ಶಿರಾಳಕೊಪ್ಪದಲ್ಲಿ ನಡೆದಿದ್ದು ಅತ್ಯಾಚಾರ ಮತ್ತು ಕೊಲೆಯೆ? ತಾಯಿ ಸಾವಿಗೆ ನ್ಯಾಯ ಕೇಳಲು ಬಂದ ಮಗನ ಆರೋಪವೇನು?

What happened in Shiralakoppa was rape and murder? What is the allegation of a son who came to seek justice for his mother's death?

ಶಿರಾಳಕೊಪ್ಪದಲ್ಲಿ ನಡೆದಿದ್ದು ಅತ್ಯಾಚಾರ ಮತ್ತು ಕೊಲೆಯೆ? ತಾಯಿ ಸಾವಿಗೆ ನ್ಯಾಯ ಕೇಳಲು ಬಂದ ಮಗನ ಆರೋಪವೇನು?
ಶಿರಾಳಕೊಪ್ಪದಲ್ಲಿ ನಡೆದಿದ್ದು ಅತ್ಯಾಚಾರ ಮತ್ತು ಕೊಲೆಯೆ? ತಾಯಿ ಸಾವಿಗೆ ನ್ಯಾಯ ಕೇಳಲು ಬಂದ ಮಗನ ಆರೋಪವೇನು?

ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಚಿಕ್ಕಮಾಗಡಿ ತಾಂಡದ ಜೀನಿಬಾಯಿ ಕೊಲೆ ಪ್ರಕರಣ ಬೇರೆಯದ್ದೆ ತಿರುವು ಪಡೆದುಕೊಂಡಿದೆ. ನನ್ನ ತಾಯಿಯನ್ನು ನನ್ನ ಕಣ್ಣೆದುರೇ ಹಾಲೇಶ್ ನಾಯ್ಕ್ ಅತ್ಯಾಚಾರ ಮಾಡಿದ ಎಂದು ಮಗ ಮಂಜನಾಯ್ಕ ನೀಡಿದ ದೂರು..ಪ್ರಕರಣದ ಗಂಭೀರತೆ ಏನೆಂಬುದನ್ನು ಹೇಳುತ್ತಿದೆ.

ಇಲ್ಲಿನ ಗುಡಿಸಿಲಿನಲ್ಲಿ ಜೀನಿಬಾಯಿ ಎಂಬ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಮಹಿಳೆಯನ್ನು ಕೊಲೆ ಮಾಡಿ ನೇಣು ಬಿಗಿಯಲಾಗಿದೆ ಎಂದೇ  ಭಾವಿಸಲಾಗಿತ್ತು. ಆದ್ರೆ ಮಹಿಳೆಯ ದೇಹದ ಭಾಗವನ್ನು ಖುದ್ದಾಗಿ ಪರಿಶೀಲಿಸಿದ ಸ್ಥಳೀಯ ಮಹಿಳೆಯರಿಗೆ ಆಘಾತ ಕಾದಿತ್ತು. ಜೀನಿಬಾಯಿ ಮರ್ಮಾಂಗ ಹಾಗೂ ಎದೆಭಾಗವನ್ನುಹಲ್ಲಿನಿಂದ ಕಚ್ಚಿದ ಗುರುತುಗಳು ಹಾಗೂ ರಕ್ತದ ಕಲೆಗಳು ಅದೊಂದು ಅತ್ಯಾಚಾರ ಎಂದು ಸಾರಿ ಹೇಳಿತ್ತು. ಸ್ಥಳಕ್ಕೆ ಬಂದ ಮಗ ಮಂಜನಾಯ್ಕ್, ತನ್ನ ತಾಯಿಯನ್ನು ಹಾಲೇಶ್ ನಾಯ್ಕ್ ನೇ ಅತ್ಯಾಚಾರ ಮಾಡಿ ಕೊಲೆಮಾಡಿದ್ದಾನೆ..ಆತನಿಗೆ ಶಿಕ್ಷೆಯಾಗಬೇಕು ಎಂದು ಗೋಗರೆದ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದ. 

ಮಂಜನಾಯ್ಕ್ ಈ ರೀತಿ ಆರೋಪ ಮಾಡೋದಕ್ಕೂ ಇಲ್ಲಿ ಕಾರಣವಿದೆ..

ದಿನಾಂಕ 11-03-23 ರ ರಾತ್ರಿ ಸುಮಾರು 10.30 ಕ್ಕೆ ನಡೆದ ಘಟನೆ. ದೂರದ ಊರಿನಲ್ಲಿದ್ದ ಮಂಜನಾಯ್ಕ್ ಯುಗಾದಿ ಹಬ್ಬಕ್ಕೆಂದು  ತಾಯಿಯನ್ನು ನೋಡಲು ಚಿಕ್ಕಮಾಗಡಿ ತಾಂಡಾದ ಮನೆಗೆ ಬಂದಿದ್ದ. ಆ ಸಂದರ್ಭದಲ್ಲಿ ಮನೆಯ ಬೆಡ್ ರೂಂ ನಲ್ಲಿ  ತನ್ನ ತಾಯಿಯನ್ನು ಯಾರೋ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡುತ್ತಿರುವುದನ್ನ ನೋಡಿದೆ, ಇದರಿಂದ ಕೆರಳಿ ಮಂಜನಾಯ್ಕ್  ಆ ವ್ಯಕ್ತಿಯನ್ನು ಹಿಡಿಯಲು ಮುಂದಾಗಿದ್ದೆ ಎನ್ನುತ್ತಾನೆ ಮಂಜನಾಯ್ಕ್​. ಅಷ್ಟರಲ್ಲ  ಅಲ್ಲಿ ವ್ಯಕ್ತಿಯೂ ಇರುವುದಿಲ್ಲ...ತಾಯಿಯೂ ಇರುವುದಿಲ್ಲ. ಆದರೆ ತಾಯಿಯೊಂದಿಗೆ ಇದ್ದ ಪುರುಷ ಹಾಲೇಶ್ ನಾಯ್ಕ್ ಎಂದು ಮಂಜನಾಯ್ಕ್ ದೂರಿನಲ್ಲಿ ತಿಳಿಸಿದ್ದಾನೆ.

ಜೀನಿಬಾಯಿಯನ್ನು  ಹಾಲೇಶ್ ನಾಯ್ಕ್ ಅತ್ಯಾಚಾರ ಮಾಡಿದ್ದಾನೆಂಬುದು ಮಗನ ನೇರ ಆರೋಪವಾಗಿದೆ. ಅವರಿಬ್ಬರದ್ದು ಒಪ್ಪಿತ ಸಂಬಂಧವೋ ಅಥವಾ ನಡೆದಿದ್ದು ಅತ್ಯಾಚಾರವೋ ಪೊಲೀಸ್ ತನಿಖೆ ಆಗಬೇಕಿದೆ. ಆದರೆ ಅಂದು ಜೀನಿಬಾಯಿ ಜೊತೆ ಇದ್ದ ಹಾಲೇಶ್ ನಾಯ್ಕ್ ಗೆ, ಜೀನಿಬಾಯಿ ಮಗ ಮಂಜನಾಯ್ಕ್ ಈ ರೀತಿ ಎಂಟ್ರಿ ಕೊಟ್ತಾನೆ ಎಂದು ಭಾವಿಸಿರಲಿಲ್ಲ.

ತಾಯಿಯನ್ನ ಹುಡುಕಿದ್ರು, ಮೃತದೇಹ ಸಿಕ್ಕಿತು

ಆತ ಮಂಜನಾಯ್ಕ್ ನನ್ನ ದೂಕಿ ಪರಾರಿಯಾಗಿದ್ದ, ಇತ್ತ ತಾಯಿ ಕೂಡ ಮನೆಯಿಂದ ಕಾಣೆಯಾಗಿದ್ಲು..ರಾತ್ರಿಯೆಲ್ಲಾ ತನ್ನ ಸಂಬಂಧಿ ಮತ್ತು ಸ್ನೇಹಿತರ ಸಹಕಾರದಲ್ಲಿ ಗ್ರಾಮ ಸುತ್ತಮುತ್ತ ಹುಡುಕಿದ ಮಂಜನಾಯ್ಕ್ ನಿಗೆ ತಾಯಿ ಪತ್ತೆಯಾಗಲಿಲ್ಲ. ಮಾರನೇ ದಿನ ಮತ್ತೊಬ್ಬ ಮಗ ಸುರೇಶ್ ನಾಯ್ಕ್ ತಾಂಡಕ್ಕೆ ಬರುತ್ತಾನೆ. ಇಬ್ಬರು ಸಹೋದರರು ಸೇರಿಕೊಂಡು ತಾಯಿಯನ್ನು ಹುಡುಕಿದಾಗ ಮದ್ಯಾಹ್ನದ ಹೊತ್ತಿಗೆ ಗುಡಿಸಿಲಿನಲ್ಲಿ ಜೀನಿ ಬಾಯಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುತ್ತೆ.

ತಾಯಿಯ ದೇಹದ ಪರಿಸ್ಥಿತಿಯನ್ನು ಅರಿತ ಮಗ,ಊರಿನ ಮಹಿಳೆಯರಿಗೆ ಶರೀರವನ್ನು ಪರೀಕ್ಷಿಸುವಂತೆ ಹೇಳುತ್ತಾನೆ. ಸ್ಥಳೀಯ ಮಹಿಳೆಯರು ಮೃತ ಜೀನಿಬಾಯಿ ದೇಹ ಪರೀಕ್ಷಿಸಿದಾಗ ದೇಹದ ಹಲವೆಡೆ ಗಾಯದ ಕಲೆ ಹಲ್ಲಿನ ಗುರುತುಗಳು ಪತ್ತೆಯಾಗಿದೆ. ಹಾಗಾಗಿ ಇದೊಂದು ಅತ್ಯಾಚಾರ ಕೊಲೆ ಎಂದು ಮಗ ಮಂಜನಾಯ್ಕ್ ಶಿರಾಳಕೊಪ್ಪ ಪೊಲೀಸರಿಗೆ ದೂರು ನೀಡುತ್ತಾನೆ. ಆದ್ರೆ ಪೊಲೀಸರು ಕೊಲೆ ಪ್ರಕರಣ ಅಂತಾ ಕೇಸ್ ದಾಖಲಿಸಿಕೊಳ್ತಾರೆ. ಇತ್ತ ಆರೋಪಿ ಹಾಲೇಶ್ ನಾಯ್ಕ್ ನಾಪತ್ತೆಯಾಗ್ತಾನೆ 

ಕೇಸ್ ವಾಪಸ್ಸು ತೆಗೆದುಕೊಳ್ಳುವಂತೆ ಮಗನಿಗೆ ಒತ್ತಡ

ಇನ್ನು ಈ ಕೇಸ್ ನಲ್ಲಿ ತಾಯಿಯ ಅತ್ಯಾಚಾರವಾಗಿದೆ ನನಗೆ ನ್ಯಾಯ ಕೊಡಿ ಎಂದು ಕೇಳುತ್ತಿರುವ ಮಗನಿಗೆ ಕೇಸ್ ವಾಪಸ್ಸು ತೆಗೆದುಕೊಳ್ಳುವಂತೆ ಗ್ರಾಮದ ಕೆಲವರಿಂದ ಒತ್ತಡ ಬರುತ್ತಿದೆಯಂತೆ. ಪೊಲೀಸರು ಕೂಡ ಪ್ರಕರಣವನ್ನು ಗಂಭೀರವಾಗಿ ಭಾವಿಸಿಲ್ಲ ಎಂದು ಮಗ ಮಂಜನಾಯ್ಕ್ ಆರೋಪಿಸಿದ್ದಾರೆ. ಇದೇ ಕಾರಣಕ್ಕಾಗಿ ನ್ಯಾಯಕ್ಕಾಗಿ ಶಿವಮೊಗ್ಗ ಎಸ್​​ಪಿ ಮಿಥುನ್​ ಕುಮಾರ್​ರವರನ್ನ ಅವರ ಕಚೇರಿಯಲ್ಲಿ ಭೇಟಿಯಾಗಿ  ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ. 

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಮಿಥುನ್​ ಕುಮಾರ್, ಜೀನಿಬಾಯಿ ದೇಹದಲ್ಲಾದ ಗಾಯ ಹಾಗೂ ಅದರ ಸ್ಯಾಂಪಲ್​ಗಳನ್ನು ಎಫ್​.ಎಸ್.ಎಲ್ ಗೆ ಕಳುಹಿಸಲಾಗಿದೆ. ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು ಎಂದು ಹೇಳಿದ್ದಾರೆ.

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 



read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamoggaShiralakoppa Police Station, Shiralakoppa Incident, Shiralakoppa Crime News, Shikaripura News, Shikaripura News, Shikaripura News, Shikaripuda Report, Mother's Murder and Rape, SP Mithun Kumar, SP's Officeಶಿರಾಳಕೊಪ್ಪ ಪೊಲೀಸ್ ಸ್ಟೆಷನ್​, ಶಿರಾಳಕೊಪ್ಪ ಘಟನೆ , ಶಿರಾಳಕೊಪ್ಪ ಕ್ರೈಂ ನ್ಯೂಸ್, ಶಿಕಾರಿಪುರ ಸುದ್ದಿ, ಶಿಕಾರಿಪುರ ನ್ಯೂಸ್, ಶಿಕಾರಿಪುದ ರಿಪೋರ್ಟ್​, ತಾಯಿಯ ಕೊಲೆ ಮತ್ತು ಅತ್ಯಾಚಾರ, ಎಸ್​ಪಿ ಮಿಥುನ್ ಕುಮಾರ್, ಎಸ್​ಪಿ ಕಚೇರಿ