ಕೇಂದ್ರ ಗೃಹಸಚಿವ ಅಮಿತ್ ಶಾ ರವರನ್ನ ಭೇಟಿ ಮಾಡಿದ ಕೆ.ಎಸ್​.ಈಶ್ವರಪ್ಪ!

Malenadu Today

SHIVAMOGGA  |  Jan 11, 2024  |   ಹಾವೇರಿ ಟಿಕೆಟ್ ವಿಚಾರದಲ್ಲಿ ಕೆ.ಎಸ್​.ಈಶ್ವರಪ್ಪ ದೆಹಲಿಗೆ ತೆರಳಿದ್ದಾರೆ ಎನ್ನಲಾದ ವಿಚಾರದಲ್ಲಿ ಮತ್ತಷ್ಟು ಅಪ್​​ಡೇಟ್ ಸಿಕ್ಕಿದೆ. 

ದೆಹಲಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಅವರು, ಅರುಣ್ ಸಿಂಗ್ ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ದೆಹಲಿ ಮೂಲಗಳು ವರದಿ ಮಾಡಿವೆ.  

ಕೇಂದ್ರ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ, (amith shah) ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಬುಧ ವಾರ ದೆಹಲಿಯಲ್ಲಿ ಭೇಟಿ ಮಾಡಿದ ಮಾಜಿ ಡಿಸಿಎಂ ಈಶ್ವರಪ್ಪರವರು ಪರಸ್ಪರ ಚರ್ಚಿಸಿದರು.

ಬೆಂಗಳೂರಿನಲ್ಲಿ ಅರುಣ್ ಸಿಂಗ್ ಸಮ್ಮುಖ ನಡೆದ ಸಭೆಯಲ್ಲಿ ಕೆಲ ಅಂಶ ಗಳನ್ನು ಪ್ರಸ್ತಾ ಪಿಸಿದ್ದ ಅವರು, ಉಳಿದ ಕೆಲ ಪ್ರಮುಖ ಅಂಶಗಳ ಚರ್ಚೆಗಾಗಿ ಅಮಿತ್​  ಶಾ ಅವರ ಭೇಟಿಗೆ ಸಮಯಾವ ಕಾಶ ಕೇಳಿದರು.

ಅದರಂತೆ ಮಂಗಳವಾರವೇ ದೆಹಲಿಗೆ ತಲುಪಿದ್ದ ಅವರು, ಬುಧವಾರ ಅಮಿತ್​ ಶಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಕುರಿತು ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂಧಿದೆ. 

Share This Article