Karnataka election / ಈ ಸಲ ಯಾರೆ ಗೆದ್ದರು, ಶಿವಮೊಗ್ಗ ನಗರಕ್ಕೆ ಸಿಗೋದು ಹೊಸ ಎಂಎಲ್​ಎ !

Karnataka election / Whoever wins this time, Shivamogga city gets a new MLA!

Karnataka election /  ಈ ಸಲ ಯಾರೆ ಗೆದ್ದರು, ಶಿವಮೊಗ್ಗ ನಗರಕ್ಕೆ ಸಿಗೋದು ಹೊಸ ಎಂಎಲ್​ಎ !

KARNATAKA NEWS/ ONLINE / Malenadu today/ May 7, 2023 GOOGLE NEWS 

ಶಿವಮೊಗ್ಗ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಕ್ಷಣದವರೆಗೂ ಹೈಟೆನ್ಶನ್​ ಕುತೂಹಲ ನೀಡಿ ಅಚ್ಚರಿಯ ಅಭ್ಯರ್ಥಿಗಳ ಆಯ್ಕೆಗೆ ಕಾರಣವಾದ ಕ್ಕ್ಷೇತ್ರ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 

ಈ ಕ್ಷೇತ್ರದ ವಿಚಾರದಲ್ಲಿ ಇದೀಗ ಫಲಿತಾಂಶ ಕೂಡ ಏನಾಗಬಹುದು ಎಂಬ ಕುತೂಹಲ ಹಾಗೂ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವರು ಯಾರಿಗೆ ವೋಟು ಹಾಕಬೇಕು ಎಂದು ವಿಚಾರಿಸ್ತಾ ಟ್ರೆಂಡ್ ಹುಡುಕುತ್ತಿದ್ದರೆ, ಇನ್ನು ಕೆಲವರು ಪಕ್ಷಾಧರಿತವಾಗಿ ಯಾವ ಪಾರ್ಟಿ ಬರುತ್ತೆ ಎಂಬ ಸಮಾಲೋಚನೆಯಲ್ಲಿದ್ದಾರೆ. 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ

ಈ ಸಲ ಗೆಲ್ಲೋದು ಯಾರು?

ಮತ್ತೆ ಕೆಲವರು ತಾವು ಹಾಕುವ ವೋಟು ವೆಸ್ಟ್ ಆಗಬಾರದು, ಯಾರು ಗೆಲ್ಲುತ್ತಾರೆ ಈ ಸಲ ಅಂತಾ ಟೀ ಶಾಪ್​ಗಳಲ್ಲಿ, ಹೋಟೆಲ್​ಗಳಲ್ಲಿ, ಹೇರ್​ ಡ್ರೆಸಸ್​ ಸೆಂಟರ್​ಗಳಲ್ಲಿ ಏರಿಯಾದ ರಸ್ತೆಗಳು ಕೂಡುವ ಸರ್ಕಲ್​ಗಳಲ್ಲಿ ನಿಂತು ವಿಚಾರಿಸುತ್ತಿದ್ದಾರೆ. 

ಸಾರ್ವಜನಿಕ ಸ್ಥಳಗಳಲ್ಲಿ ಈ ಸಲ ಯಾರು ಬರ್ತಾರೆ ಅನ್ನುವ ಪ್ರಶ್ನೆಯಂತು ಬಹಳ ವಿಶೇಷವಾಗಿ ಚರ್ಚೆಗೊಳಗಾಗುತ್ತಿದೆ. ಯಾವುದೇ ಅಲೆಯಿಲ್ಲದ ಹಾಗೂ ವೈಯಕ್ತಿಕ ಪ್ರತಿಷ್ಟೆ ಹಾಗೂ ಪ್ರಭಾವವಿಲ್ಲದ ಚುನಾವಣೆ ಇದಾಗಿದೆ. ಆ ಕಾರಣಕ್ಕೆ ಜನರು ತರಹೆವಾರಿ ಚರ್ಚೆಗಳನ್ನ ನಡೆಸ್ತಿದ್ದಾರೆ. ಮೇಲಾಗಿ ತಮ್ಮದೆ ಕಾರಣಗಳನ್ನು ಮುಂದಿಟ್ಟು, ಹೀಗೀಗೆ ಆಗುತ್ತದೆ ಎಂದು ವಿಮರ್ಶೆ ಮಾಡುತ್ತಿದ್ದಾರೆ. ಬಜರಂಗದಳ ಬ್ಯಾನ್​ ನಿಂದ ಹಿಡಿದು ಹರುಕು ಬಾಯಿಗೆ ಹೊಲಿಗೆ ಬೀಳುವ ಪದಗಳವರೆಗೂ ಶಿವಮೊಗ್ಗ ನಗರದಲ್ಲಿ ಈ ಕ್ಷಣದವರೆಗೂ ಸಾಕಷ್ಟು ನಡೆಯುತ್ತಿದೆ ಚರ್ಚೆ.. 

ಈ ಸಲ ಹೊಸ ಎಂಎಲ್​ಎ

ಈ ಸಲ ಶಿವಮೊಗ್ಗದಲ್ಲಿ ಯಾರೆ ಗೆದ್ದರು ಸಹ ಶಿವಮೊಗ್ಗ ನಗರಕ್ಕೆ ಹೊಸ ಎಂಎಂಎ ಆಯ್ಕೆಯಾಗುತ್ತಾರೆ ಎಂಬುದು ವಿಶೇಷವಾಗಿದೆ. ಆಯನೂರು ಮಂಜುನಾಥ್​, ಹೆಚ್​ಸಿ ಯೋಗೇಶ್​ ಹಾಗೂ ಚೆನ್ನಬಸಪ್ಪ ಆಪ್​ ಪಕ್ಷದ ಟಿ ನೇತ್ರಾವತಿ ಸೇರಿದಂತೆ ಕಣಕ್ಕಿಳಿದಿರುವ ಕ್ಯಾಂಡಿಡೇಟ್​ಗಳ ಪೈಕಿ ಯಾರೆ ಗೆದ್ದರು, ಶಿವಮೊಗ್ಗ ನಗರಕ್ಕವರು ಹೊಸ ಎಂಎಲ್​ಎನೇ ಆಗುತ್ತಾರೆ. 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ

ಅಂತಿಮ ಕ್ಷಣದಲ್ಲಿಯೇ ನಿರ್ಧಾರ

ಈಶ್ವರಪ್ಪನವರ ನಿವೃತ್ತಿ ಶಿವಮೊಗ್ಗ ನಗರದಲ್ಲಿ ಹೊಸ ಅಭ್ಯರ್ಥಿಗೆ ದಾರಿಮಾಡಿಕೊಟ್ಟಿದ್ದರೇ, ಕಾಂಗ್ರೆಸ್ ಜೆಡಿಎಸ್ ಅಚ್ಚರಿಯ ಕ್ಯಾಂಡಿಟೇಟ್​ನ್ನ ಕಣಕ್ಕಿಳಿಸಿದೆ. ಇನ್ನೂ ಆರಂಭದಿಂದ ಇಲ್ಲಿವರೆಗೂ ಶಿವಮೊಗ್ಗ ನಗರ ತ್ರಿಕೋನ ಸ್ಪರ್ಧೆಯಾಗಿಯೇ ಕಾಣುತ್ತಿದ್ದು,

ಕುತೂಹಲದ ಮತ ಎಣಿಕೆಯ ಸುಳಿವು ನೀಡಿದೆ. ಫಿನಿಕ್ಸ್​ನಂತೆ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಯಾವುದೇ ಟ್ರೆಂಡ್ ಸೆಟ್ ಆಗಲು ಅನುವುಮಾಡಿಕೊಟ್ಟಿಲ್ಲ. ಮತದಾರ ಬೂತ್​ಗೆ ಹೋದಮೇಲೆಯೇ ಯಾರಿಗೆ ಮತಹಾಕಲಿ ಎಂದು ನಿರ್ಧರಿಸುವ ಅವಕಾಶ ಲಭ್ಯವಾಗಿದೆ. ಹಾಗಾಗಿ ಅಂತಿಮಕ್ಷಣದಲ್ಲಿ ಯಾರಿಗೆ ಬೇಕಾದರೂ ವೋಟು ಬೀಳಬಹುದು. 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ

ವ್ಯಕ್ತಿಗತ ವಿಶ್ವಾಸ ಭರವಸೆಯೇ ಮುಖ್ಯ

ಇನ್ನೂ ಶಿವಮೊಗ್ಗ ನಗರದಲ್ಲಿ ಈ ಸಲ ಜಾತಿಗಿಂತಲೂ ವ್ಯಕ್ತಿ ಮುಖ್ಯವಾಗುತ್ತಿದ್ದಾರೆ. ಕಣಕ್ಕಿಳಿದಿರುವ ಮೂರು ಪ್ರತಿಷ್ಟ್ರಿತ ಪಕ್ಷಗಳ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ಧಾರೆ. ಆ ಸಮುದಾಯದ ಮತಗಳು ದೊಡ್ಡ ಸಂಖ್ಯೆಯಲ್ಲಿದೆಯಾದರೂ ಮೂವರಲ್ಲಿ ಯಾರನ್ನ ಆಯ್ಕೆ ಮಾಡುವುದು ಎಂಬುದು ವ್ಯಕ್ತಿಗತ ತೀರ್ಮಾನವಾಗುವ ಸಾಧ್ಯತೆ ಇದೆ. 

ಬ್ರಾಹ್ಮಣರ ಮತಗಳನ್ನು ಸೆಳೆಯಲು ಬಿಜೆಪಿ ಹಾಗೂ ಈ ಹಿಂದೆ  ಶಿವಮೊಗ್ಗ ಶಾಸಕರಾಗಿದ್ದ ಕೆಬಿ ಪ್ರಸನ್ನಕುಮಾರ್​ರವರು ತಾವು ಸೇರ್ಪಡೆಗೊಂಡಿರುವ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸಮುದಾಯದಲ್ಲಿ ಮಾತ್ರ ಯಾರು ಒಳ್ಳೆಯವರು ಅಭ್ಯರ್ಥಿಗಳಲ್ಲಿ ಎಂಬ ಸಮಾಲೋಚನೆ ನಡೆಯುತ್ತಿದೆ.

bhadravati /  ಭದ್ರಾವತಿ ವಿಧಾನಸಭಾ ಕ್ಷೇತ್ರ ! ಯಾರು ನಿರ್ಣಾಯಕ? ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ

ಶಿವಮೊಗ್ಗದಲ್ಲಿ ಪ್ರಬಲವಾಗಿರುವ ಹಾಗೂ ನಿರ್ಣಾಯಕವಾಗಿರು ಮುಸ್ಲಿಮ್ ಮತದಾರರಲ್ಲಿಯು ಈ ಸಲ ಯಾವುದೇ ಸಾರಾಸಗಟು ನಿರ್ಣಯವಾಗಿಲ್ಲ. ಎಕೆಂದರೆ ಕಣಕ್ಕಿಳಿದಿರುವ ಅಭ್ಯರ್ಥಿಗಳು ಸಮುದಾಯದಲ್ಲಿ ಚಿರಪರಿಚಿತರು. ಬೇಕಾದವರು ಎನ್ನುವಾಗ ಯಾರಿಗೆ ವೋಟು ಹಾಕೋದು ಎಂಬುದು ತಿರ್ಮಾನ ಕಷ್ಟ…ಕಷ್ಟ ಅಂತಿದೆ ಅಲ್ಪಸಂಖ್ಯಾತ ಸಮುದಾಯ. ಆದಾಗ್ಯು ದೊಡ್ಡ ಮಟ್ಟಿಗಿನ ವೋಟು ಈ ಸಲ ನಿರ್ಣಾಯಕ ವ್ಯಕ್ತಿಗೆ ಸೇರುವ ಸಾಧ್ಯತೆಯನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. 

 

ಉಳಿದಂತೆ ಪರಿಶಿಷ್ಟ ಸಮುದಾಯದಲ್ಲಿ, ವಿವಿಧ  ಪ್ರದೇಶಗಳಿಗೆ ಅನುಗುಣವಾಗಿ ಹೆಸರು ಹೊಂದಿದ್ಧಾರೆ. ಶಿವಮೊಗ್ಗ ನಗರ ಪಾಲಿಕೆಯಲ್ಲಿ ಕೆಲಸ ಮಾಡಿದ ಕಾರಣಕ್ಕಾಗಿ ಇನ್ನೊಂದೆಡೆ ಕಾರ್ಮಿಕರ ಪರವಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮದೆ ಆದ ವಿಶ್ವಾಸವನ್ನು ಹೊಂದಿದ್ದಾರೆ. 

bhadravati /  ಭದ್ರಾವತಿ ವಿಧಾನಸಭಾ ಕ್ಷೇತ್ರ ! ಯಾರು ನಿರ್ಣಾಯಕ? ಕ್ಷೇತ್ರದಲ್ಲಿ ಹೇಗಿದೆ ಪೈಪೋಟಿ

ಎಲೆಕ್ಷನ್​ಗೆ ಸಿದ್ದತೆ ಹೇಗಿದೆ? ಜಿಲ್ಲಾಡಳಿತ ಹೇಳಿದ್ದೇನು? ಮತ ಎಣಿಕೆ ಎಲ್ಲಿ? ಮತದಾರರು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

 

ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆ 2023 ಗೆ ಶಿವಮೊಗ್ಗ ಜಿಲ್ಲಾಡಳಿತ ಸಜ್ಜಾಗಿದೆ. ಈ ಸಂಬಂಧ ಕೈಗೊಂಡ ಸಿದ್ದತೆ ಹಾಗೂ ಸಾರ್ವಜನಿಕರಿಗೆ ನೀಡಬೇಕಾದ ಮಾಹಿತಿಗಳನ್ನ ಒದಗಿಸಿದೆ. 

 

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.

 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ 

 

ಒಟ್ಟು ಮತದಾರರ ಸಂಖ್ಯೆ

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 728886 ಪುರುಷ, 743713 ಮಹಿಳಾ, 32 ಇತರೆ ಹಾಗೂ 696 ಸೇವಾ ಮತದಾರರು ಸೇರಿ ಒಟ್ಟು 1473327 ಮತದಾರರಿದ್ದಾರೆ.

 

ಮತಗಟ್ಟೆ & ಅಧಿಕಾರಿಗಳ ನೇಮಕ:  

ಜಿಲ್ಲಾ ವ್ಯಾಪ್ತಿಯಲ್ಲಿ  1775 + 07 ಪೂರಕ ಸೇರಿದಂತೆ ಒಟ್ಟು 1782 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಮತದಾನಕ್ಕೆ ಸಂಬಂಧಿದಂತೆ 2050 ಪಿಆರ್​ಒ 2050 ಎಪಿಆರ್‍ಓ, 4100 ಪಿಓ ಸೇರಿದಂತೆ ಒಟ್ಟು 8200 ಮತಗಟ್ಟೆ ಅಧಿಕಾರಿ/ಸಿ ಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾಗೂ 83 ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಕ ಮಾಡಲಾಗಿದೆ.

 

ಬಸ್ ನಿಯೋಜನೆ:     

ಒಟ್ಟು 8156 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ 16 ಬಸ್, ಭದ್ರಾವತಿಗೆ 40, ಶಿವಮೊಗ್ಗ ನಗರಕ್ಕೆ 15, ತೀರ್ಥಹಳ್ಳಿಗೆ 45, ಶಿಕಾರಿಪುರಕ್ಕೆ 43, ಸೊರಬಕ್ಕೆ 36, ಸಾಗರಕ್ಕೆ 31 ಮತ್ತು ಹೊಸನಗರಕ್ಕೆ 14 ಸೇರಿದಂತೆ ಒಟ್ಟು 240 ಬಸ್‍ಗಳನ್ನು ನಿಯೋಜಿಸಲಾಗಿದೆ.

 

ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಸ್ಥಳ :

ಶಿವಮೊಗ್ಗ ಗ್ರಾಮಾಂತರ -111 ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮತ್ತು ಎಸ್.ಆರ್.ನಾಗಪ್ಪಶೆಟ್ರಿ ಸ್ಮರಕ ರಾಷ್ಟ್ರೀಯ ಅನ್ವಯಿಕ ಸೈನ್ಸ್ ಪಿಯು ಕಾಲೇಜ್, ಶಿವಮೊಗ್ಗ.

 

 ಭದ್ರಾವತಿ-112 ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ. ಶಿವಮೊಗ್ಗ-113 ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ.

 

 ತೀರ್ಥಹಳ್ಳಿ-114 ಡಾ.ಯು.ಆರ್ ಅನಂತಮೂರ್ತಿ ಕಾಲೇಜು ತೀರ್ಥಹಳ್ಳಿ. ಶಿಕಾರಿಪುರ-115 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ. ಸೊರಬ-116 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ. ಸಾಗರ-117 ಸರ್ಕಾರಿ ಪದವಿಪೂರ್ವ ಕಾಲೇಜು ಸಾಗರ. ಇನ್ನೂ ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

MISSING /  ಇವರಿಬ್ಬರನ್ನ ಎಲ್ಲಾದರೂ ಕಂಡೀದ್ದೀರಾ? ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

 

ಶಿವಮೊಗ್ಗ & ದಾವಣಗೆರೆ ಹಾಗೂ  ಹರಿಹರದಿಂದ ಇಬ್ಬರು ವ್ಯಕ್ತಿಗಳು ಕಾಣೆಯಾಗಿದ್ದಾರೆ. ಅವರ ಸುಳಿವು ಸಿಕ್ಕಲ್ಲಿ ಹುಡುಕಿಕೊಡಿ  ಎಂದು ಪ್ರಕಟಣೆ ನೀಡಲಾಗಿದೆ. ಈ ಇಬ್ಬರು ವ್ಯಕ್ತಿಗಳ ಗುರುತು ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ದೂರವಾಣಿ ಸಂಖ್ಯೆಯನ್ನು ಕೂಡ ನೀಡಲಾಗಿದೆ. 

 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ 

ದಾವಣಗೆರೆ ಯಲ್ಲಮ್ಮನಗರದಿಂದ ವ್ಯಕ್ತಿ ನಾಪತ್ತೆ

 

ದಾವಣೆಗೆರೆಯ ಯಲ್ಲಮನಗರ, ದೇವರಾಜ ಅರಸ್ ಬಡಾವಣೆ 4ನೇ ಕ್ರಾಸ, 3ನೇ ಮುಖ್ಯರಸ್ತೆ ವಾಸಿ ಬಸವರಾಜು ಎಂಬುವವರ ಮಗ 45 ವರ್ಷದ ಗುರುರಾಜು ನಾಪತ್ತೆಯಾಗಿದ್ದಾರೆ. 

ಇವರು 2023ರ ಜನವರಿ 03 ರಂದು ಮನೆ ಬಿಟ್ಟು ಹೋಗಿರುತ್ತಾರೆ. ಈತನ ಚಹರೆ 5.5 ಅಡಿ ಎತ್ತರ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

 

ಹರಿಹರದಿಂದ ಯುವಕ ಕಾಣೆ

 

ಹರಿಹರ ನಗರದ ಮಹಾತ್ಮಗಾಂಧಿ ಪ್ರದೇಶ, 16ನೇ ಕ್ರಾಸ್ ಟ್ಯಾಂಕ್ ಹತ್ತಿರ ವಾಸವಿರುವ ಹಫೀಜ್ ಸಾಬ್ ಎಂಬುವವರ ಮಗ  35 ವರ್ಷದ ಫೈರೋಜ್ ಖಾನ್ ಎಂಬುವವರು  ದಿ: 05/06/2022 ಕಾಣೆಯಾಗಿರುತ್ತಾರೆ.   

 

ಈತನ ಚಹರೆ ಸುಮಾರು 5.8 ಅಡಿ ಎತ್ತರ, ಎಣ್ಣೆಗೆಂಪು  ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈ ಕಟ್ಟು ಹೊಂದಿದ್ದು, ಕಾಣೆಯಾದ ವೇಳೆ ಕಪ್ಪು ಬಣ್ಣದ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

 

Karnataka election/  ಕಡೆಯ ಆಟ... ಕೊನೆಯ ಪ್ರಚಾರ... ಸ್ಟಾರ್​ ಅಭ್ಯರ್ಥಿ,  ಸ್ಟಾರ್​ ಪ್ರಚಾರ/ ಸ್ವಾಭಿಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ 

 

 ವಿವಿಧ ದಿನಾಂಕಗಳಂದು ಕಾಣೆಯಾದ ಇವರು ಎಲ್ಲಿಯಾದರೂ ಕಂಡು ಬಂದಲ್ಲಿ ಹರಿಹರ ನಗರ ಪೊಲೀಸ್ ಠಾಣೆ-08192-272016/ 9480803257, ದಾವಣಗೆರೆ-08192-253100/08192-253400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.   

Read/ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ/ ಇಬ್ಬರ ದುರ್ಮರಣ 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

 

Malenadutoday.com Social media