KARNATAKA NEWS/ ONLINE / Malenadu today/ Apr 27, 2023 GOOGLE NEWS
ಶಿವಮೊಗ್ಗ/ ಶಿವಮೊಗ್ಗದ ಜನಪ್ರತಿನಿಧಿಗಳಲ್ಲಿ ಬಹುತೇಕರು ಬೆಂಗಳೂರು ವಾಸಿಗಳೇ ಆಗಿದ್ದಾರೆ..ಆಮ್ ಆದ್ಮಿ ಪಾರ್ಟಿ ದಿವಾಕರ್ ಹೀಗೆ ಹೇಳಿದ್ದೇಕೆ?
ನಮ್ಮನ್ನು ಬೆಂಬಲಿಸಿ
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ. ದಿವಾಕರ್ ತಮ್ಮನ್ನು ಬೆಂಬಲಿಸುವಂತೆ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಓದಿ / ಡಿಪ್ಲೋಮೋ ಕೋರ್ಸ್ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 % ಉದ್ಯೋಗಾವಕಾಶ/ ವಿವರ ಇಲ್ಲಿದೆ
ಬುದ್ದಿಜೀವಿಗಳೇ ಹೆಚ್ಚಿದ್ದಾರೆ
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬುದ್ದಿಜೀವಿಗಳೇ ಹೆಚ್ಚಿದ್ದಾರೆ. ಆಮ್ ಆದ್ಮಿ ಪಕ್ಷ ನೀಡಿದ ಪ್ರನಾಳಿಕೆಯಂತೆ ಜನರ ಭರವಸೆಯನ್ನು ಈಡೇರಿಸಲಾಗಿದೆ. ಹೀಗಾಗಿ ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ದಿವಾಕರ್ ಹೇಳಿದ್ದಾರೆ.
ಸಾಗರದಲ್ಲಿ ಹರತಾಳು ಹಾಲಪ್ಪ ಬಂದ ನಂತರ ಎಂ.ಎಸ್.ಐ.ಎಲ್ ಶಾಪ್ ಗಳ ಸಂಖ್ಯೆ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ಯುವಜನತೆ ಮಧ್ಯ ಸೇವನೆ ಮಾಡುತ್ತಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮತ ಕೇಳಲು ಹೋದ ಸಂದರ್ಭದಲ್ಲಿ ಮತದಾರರು ಮೊದಲು ವೈನ್ ಶಾಪ್ ಕ್ಲೋಸ್ ಮಾಡಿಸಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ.
ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
7 ಸಾವಿರಕ್ಕೂ ಅಧಿಕ ಕೇರಳದವರಿದ್ದಾರೆ
ಸಾಗರದ ಸುತ್ತಮುತ್ತ ಜಮೀನು ಖರೀದಿಸುವವರಲ್ಲಿ ಹೊರಗಿನವರ ಸಂಖ್ಯೆ ಹೆಚ್ಚಿದೆ.ಕ್ಷೇತ್ರದಲ್ಲಿ 7000 ಕ್ಕೂ ಅಧಿಕ ಕೇರಳದವರು ಇದ್ದು, ಭೌಗೋಳಿಕವಾಗಿ ಸಾಗರ ಗ್ರಾಮಾಂತರ ಭಿನ್ನವಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ನೆಲೆಸಿದ್ದು ಸಾಗರ ಕ್ಷೇತ್ರದ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರೀಯಿಸಿ ಮಾತನಾಡಿದ ಅವರು ಹಾಲಿ ಇರುವ ಜನಪ್ರತಿನಿಧಿಗಳಲ್ಲಿ ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್ ಹೊರತು ಪಡಿಸಿ ಬಹುತೇಕರು ಬೆಂಗಳೂರಿನ ವಾಸಿಗಳೇ ಆಗಿದ್ದಾರೆ.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಹಾಲಪ್ಪನವರು ಬೆಂಗಳೂರಿನವರೇ ಆಗಿದ್ದಾರೆ. ಗೋಪಾಲಕೃಷ್ಣ ಬೇಳೂರು,ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಅಷ್ಟೇ ಏಕೆ ಬಿ.ಎಸ್ .ಯಡಿಯೂರಪ್ಪನವರು ಕೂಡ ಬೆಂಗಳೂರಿನ ವಾಸಿಗಳಾಗಿದ್ದಾರೆ.
ಹೈಕೋರ್ಟ್ ನಲ್ಲಿ ವಕೀಲನಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಅಲ್ಲಿ ವಾಸವಾಗಿದ್ದೇನೆ. ಆದರೆ ಮೂಲನೆಲೆಸಾಗರವಾಗಿದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ನನ್ನ ನೇರ ಪ್ರತಿಸ್ಪರ್ಧಿ ಏನಿದ್ದರೂ ಕಾಂಗ್ರೇಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎಂದು ದಿವಾಕರ್ ಹೇಳಿದ್ದಾರೆ.
Malenadutoday.com Social media