GOOD NEWS SHIVAMOGGA | ಸಾಗರದಲ್ಲಿ ಹೊಸ ರೈಲ್ವೆ ಮೇಲ್ಸೇತುವೆ, ಶಿವಮೊಗ್ಗ ಸಿಟಿಯಲ್ಲಿ ಮತ್ತೊಂದು ಅಂಡರ್ ಪಾಸ್​ ನಿರ್ಮಾಣ! ಎಲ್ಲಿ ಗೊತ್ತಾ?

Malenadu Today

KARNATAKA NEWS/ ONLINE / Malenadu today/ Nov 7, 2023 SHIVAMOGGA NEWS

Shivamogga | ಶಿವಮೊಗ್ಗದಲ್ಲಿ ಈಗಾಗಲೇ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರ ಬೆನ್ನಲ್ಲೆ ಇದೀಗ ಮತ್ತೆ ಒಂದು ಅಂಡರ್​ ಪಾಸ್ ಹಾಗೂ ಮತ್ತೊಂದು ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿಯನ್ನ ನೀಡಿದೆ 

READ : ಇದು ತೀರ್ಥಹಳ್ಳಿ ತೂಗುಸೇತುವೆಯಲ್ಲ! ಹಾಗಾದರೆ ಎಲ್ಲಿಯದು? ಶಿವಮೊಗ್ಗದಲ್ಲಿ ಈ ಸ್ಪಾಟ್ ಎಲ್ಲಿದೆ ಗೆಸ್ ಮಾಡಿ!

ಸದ್ಯ ಸಂಸದ ರಾಘವೇಂದ್ರ ರವರ ಮೂಲಗಳಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, ಕೇಂದ್ರ ರೈಲ್ವೆ ಪ್ರಾಧಿಕಾರವು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಎಲ್.ಸಿ. ಗೇಟ್ ನಂಬರ್ 47 ರಲ್ಲಿ 6 ಕೋಟಿ ಮೊತ್ತದ ನೂತನ ಅಂಡರ್ ಪಾಸ್ ನಿರ್ಮಾಣ ಮಾಡಲು ಸಮ್ಮತಿಸಿದೆ. 

ಅದೇ ರೀತಿಯಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ  ಸೊರಬ ರಸ್ತೆಯ ಎಲ್.ಸಿ. ಗೇಟ್ ನಂಬರ್ 130 ರಲ್ಲಿ 25ಕೋಟಿ ಮೊತ್ತದ ನೂತನ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಹಂಚಿಕೆ ಮಾಡಿದೆ 

ಈ ನಿಟ್ಟಿನಲ್ಲಿ ಕಾಮಗಾರಿ ಆರಂಭಕ್ಕೂ ಅದಾಗಲೇ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಪೂರಕವಾಗಿ ಪ್ರಕ್ರಿಯೆಗಳು ಆರಂಭವಾಗಿದೆಯಂತೆ. ಇನ್ನೂ ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರರವರು ಪ್ರತಿಕ್ರಿಯಿಸಿದ್ದಾರೆ  

 ‘‘ಎರಡು ಯೋಜನೆಗಳಿಗೆ ಅನುಮತಿ ಹಾಗೂ ಅನುದಾನ ಒದಗಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. 

ಕಾಮಗಾರಿ ಜಾರಿಯಾಗಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ

ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ ’’ 

ಸಂಸದ ಬಿ.ವೈ.ರಾಘವೇಂದ್ರ 

READ : ಕಾಲೇಜಿಗೆ ರೆಡಿಯಾಗಿ ಹೊರಟಿದ್ದ ವಿದ್ಯಾರ್ಥಿಗೆ ಪಿಜಿಯಿಂದ ಹೊರಬರುತ್ತಲೆ ಕಾದಿತ್ತು ಶಾಕ್!


Share This Article