ಹಬ್ಬದ ಗಮ್ಮತ್​ನಲ್ಲಿದ್ದವನಿಗೆ ಶಾಕ್​! ಶಿಕಾರಿಪುರ ಬಸ್​ ಹತ್ತಿಸಿದ ಪೊಲೀಸ್! ಏನಾಯ್ತು ಗೊತ್ತಾ ದೊಡ್ಡಪೇಟೆ ಲಿಮಿಟ್ಸ್​ನಲ್ಲಿ!

Here is the details of the incident that took place in Shimoga Doddapet police station ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಘಟನೆಯ ವಿವರ ಇಲ್ಲಿದೆ

ಹಬ್ಬದ ಗಮ್ಮತ್​ನಲ್ಲಿದ್ದವನಿಗೆ ಶಾಕ್​! ಶಿಕಾರಿಪುರ ಬಸ್​ ಹತ್ತಿಸಿದ ಪೊಲೀಸ್!  ಏನಾಯ್ತು ಗೊತ್ತಾ ದೊಡ್ಡಪೇಟೆ ಲಿಮಿಟ್ಸ್​ನಲ್ಲಿ!

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS

Shivamogga | ಹಬ್ಬ ಹರಿದಿನವೂ ಪೊಲೀಸರಿಗೆ ಇರೋದಿಲ್ಲ. ಏಕೆಂದರೆ ಅಂತಹ ಸಂದರ್ಭದಲ್ಲಿಯೆ ಖಾಕಿಗೆ ಕೆಲಸ ಜಾಸ್ತಿ. ಹಾಗಾಗಿ ಹಬ್ಬ ಬಿಟ್ಟು ರೋಡ್ ಮೇಲೆ ಡ್ಯೂಟಿ ಮಾಡುತ್ತಿರುವುದು ಪೊಲೀಸರಿಗೆ ಅನಿವಾರ್ಯ ಇಂತಹ ಸಂದರ್ಭದಲ್ಲಿ ಬರುವಂತಹ ಕೇಸ್​ಗಳಲ್ಲಿ ತಲೆಹರಟೆ ಪ್ರಕರಣಗಳೇ ಜಾಸ್ತಿ ಇರುತ್ತದೆ. ಅದರಲ್ಲಿಯು ಎಣ್ಣೆ ಪಾರ್ಟಿಗಳ ಪ್ರಕರಣಗಳು ಪೊಲೀಸರನ್ನ ಇನ್ನಿಲ್ಲದಂತೆ ಸತಾಯಿಸುತ್ತದೆ. 

ಒಳಗಿನಿಂದ ಜಾಗೃತರಾಗಿರುವ ಆಸಾಮಿಗಳ ಬಳಿಯಲ್ಲಿ ಪೊಲೀಸರು ಕಾನೂನಿನ ಅರಿವು ಮೂಡಿಸುವ ಹೊತ್ತಿಗೆ ಇಡೀ ಡಿಪಾರ್ಟ್ಮೆಂಟ್ ಸುಸ್ತು ಹೊಡೆದಿತ್ತಿರುತ್ತದೆ. ಆದಾಗ್ಯು ಮಾನವೀಯ ದೃಷ್ಟಿಯಲ್ಲಿ ಪೊಲೀಸರು ನಶೆ ಗಿರಾಕಿಗಳನ್ನ ಅವರವರ ಮನೆಗೆ ತಲುಪಿಸುತ್ತಾರೆ. ಅಂತಹದ್ದೊಂದು ಪ್ರಕರಣ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ನಲ್ಲಿ ನಡೆದಿದೆ. 

READ :  ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿ! ನಡೆದಿದ್ದೇನು?

ಹೌದು ಕಳೆದ 12 ನೇ ತಾರೀಖು ಅಂದರೆ ನಿನ್ನೆ  ವ್ಯಕ್ತಿಯೊಬ್ಬ ಪುಲ್​ ಟೈಟಾಗಿ, ಆಸ್ಪತ್ರೆಯೊಂದರ ಎದುರು ಬಿದ್ದುಬಿಟ್ಟಿದ್ದ.. ಆತನಿಗೆ ಏನಾಯ್ತು ಎನು ಎತ್ತ ಅಂತಾ ಯಾರು ವಿಚಾರಿಸಿದ್ದು ಕಾಣೆ. ಆದರೆ ಯಾರೋ ಒಬ್ಬರು ಪೊಲೀಸರಿಗೆ ಫೋನ್ ಮಾಡುವ ಒಳ್ಳೆಯ ಕೆಲಸ ಮಾಡಿದ್ದರು. ಯಾರೋ 112 ಗೆ ಕರೆ ಮಾಡಿ ಇಲ್ಲೊಬ್ಬ ಬಿದ್ದು ಬಿಟ್ಟಿದ್ದಾನೆ. ಆತನನ್ನ ಸ್ವಲ್ಪ ವಿಚಾರಿಸಿಕೊಳ್ಳಿ ಎಂದು ತಿಳಿಸಿದ್ದಾರೆ.. 

ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಆರೋಪಿ ಹಬ್ಬದ ಗಮ್ಮತ್​ನಲ್ಲಿರುವುದು ಕಂಡು ಬಂದಿದೆ. ನಶೆಪ್ರಾಣದಲ್ಲಿ ನಿತ್ರಾಣನಾಗಿದ್ದ ಆತನನ್ನ ಅವನ ಸ್ಟೈಲ್​ನಲ್ಲಿಯೇ ಕೇಳಿ ಬಾಯಿಬಿಡಿಸಿದ್ದಾರೆ ಪೊಲೀಸರು. ಈ ವೇಳೆ ಆತ ಶಿಕಾರಿಪುರದವನು ಎಂಬುದು ಗೊತ್ತಾಗಿದೆ. ಹೆಚ್ಚಿನ ಮಾಹಿತಿಯನ್ನ ಆತನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. 

READ : ತುಂಗಾ ನಗರ ಪೊಲೀಸ್ ಸ್ಟೇಷನ್​ ರೌಡಿಶೀಟರ್​ ಬಚ್ಚನ್​ಗೆ ಶಾಕ್​ ! ಕೋರ್ಟ್​ ನಿಂದ ಶಿಕ್ಷೆ ! ಏನಿದು ಪ್ರಕರಣ?

ಕೊನೆಗೆ ಪೊಲೀಸರೇ ಆತನನ್ನ ಕರೆದುಕೊಂಡು ಶಿವಮೊಗ್ಗ ಕೆಎಸ್​ಆರ್​ಟಿಸಿ KSRTC ಬಸ್​ ನಿಲ್ದಾಣಕ್ಕೆ ಬಿಟ್ಟಿದ್ದಾರೆ. ಅಲ್ಲಿ ಶಿಕಾರಿಪುರದ ಬಸ್​ ಬರುವುದನ್ನ ಕಾದು, ಬಂದ ಬಸ್​ಗೆ ಹತ್ತಿಸಿ ಕೂರಿಸಿ, ಶಿಕಾರಿಪುರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೀಗೆ ಹೋದವನು ನಶೆ ಇಳಿದ ಮೇಲೆ ಪೊಲೀಸರಿಗೆ ಒಂದು ಥ್ಯಾಂಕ್ಸ್ ಹೇಳಿರಬಹುದಾ? ಗೊತ್ತಿಲ್ಲ. ಆದರೆ ಪೊಲೀಸರ ಕೆಲಸಕ್ಕೆ ನಾವಂತು ಧನ್ಯವಾದ ಹೇಳುತ್ತೇವೆ