ಶಿವಮೊಗ್ಗದಲ್ಲಿ ಮಧು ಬಂಗಾರಪ್ಪರಿಂದ ಮೊದಲ ಸಭೆ! ಸಚಿವರ ಎದುರು ಅಧಿಕಾರಿಗಳಿಗೆ ಬೇಳೂರು ಗೋಪಾಲಕೃಷ್ಣ ಫುಲ್​ ಕ್ಲಾಸ್​!

Madhu Bangarappa holds first meeting in Shivamogga Belur Gopalakrishna full class for officers in front of minister!

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪರಿಂದ ಮೊದಲ ಸಭೆ! ಸಚಿವರ ಎದುರು ಅಧಿಕಾರಿಗಳಿಗೆ ಬೇಳೂರು ಗೋಪಾಲಕೃಷ್ಣ ಫುಲ್​ ಕ್ಲಾಸ್​!

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS

ಶಿವಮೊಗ್ಗ/ ಸಚಿವರಾದ ಬಳಿಕ ಇದೇ ಮೊದಲ ಸಲ ಶಿವಮೊಕ್ಕೆ ಬಂದಿರುವ ಸಚಿವರ ಮಧು ಬಂಗಾರಪ್ಪರವರು ಇವತ್ತು ಅಧಿಕಾರಿಗಳೊಂದಿಗೆ ಅನೌಪಚಾರಿಕ ಸಭೆ ನಡೆಸಿದರು. 

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ಮಾಹಿತಿ ಪಡೆದರು, ಈ ಸಭೆಯಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಎಸ್.ಪಿ. ಮಿಥುನ್ ಕುಮಾರ್, ಜಿ.ಪಂ. ಸಿಇಓ ಸ್ನೇಹಲ್ ಲೋಖಂಡೆ  ಪಾಲ್ಗೊಂಡಿದ್ದರು. 

ಮೊರಾರ್ಜಿ ದೇಸಾಯಿ ಶಾಲೆ ಆವರಣದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ

ಇನ್ನೂ ಇದೇ ವೇಳೆ,  ಸಾಗರದಲ್ಲಿ ಡಯಾಲಿಸಿಸ್ ಯಂತ್ರಗಳು ಸರಿಯಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು. ಅಲ್ಲದೆ  ಡಿಹೆಚ್ಓ ಮೇಲೆ ಹರಿಹಾಯ್ದರು.  ಇರುವ 7 ಡಯಾಲಿಸಿಸ್ ಯಂತ್ರಗಳು ಕೆಲಸ ಮಾಡಿಲ್ಲ ಎಂದಾದರೆ ಬದಲಾಯಿಸಿ, ಯಾಕೆ ಬದಲಾಯಿಸಲು ಹಣ ಇಲ್ವ!ಯಂತ್ರ ಸರಿಪಡಿಸಲು ಆಗಿಲ್ಲವೆಂದಾದರೆ, ಆ ಬೋರ್ಡ್ ನ್ನು ಮುಚ್ಚಿಬಿಡಿ ಎಂದರು. 

ನಮ್ಮ ಬಳಿ ಬಡವರು ಬರ್ತಾರೆ ಕಣ್ರೀ, ಪಾಪ ಆ ಬಡವರು ಏನು ಮಾಡಬೇಕು.ಶಿವಮೊಗ್ಗಕ್ಕೆ ಬಂದು ಹೋಗಲು ಅವರ ಬಳಿ ಹಣ ಇರಲ್ಲ.ಡಿಸಿಯವರೇ, ಈ ಬಗ್ಗೆ ಅಧಿಕಾರಿಗಳಿಗೆ ಸರಿಯಾಗಿ ಹೇಳಿ. ಇವರಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ ಎಂದರು. 

ಇವರ ಬಗ್ಗೆ ಸುಳಿವು ಸಿಕ್ಕರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ!

ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಮಧು ಬಂಗಾರಪ್ಪ ,  ಡಿಸಿಯವರೇ ಇದಕ್ಕೆ ಬೇಕಾದ ಅನುದಾನದ ಬಗ್ಗೆ ನೋಡಿ ಎಂದು ಸಲಹೆ ನೀಡಿ, ಕೂಡಲೇ ಡಯಾಲಿಸಿಸ್ ಯಂತ್ರ ಸರಿಪಡಿಸಲು ಸೂಚನೆ ನೀಡಿದರು. 

ಇನ್ನೂ ಇದಕ್ಕೂ ಮೊದಲು  ಕೆ.ಎನ್.ಎಲ್. ಅಧಿಕಾರಿಗೂ ತರಾಟೆಗೆ ತೆಗೆದುಕೊಂಡ ಶಾಸಕ ಬೇಳೂರು ಗೋಪಾಲಕೃಷ್ಣ ಶರಾವತಿ ಮುಳುಗಡೆ ಸಂತ್ರಸ್ತ್ರರು ನಾವು.ನೀರಿಗಾಗಿ ನಾವು ತ್ಯಾಗ ಮಾಡಿದ್ದೆವೆ. ಆದರೆ ನೀವು ನೀರನ್ನು ತೆಗೆದುಕೊಂಡು ಹೋಗಿ ಶಿಕಾರಿಪುರಕ್ಕೆ ನೀಡಿದ್ದಿರಾ. ಬಡ ರೈತರಿಗೆ ನೀರು ತಲುಪುವಂತಾಗಬೇಕು. ಡೆಡ್ ಸ್ಟೋರೇಜ್ ಆಗುವವರೆಗೂ ನೀರು ಖಾಲಿ ಮಾಡದೇ, ನೀರು ಶೇಖರಣೆಗೆ ಕ್ರಮ ಕೈಗೊಳ್ಳಿ ಎಂದರು.  

ಬ್ಯಾಂಕ್ ಅಕೌಂಟ್​ಗೆ ಆಧಾರ್​ ಲಿಂಕ್ ಮಾಡದಿದ್ದರೇ ಪಿಂಚಣಿ ಕಟ್! ಎಲ್ಲಿ ಏನು ವಿವರ ಇಲ್ಲಿದೆ

ಭದ್ರಾವತಿ/ ತಾಲೂಕಿನಲ್ಲಿ ವಿವಿಧ ಫಲಾನುಭವಿಗಳು ಇದೇ ಜೂನ್ ತಿಂಗಳ ಅಂತ್ಯಗೊಳಗಾಗಿ ಬ್ಯಾಂಕ್​ನಲ್ಲಿರುವ ತಮ್ಮ ಉಳಿತಾಯ ಖಾತೆಗಳಿಗೆ ಆಧಾರ್​ ಕಾರ್ಡ್​ ಜೋಡಣೆ ಮಾಡಿದಿದ್ದ ಪಕ್ಷದಲ್ಲಿ ಪಿಂಚಣಿಯನ್ನು ನಿಲ್ಲಿಸಲಾಗುವುದು ಎಂದು ತಹಶೀಲ್ದಾರ್​ ಸುರೇಶ್​ ಆಚಾರ್​  ತಿಳಿಸಿದ್ದಾರೆ. 

ಮೊಬೈಲ್​ ಕಳೆದುಕೊಂಡ ಬೆನ್ನಲ್ಲೆ ಅಕೌಂಟ್​ನಲ್ಲಿದ್ದ ಲಕ್ಷ ರೂಪಾಯಿನೂ ಮಾಯವಾಯ್ತು! ಹೀಗೂ ಮಾಡ್ತಾರೆ ಎಚ್ಚರ!

ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ನಿರ್ಗತಿಕ ವಿಧವಾವೇತನ ಮುಂತಾದ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಆಧಾರ ಕಾರ್ಡ್‌ನ್ನು ಬ್ಯಾಂಕ್ ಉಳಿತಾಯ ಖಾತೆಗೆ ಎನ್‌ಪಿಸಿಐ/ಡಿಬಿಟಿ ಮಾಡಿಸುವಂತೆ ಈಗಾಗಲೇ ಸರ್ಕಾರ ತಿಳಿಸಿದೆ. 

ಈ ಹಿನ್ನೆಲೆಯಲ್ಲಿ ಲಾನುಭವಿಗಳು ಆಧಾರ ಜೋಡಣೆ ಮಾಡದೇ ಇದ್ದಲ್ಲಿ, ಜೂನ್ ತಿಂಗಳ ಅಂತ್ಯದೊಳಗಾಗಿ ಬ್ಯಾಂಕ್ ಉಳಿತಾಯ ಖಾತೆಗೆ ಎನ್‌ಪಿಸಿಐ/ಡಿಬಿಟಿ ಆಧಾರ್ ಜೋಡಣೆ ಮಾಡಿಸುವುದು. ಇಲ್ಲವಾದಲ್ಲಿ ಪಿಂಚಣಿ ನಿಲ್ಲಿಸಲು ಕ್ರಮ ವಹಿಸಲಾಗುವುದು, ಇದಕ್ಕೆ ಫಲಾನುಭವಿಗಳೇ ಜವಾಬ್ದಾರರಾಗಿರುತ್ತಾರೆ ಎಂದಿದ್ಧಾರೆ. 

ಹೀಗಾಗಿ ಆಧಾರ್​ ಕಾರ್ಡ್‌ನ್ನು ಬ್ಯಾಂಕ್ ಉಳಿತಾಯ ಖಾತೆಗೆ ಜೋಡಣೆ ಮಾಡಲು ತಮ್ಮ ಆಧಾರ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ದಾಖಲೆಯೊಂದಿಗೆ ಬ್ಯಾಂಕ್‌ಗೆ ತೆರಳಿ ಜೂ. ೧೦ರೊಳಗಾಗಿ ಪರಿಷ್ಕರಣೆ  ಮಾಡಿಸುವಂತೆ ತಹಸೀಲ್ದಾರ್ ಸುರೇಶ್ ಆಚಾರ್ ಕೋರಿದ್ದಾರೆ.

ಮೊರಾರ್ಜಿ ದೇಸಾಯಿ ಶಾಲೆ ಆವರಣದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ

ಶಿವಮೊಗ್ಗ/ ಗಾಜನೂರಿನ ಮೂರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. 

ಶಾಲಾ ಆವರಣದಿಂದ ವಿದ್ಯಾರ್ಥಿಗಳ ವಸತಿ ಶಾಲೆಯೊಳಗೆ ಬರುತ್ತಿರುವುದನ್ನು ಗಮನಿಸಿದ ಶಾಲಾ ಮುಖ್ಯ ಶಿಕ್ಷಕರು ಕೂಡಲೆ ಉರಗ ರಕ್ಷಕರಿಗೆ ಕರೆ ಮಾಡಿದ್ದಾರೆ. 

ಇನ್ನೂ ವಿಷಯ ತಿಳಿದು  ಸ್ಥಳಕ್ಕೆ ಆಗಮಿಸಿದ ಸ್ನೇಕ್ ವಿಕ್ಕಿ, ಸ್ನೇಕ್ ರಂಜನ್, ಸ್ನೇಕ್ ಸುಹಾಸ್ ಮತ್ತು ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಉರಗಗಳ ಸಂಶೋಧನ ವಿದ್ಯಾರ್ಥಿಯಾದ  ಎಂ.ಎಸ್ ಜಯಂತ್ ಬಾಬರವರು ಹಾವನ್ನ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.



ಕೆಲವೇ ನಿಮಿಷದಲ್ಲಿ  ತಮ್ಮ ತಂಡದೊಂದಿಗೆ ಕಾಳಿಂಗ ಸರ್ಪವನ್ನು ಹಿಡಿದ ಜಯಂತ್ ಬಾಬು ಮತ್ತವರ ತಂಡ, ಅದನ್ನು  ಅರಣ್ಯ ಸಿಬ್ಬಂದಿಗಳ ಸಮ್ಮುಖದಲ್ಲಿ ಅರಣ್ಯಪ್ರದೇಶಕ್ಕೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ.



ಶಿವಮೊಗ್ಗ,   ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (doddapete police station shivamogga) ವಿವಿಧ ದಿನಾಂಕಗಳಂದು ಕಾಣೆಯಾದವರ ಬಗ್ಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ. 

ಮಂಗಳೂರು ಏರ್​ಪೋರ್ಟ್​ನಲ್ಲಿ ಸ್ಫೋಟಕ ಇಟ್ಟಿದ್ದ ಆದಿತ್ಯರಾವ್ ವಿರುದ್ಧ ಶಿವಮೊಗ್ಗಲ್ಲಿ ಕೇಸ್ ! ಕಾರಣವೇನು?

ದಿ:04/12/2022 ರಂದು ನಗರದ ಹೊಸಮನೆ 4ನೇ ಕ್ರಾಸ್‍ನಲ್ಲಿ ವಾಸವಿರುವ ಸುರೇಶ್ ಎಂಬುವವರ ತಂದೆ 65 ವರ್ಷದ ಮುನಿಸ್ವಾಮಿ ಎಂಬುವವರು ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈತನ ಚಹರೆ 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣಾ ಮೈಕಟ್ಟು, ತಲೆಯಲ್ಲಿ ಕಪ್ಪುಬಿಳಿ ಕೂದಲು ಹೊಂದಿದ್ದು, ಎಡಗೈ ಬೆರಳುಗಳು ಸಣ್ಣದಾಗಿರುತ್ತದೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.  

292 ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ ! ಶಿವಮೊಗ್ಗ ಜಿಲ್ಲೆಯ ಸ್ಟೇಷನ್​​ಗಳಿಗೆ ಯಾರೀಗ ಇನ್​ಸ್ಪೆಕ್ಟರ್​ ! ವಿವರ ಇಲ್ಲಿದೆ

ದಿ: 15/01/2023 ರಂದು ನಗರದ ಮದಾರಿಪಾಳ್ಯ 1ಕ್ರಾಸ್‍ನಲ್ಲಿ ವಾಸವಿರುವ ಮೊಹಮದ್ ಸಮೀರ್ ಎಂಬುವವರ ತಂದೆ ಎನ್.ಟಿ.ರಸ್ತೆ ಕರ್ನಾಟಕ ಬ್ಯಾಂಕ್ ಹತ್ತಿರ ವಾಸವಿದ್ದ ಬಸವರಾಜಪ್ಪ ಬಿನ್ ಪಕೀರಪ್ಪ ಎಂಬ 60 ವರ್ಷದ ವ್ಯಕ್ತಿ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ.  ಈತನು 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಉದ್ದನೆಯ ಮುಖ, ಬಿಳಿ ಕೂದಲು ಹೊಂದಿರುತ್ತಾರೆ. 

ನೆರೆಮನೆಯ ವ್ಯಕ್ತಿಯಿಂದ ಅಶ್ಲೀಲ ವರ್ತನೆ! ಕಿರುಕುಳ ಆರೋಪ! ಎಫ್​ಐಆರ್ ಹಾಕಿಸಲು ತಡರಾತ್ರಿ 1 ಗಂಟೆಯವರೆಗೂ ಪುಟ್ಟು ಮಗುವಿನ ಜೊತೆ ಸ್ಟೇಷನ್​ನಲ್ಲಿಯೇ ಕಾದ ಮಹಿಳೆ!

ಈ ಇಬ್ಬರು ವ್ಯಕ್ತಿಗಳ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೆÇಲೀಸ್ ಠಾಣೆ ಶಿವಮೊಗ್ಗ, ಜಿಲ್ಲಾ ನಿಸ್ತಂತು ಕೇಂದ್ರ ಅಥವಾ ಪೆÇಲೀಸ್ ಕಂಟ್ರೋಲ್ ರೂಂ ಸಂಖ್ಯೆ 100, ದೂ.ಸಂ: 08182-261414/261416 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. (ಛಾಯಾಚಿತ್ರ ಲಗತ್ತಿಸಿದೆ) 

ಹೊಸ ವ್ಯಾಪಾರ ಆರಂಭಿಸಲು ಅವಕಾಶ! ಶಿವಮೊಗ್ಗ ಎಪಿಎಂಸಿಯಲ್ಲಿ ಮಳಿಗೆಗಳ ಬಾಡಿಗೆಗೆ ಹರಾಜು! ಇಲ್ಲಿದೆ ವಿವರ

ಶಿವಮೊಗ್ಗದ ಎ.ಪಿ.ಎಂ.ಸಿ. ಯಲ್ಲಿ ನಿರ್ಮಾಣ ಮಾಡಿರುವ 32 ಮಳಿಗೆಗಳನ್ನು ಬಾಡಿಗೆ ಹರಾಜು ಮಾಡಲಾಗುತ್ತಿದ್ದು,  ಆಸಕ್ತರಿಂದ ಅರ್ಜಿ ಆಹಾನಿಸಿದೆ. 

shimoga crime news today live/ ಕಾಡಿನಲ್ಲಿ ಮಹಿಳೆಯ ಶವ! ಹೊಲದಲ್ಲಿ ಅರೆಬರೆ ಸುಟ್ಟ ಪುರಷನ ಶವ ಪತ್ತೆ! ಅನುಮಾನ ಮೂಡಿಸಿದ ಎರಡು ಸಾವು!?

ಈ ಮಳಿಗೆಗಳು ಭಾರ್ಗವಿ ಪೆಟ್ರೋಲ್ ಬಂಕ್ ಹಾಗೂ ಬಿ.ಎಸ್.ಎನ್.ಎಲ್ ಮುಂಭಾಗದಲ್ಲಿ ಬಿ.ಹೆಚ್ ರಸ್ತೆಗೆ ಅಭಿಮುಖವಾಗಿದ್ದು, ಉತ್ತಮವಾದ ಗಾಳಿ, ಬೆಳಕು, ನೆರಳಿನ ಮರಗಳು, ಗ್ರಾಹಕರ ವಾಹನ ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶ ಲಭ್ಯವಿರುತ್ತದೆ. ಈ ಸ್ಥಳವು ಪ್ರಮುಖ ವಸತಿ ಲೇಔಟ್‍ಗಳಿಗೆ ಹತ್ತಿರವಿದ್ದು, ಕಾನೂನಿನಡಿಯಲ್ಲಿ ನಡೆಸಬಹುದಾದ ವಹಿವಾಟು ನಡೆಸಲು ಅನುಕೂಲವಾಗಿರುತ್ತದೆ.

ಇಲ್ಲಿ ಕ್ಲಿನಿಕ್, ಜೆರಾಕ್ಸ್, ಕಿರಾಣಿ, ಔಷಧಿಗಳು, ಬೇಕರಿ, ಲಾಯರ್, ಆಡಿಟರ್ ಆಫೀಸ್‍ಗಳನ್ನು ಹಾಗೂ ಇತರೆ ವ್ಯವಹಾರಗಳನ್ನು ನಡೆಸಬಹುದಾಗಿದೆ.  ಇದಲ್ಲದೇ ಎ.ಪಿ.ಎಂ.ಸಿ ಎಡಭಾಗದಲ್ಲಿ ನಿರ್ಮಾಣವಾಗುತ್ತಿರುವ ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಸಬ್ ರಿಜಿಸ್ಟಾರ್ ಕಚೇರಿ, ಬ್ಯಾಂಕ್‍ಗಳು ಬರಲಿದ್ದು, ವ್ಯಾಪಾರ ವಹಿವಾಟು ನಡೆಸಲು ಸೂಕ್ತ ಸ್ಥಳವಾಗಿರುತ್ತದೆ.  

ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂ.09ರೊಳಗಾಗಿ ಸಲ್ಲಿಸುವಂತೆ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.   ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-250338 ನ್ನು ಸಂಪರ್ಕಿಸುವುದು