ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿ! ನಡೆದಿದ್ದೇನು?

A minor girl rescued by the railway police in Shimoga railway station ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿಯೊಬ್ಬಳನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿದ್ಧಾರೆ

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ  ಪತ್ತೆಯಾದ ಅಪ್ರಾಪ್ತ ಬಾಲಕಿ! ನಡೆದಿದ್ದೇನು?

KARNATAKA NEWS/ ONLINE / Malenadu today/ Nov 13, 2023 SHIVAMOGGA NEWS

Shivamogga | ಶಿವಮೊಗ್ಗ ರೈಲ್ವೆ ನಿಲ್ದಾಣ ದಲ್ಲಿ ಅಪ್ತಾಪ್ತೆಯೊಬ್ಬಳು ಪತ್ತೆಯಾಗಿದ್ದಾಳೆ. ರೈಲುಗಳ ಓಡಾಟದ ಸಂದರ್ಭದಲ್ಲಿ ಅಪ್ರಾಪ್ತೆಯೊಬ್ಬಳು ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ಲಾಟ್​ಫಾರಮ್​ನಲ್ಲಿ  ಕಾಣಿಸಿಕೊಂಡಿದ್ದಾಳೆ. ಹಲವು ಸಮಯ ಇಲ್ಲಿಯೇ ಓಡಾಡುತ್ತಿದ್ದ ಅಪ್ರಾಪ್ತೆಯ ನಡೆ ಅನುಮಾನ ಮೂಡಿಸಿತ್ತು. 15 ವರ್ಷದ ಅಪ್ರಾಪ್ತೆಯನ್ನು ರೈಲ್ವೆ ಪೊಲೀಸರು (@RPF_INDIA

) ಗಮನಿಸಿದ್ದಾರೆ

READ : ತುಂಗಾ ನಗರ ಪೊಲೀಸ್ ಸ್ಟೇಷನ್​ ರೌಡಿಶೀಟರ್​ ಬಚ್ಚನ್​ಗೆ ಶಾಕ್​ ! ಕೋರ್ಟ್​ ನಿಂದ ಶಿಕ್ಷೆ ! ಏನಿದು ಪ್ರಕರಣ?

ಅಲ್ಲದೆ ಆಕೆಯನ್ನು ರಕ್ಷಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ಮುಂದುವರಿದ ಕಾನೂನು ಕ್ರಮವಾಗಿ ಆಕೆಯನ್ನು ಶಿವಮೊಗ್ಗ ಸುರಬಿ ಉಜ್ವಲ ಕೇಂದ್ರ ಎನ್​ಜಿಒಗೆ  (NGO Surabee Ujjwala Center, Shivamogga.)ಒಪ್ಪಿಸಿದ್ದಾರೆ.ಸದ್ಯ ಅಲ್ಲಿ ಅಪ್ರಾಪ್ತೆಯ ದೇಖಾರೇಖಿ ನೋಡಲಾಗುತ್ತಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ.