ಚುನಾವಣಾ ಅಖಾಡದಲ್ಲಿ ಮನೆ ‘ಮಗಳು’ ಅಭ್ಯರ್ಥಿಗಳಿಗೆ ಗೆಲುವು ತಂದುಕೊಡ್ತಾರಾ ಅದೃಷ್ಟ ಲಕ್ಷ್ಮೀಯರು?

Daughters of candidates seeking votes during election campaign

ಚುನಾವಣಾ ಅಖಾಡದಲ್ಲಿ ಮನೆ ‘ಮಗಳು’  ಅಭ್ಯರ್ಥಿಗಳಿಗೆ ಗೆಲುವು ತಂದುಕೊಡ್ತಾರಾ  ಅದೃಷ್ಟ ಲಕ್ಷ್ಮೀಯರು?

KARNATAKA NEWS/ ONLINE / Malenadu today/ May 4, 2023 GOOGLE NEWS

ಶಿವಮೊಗ್ಗ/  ಜಿಲ್ಲೆಯ ಚುನಾವಣೆ ಹೊಸ ರಂಗು ಪಡೆದುಕೊಳ್ಳುತ್ತಿದೆ. ರಾಜಕೀಯದ ಅಖಾಡದಲ್ಲಿ ಅಭ್ಯರ್ಥಿಗಳ ಸಂಬಂಧಿಕರು, ಕುಟುಂಬಸ್ಥರು ಅಷ್ಟೆಯಾಕೆ ಮಕ್ಕಳು ಸಹ ಮತಯಾಚನೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್​ಸಿ ಯೋಗೇಶ್  ಪರವಾಗಿ ಅವರ ಪತ್ನಿ ಹಾಗೂ ಅವರ ಕುಟುಂಬಸ್ಥರು ಬಂದು ಬಳಗ ಪ್ರಚಾರ ನಡೆಸ್ತಿದೆ. ಇದು ಪಕ್ಷದಲ್ಲಿಯೇ ಅಸಮಾಧಾನಕ್ಕೂ ಕಾರಣವಾಗಿದೆ. ಹಾಗಿದ್ರೂ ಪ್ರಚಾರ ನಂಬಿಕೆಯ ವಿಶ್ವಾಸ ಮೂಡಿಸ್ತಿದೆ. 

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪರವರ ಪತ್ನಿ ಕೂಡ ಪ್ರಚಾರದಲ್ಲಿ ಸಾಥ್ ನೀಡುತ್ತಿದ್ದಾರೆ.  ಸೊರಬದಲ್ಲಿ ಮಧು ಬಂಗಾರಪ್ಪರವರ ಪತ್ನಿ ಪ್ರಚಾರದಲ್ಲಿ ತೊಡಗಿದ್ಧಾರೆ. ಭದ್ರಾವತಿಯಲ್ಲಿ ಬಿಕೆ ಸಂಗಮೇಶ್ವರ್​ರವರ ಪರವಾಗಿ ಅವರ ಮಕ್ಕಳು ಚುನಾವಣಾ ಓಡಾಟದಲ್ಲಿ ಸಕ್ರಿಯವಾಗಿದ್ಧಾರೆ. ಹೀಗೆ ಪ್ರತಿಯೊಬ್ಬ ಅಭ್ಯರ್ಥಿಯ ಪರವಾಗಿ ಅವರ ಮನೆಯ ಕಡೆಯವರು ಓಡಾಡುತ್ತಿದ್ಧಾರೆ. 

ಇದರ ನಡುವೆ ಕುತೂಹಲ ಮೂಡಿಸುತ್ತಿರುವುದು ಮನೆಯ ಅದೃಷ್ಟ ಲಕ್ಷ್ಮೀಯರು. ಹೌದು, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣರ ಪರವಾಗಿ ಅವರ ಮಗಳು ಮೇಘ ಪ್ರಚಾರ ನಡೆಸ್ತಿದ್ದಾರೆ. ಇದು ಚುನಾವಣಾ ಅಖಾಡದಲ್ಲಿಯು ಸಂಚಲನ ಮೂಡಿಸ್ತಿದೆ. ನಿನ್ನೆ ಆನಂದಪುರದಲ್ಲಿ ಪ್ರಚಾರ ನಡೆಸಿದ್ದ ಮೇಘಾ ಇವತ್ತು ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. 

ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಸ್ಪರ್ಧಿಸಿರುವ ಶಾಸಕ ಎಸ್. ಕುಮಾರ್ ಬಂಗಾರಪ್ಪ ಪರವಾಗಿ ಅವರ ಪುತ್ರಿ ಲಾವಣ್ಯ ಪ್ರಚಾರದಲ್ಲಿ ತೊಡಗಿದ್ದಾರೆ. ಇವತ್ತು ಅವರು ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ತಮ್ಮ ತಂದೆ ಪರವಾಗಿ ಮತಯಾಚಿಸಿದ್ರು. ಮತ್ತಷ್ಟು ಅಭಿವೃದ್ಧಿ ಮಾಡಲು ತಮ್ಮ ತಂದೆಗೆ ಮತಕೊಡಿ ಎಂದು ಕೇಳುತ್ತಿದ್ದಾರೆ. 

 

ಮನೆ ಹೆಣ್ಣುಮಕ್ಕಳು ಚುನಾವಣಾ ರಾಜಕೀಯದ ಅಖಾಡದಲ್ಲಿ ವಿಶ್ವಾಸ ಮೂಡಿಸುವ ಹಾಗೆ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿರುವುದು ವಿಶೇಷವಾಗಿ ಕಾಣುತ್ತಿದೆ. ಗಂಡು ಮಕ್ಕಳು ಅಧಿಕಾರಯುತವಾಗಿ ಪ್ರಚಾರ ಮಾಡುವುದು ಸಾಮಾನ್ಯ. ಇದಕ್ಕೆ ಪ್ರತಿಯಾಗಿ ಸೊರಬ ಹಾಗೂ ಸಾಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪುತ್ರಿಯರು ಮತ ಯಾಚಿಸ್ತಿದ್ಧಾರೆ. ಮತದಾರ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸ್ತಾನೆ ಎಂಬುದನ್ನ ಕಾದು ನೋಡಬೇಕಿದೆ. 

Malenadutoday.com Social media