ಕಾಲೇಜಿಗೆ ರೆಡಿಯಾಗಿ ಹೊರಟಿದ್ದ ವಿದ್ಯಾರ್ಥಿಗೆ ಪಿಜಿಯಿಂದ ಹೊರಬರುತ್ತಲೆ ಕಾದಿತ್ತು ಶಾಕ್!

A case of bike theft has been registered in Shimoga's Doddapet Police Station Limits ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿದೆ

ಕಾಲೇಜಿಗೆ ರೆಡಿಯಾಗಿ ಹೊರಟಿದ್ದ ವಿದ್ಯಾರ್ಥಿಗೆ ಪಿಜಿಯಿಂದ ಹೊರಬರುತ್ತಲೆ ಕಾದಿತ್ತು ಶಾಕ್!

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS

Shivamogga |  ಬೆಳಗ್ಗೆನೆ ರೆಡಿಯಾಗಿ ಕಾಲೇಜಿಗೆ ಹೊರಟ ವಿದ್ಯಾರ್ಥಿಗೆ ಪಿಜಿಯಿಂದ ಆಚೆ ಬರುತ್ತಲೇ ಶಾಕ್ ಆಗಿತ್ತು. ಕಾರಣ ರಾತ್ರಿ ಊಟ ಮುಗಿಸಿಕೊಂಡು ಬಂದು ನಿಲ್ಲಿಸಿದ್ದರಾಯಲ್​ ಎನ್​ಫೀಲ್ಡ್​ ಬೈಕ್​ ಮಾಯವಾಗಿತ್ತು. ಸದ್ಯ ಈ ಬಗ್ಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ IPC 1860 (U/s-379) ಅಡಿಯಲ್ಲಿ ಕೇಸ್ ದಾಖಲಾಗಿದೆ. 



READ : D. B. Chandregowda | ಹಿರಿಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ಇನ್ನಿಲ್ಲ | ಅಪರೂಪದ ರಾಜಕಾರಣಿಯ ಜೀವನ ಹೇಗಿತ್ತು ಓದಿ?

ಶಿವಮೊಗ್ಗದ ಪ್ರತಿಷ್ಟಿತ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಪೊಲೀಸ್ ಚೌಕಿ ಬಳಿ ಊಟ ಮಾಡಿಕೊಂಡು ಆನಂತರ ತನ್ನ ಪೀಜಿಗೆ ಬೈಕ್​ನಲ್ಲಿ ವಾಪಸ್ ಆಗಿದ್ದಾನೆ. ಅಲ್ಲಿ ಬೈಕ್ ನಿಲ್ಲಿಸಿ ಪಿಜಿ ಸೇರಿಕೊಂಡಿದ್ದಾರೆ. ಬೆಳಗ್ಗೆ ಎದ್ದು ಕಾಲೇಜಿಗೆ ರೆಡಿಯಾಗಿ ಹೊರಕ್ಕೆ ಬಂದು ನೋಡುವಾಗ ಅವರ ಬೈಕ್ ಕಳುವಾಗಿತ್ತು. ಹೀಗಾಗಿ ತನ್ನ ಬೈಕ್​ ಹುಡುಕಿಕೊಡಿ ಎಂದು ಕಂಪ್ಲೆಂಟ್ ಮಾಡಿದ್ದು, ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.