲ್ಲಿ ಸುಡುಮಣ್ಣಾಗಿ ಸುಡುತ್ತಿದೆ. 

ಬಿಎಸ್​ವೈ ಅಖಾಡದಲ್ಲಿ ಇಲ್ಲದಿರುವುದು ಸಹ ಮೈನಸ್ ಆಗ್ತಿದೆಯಾ?

ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದರೂ ಯಡಿಯೂರಪ್ಪನವರೇ ನಮ್ಮ ನಾಯಕ ಅಂತಾ ಪ್ರತಿಸಮುದಾಯವೂ ಬಿಎಸ್​ವೈಗೆ ವೋಟು ಹಾಕುತ್ತಿತ್ತು. ಆದರೆ ಈ ಸಲ ಅವರು ನಿಲ್ಲದಿರುವುದು ಸಮುದಾಯಗಳ ನಡುವಿನ ಒಗ್ಗಟ್ಟಿನ ವೋಟು ತಪ್ಪಲು ಕಾರಣವಾಗಿದೆ. ಬಿಎಸ್​ವೈ ಹೆಸರಿಗೆ ವೋಟು ಹಾಕುತ್ತಿದ್ದ ಮುಸ್ಲಿಮ್ ಮತಗಳು, ತಮ್ಮವರು ಎಂದು ಆರಿಸುತ್ತಿದ್ದ ಲಿಂಗಾಯತ ಸಮಾಜ ಎರಡು ಸಹ, ಯಡಿಯೂರಪ್ಪನವರಿಗೆ ಏನು ಕೊಡಬೇಕು ಕೊಟ್ಟಿವೀ. ಈ ಸಲ ನಮ್ಮ ಆಯ್ಕೆ ಎನ್ನುತ್ತಿವೆ.  

ಲಿಂಗಾಯತ ಸಮಾಜ ನಾಗರಾಜ್​ ಗೌಡ ಹಾಗೂ ವಿಜಯೇಂದ್ರರನ್ನ ಒಂದೆ ತಟ್ಟೆಯಲ್ಲಿಟ್ಟು ತೂಗುತ್ತಿದ್ದರೇ,. ಮುಸ್ಲಿಮ್ ಮತದಾರ ಆಯ್ಕೆಯಲ್ಲಿ ಚೂಸಿಯಾಗಲು ಹೊರಟಿದ್ದಾನೆ. ಇನ್ನೂ ಬಂಜಾರ ಸಮುದಾಯದಲ್ಲಿ ಮೀಸಲಾತಿಯ ಪರಿಷ್ಕರಣೆಯ ಆಕ್ರೋಶ,  ಗುಣಕಾರ ಭಾಗಕಾರ ಲೆಕ್ಕಹಾಕುತ್ತಿದೆ. ಪರಿಶಿಷ್ಟ ಹಾಗೂ ಹಿಂದುಳಿದ ಮತಗಳ ಕಣ್ಣಲ್ಲಿಯು ಇಬ್ಬರು ಸ್ಪರ್ಧಿಗಳಿದ್ದಾರೆ. ಇಬ್ಬರ ನಡುವೆ ಗೋಣಿ ಮಾಲ್ತೇಶ್​ ಕೂಡು ನಾನು ಗೆಲ್ತೀನಿ ಎನ್ನುತ್ತಿದ್ದಾರೆ. 

 

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾದ್ರೂ, ಏನಂತಾನೆ ಮತದಾರ?

ಶಿಕಾರಿಪುರ ಕ್ಷೇತ್ರದಲ್ಲಿ ಸುತ್ತಾಡಿದಾಗ ಕೆಲವೊಂದು ಮಾತುಗಳು ಹಲವೆಡೆ ಕೇಳಿಬಂದವು. ಅವುಗಳೆಂದರೆ, 

ಬಿ.ವೈ ರಾಘವೇಂದ್ರ ಹಾಗು ಬಿ.ಎಸ್.ಯಡಿಯೂರಪ್ಪರ ರೀತಿ ಶಿಕಾರಿಪುರ ಕ್ಷೇತ್ರದ ಪ್ರತಿ ಹಳ್ಳಿಗಳ ಜನರ ಸಂಪರ್ಕ ವಿಜಯೇಂದ್ರರಿಗೆ ಇಲ್ಲ. 

ವಿಜಯೇಂದ್ರರವರು ಗೆದ್ದರೂ ಅವರ ಕ್ಷೇತ್ರವೂ ಬೆಂಗಳೂರು ಕೇಂದ್ರಿಕೃತವಾಗಿರುತ್ತೆ

ಗ್ಯಾಸ್, ದಿನಸಿ ರೇಟು ಏರಿಕೆ ಅತಿಯಾಯ್ತು ಅನಿಸುತ್ತಿದೆ! ಅಭಿವೃದ್ಧಿ ಜೊತೆ ಹೊಟ್ಟೆಪಾಡು ಮುಖ್ಯ



ಸಾಂಪ್ರದಾಯಿಕ ಮತಗಳ ಗೇಮ್​ ಶೋ

ಲಾಗಾಯ್ತಿನಿಂದಲೂ ಯಡಿಯೂರಪ್ಪರ ವಿರೋಧಿ ಮತಗಳು ಕ್ಷೇತ್ರದಲ್ಲಿ  40  ಸಾವಿರಕ್ಕೂ  ಅಧಿಕ ಸಂಖ್ಯೆಯಲ್ಲಿವೆ. ಈ ಮತಗಳು ಕಾಂಗ್ರೇಸ್ ತೆಕ್ಕೆಯಲ್ಲಿರುತ್ತಿತ್ತು.ವಿರೋಧಿ ಮತಗಳನ್ನು ಡಿವೈಡ್ ಮಾಡುವ ಮೂಲಕ ಬಿಎಸ್​ವೈ ತಮ್ಮ ಗೆಲುವನ್ನ ನಿಕ್ಕಿಗೊಳಿಸುತ್ತಿದ್ರು. ಅದೇ ರೀತಿಯಲ್ಲಿ ಈ ಸಲ ನಡೆಯುತ್ತಾ ಅನ್ನುವುದನ್ನ ನೋಡಿದ್ರೆ, ತುಸು ಕಷ್ಟ ಎನ್ನುತ್ತಿದ್ಧಾರೆ ಸ್ಥಳಿಯರು ಕಾರಣ ಒನ್ಸ್​ ಅಗೇನ್ ನಾಗರಾಜ್ ಗೌಡ,  ಈ ಸಲ ಬಂಡಾಯ ಅಭ್ಯರ್ಥಿಯನ್ನು ವಿರೋಧಿ ಮತಗಳು ಆಶ್ರಯಿಸುತ್ತಿವೆಯಂತೆ. ಹಾಗಾಗಿ ವೋಟು ಡಿವೈಡ್ ಆಗುವುದು ಸಹ ಕಷ್ಟ ಎಂಬ ಮಾತುಗಳಿವೆ 

ವಕ್ರೌಟ್ ಆಗುತ್ತಾ ವಿಜಯೇಂದ್ರ ತಂತ್ರಗಾರಿಕೆ?

ಹೆಚ್ಚಿನ ಲೀಡ್ ನಲ್ಲಿ ಗೆಲ್ಲಬೇಕು ಎಂದು ಪಣ ತೊಟ್ಟಿರುವ ಬಿ.ವೈ ವಿಜಯೇಂದ್ರ ಈಗ ಶತಾಯಗತಾಯ ಗೆಲ್ಲಬೇಕಾದ ವಾತಾವರಣ ಶಿಕಾರಿಪುರ ಕ್ಷೇತ್ರದಲ್ಲಿದೆ. ವಿಜಯೇಂದ್ರಗೆ ಚುನಾವಣೆ ಮಾಡಲು ಕೇವಲ ನಲ್ವತ್ತೆಂಟು ಗಂಟೆ ಸಾಕು ಎಂಬ ಮಾತಿದೆ.  ಚುನಾವಣಾ ಚಾಣಕ್ಯನಾಗಿರೋ ವಿಜಯೇಂದ್ರ ಈ ಮ್ಯಾಜಿಕ್ ಮಾಡಿದ್ರೂ, ಗೆಲುವು ಸಾಧ್ಯವಿದೆ. 




ಸಚಿವನಾದರೆ ಶಿವಮೊಗ್ಗದ ಬದಲಾವಣೆಗೆ ಹೊಸ ಶಕ್ತಿ! ಆಯನೂರು ಮಂಜುನಾಥ್ 

ಶಿವಮೊಗ್ಗ/ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರ್ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡ್ತಾ ನಾನು ಪ್ರಸ್ತಾಪಿಸಿದ ಒಪಿಎಸ್, ಎನ್ಪಿಎಸ್, ಪೊಲೀಸ್, ಅತಿಥಿ ಉಪನ್ಯಾಸಕರ ವಿಷಯಕ್ಕೆ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. 

ನಿನ್ನೆ ದಿನ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಬ್ರಾಹ್ಮಣ, ಮುಸ್ಲಿಂ ಹಾಗೂ ಇತರೆ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ .

ಕಾಂಗ್ರೆಸ್‌ ನ ಮುಖಂಡರು ಜೆಡಿಎಸ್ ಗೆ ಸೇರಿದ್ದಾರೆ. ನಿನ್ನೆಯ ಸಭೆ ಯಶಸ್ವಿಯಾಗಿದೆ. ನನ್ನ ಅರ್ಧ ಬೇಡಿಕೆ ಈಡೇರಿದೆ ಎಂದರು



ಶಿವಮೊಗ್ಗ ನಗರದಲ್ಲಿ ಸುಮಾರು 5 ಸಾವಿರ ನಿವೃತ್ತ ನೌಕರರಿಗೂ ಕುಮಾರಸ್ವಾಮಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ ಅವರು ಪೊಲೀಸ್ ಇಲಾಖೆಯಲ್ಲಿ ವೇತನ ತಾರತಮ್ಯವಿದ್ದು ಅದನ್ನು ನಿವಾರಿಸಬೇಕಿದೆ.

ಕಾರ್ಮಿಕರ ಕಲ್ಯಾಣಕ್ಕೂ ಸಾಕಷ್ಟು ಅವಕಾಶವಿದೆ.   ಶಿವಮೊಗ್ಗದ ಅವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸಬೇಕಿದೆ. ಈ ಎಲ್ಲಾ ಬೇಡಿಕೆಯ  ಬಗ್ಗೆ ಕುಮಾರಸ್ವಾಮಿ ಸಕಾರಾತ್ಮಕವಾಗಿ  ಸ್ಪಂದಿಸುತ್ತಿದ್ದಾರೆ.  ಹಾಗಾಗಿ ನನಗೆ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದರು

ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಆಯನೂರು ಮಂಜುನಾಥ್​ ಸಚಿವನಾದರೆ ಶಿವಮೊಗ್ಗದ ಬದಲಾವಣೆಗೆ ಶಕ್ತಿ ಸಿಗಲಿದೆ ಎಂದರು. 

 

ಇನ್ನೂ ಇದೇ ವೇಳೆ ಮಾಜಿ ಎಂಎಲ್​ಎ ಕೆಬಿ ಪ್ರಸನ್ನಕುಮಾರ್​ ಮಾತನಾಡಿ,  ನಿನ್ನೆ ಕುಮಾರಸ್ವಾಮಿ ಆಡಿದ ಮಾತು ಹಲವು ಸಮಾಜಕ್ಕೆ ಭರವಸೆ ತಂದುಕೊಡುವ ಮಾತನಾಡಿದ್ದಾರೆ. ಬ್ರಾಹ್ಮಣ ಸಮಾಜಕ್ಕೆ ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದಾರೆ.  ಮೊದಲ ಬಾರಿ ಕುಮಾರಸ್ವಾಮಿ ಸಿಎಂ ಬೆಂಗಳೂರಿನಲ್ಲಿ ಬ್ರಾಹ್ಮಣಕ್ಕೆ ದೊಡ್ಡ ನಿವೇಶನ ನೀಡಿದ್ದಾರೆ .ಎರಡನೇ ಬಾರಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನ ಒದಗಿಸಿದ್ದರು. ಆದರೆ ಬಿಜೆಪಿ ಸರ್ಕಾರ ನಿಗಮಕ್ಕೆ ಅನುದಾನ ನೀಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ರು.  

Malenadutoday.com Social media