ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್ ಯಾರಿಗೆ? ಆಯನೂರು ಮಂಜುನಾಥ್ ಬೆನ್ನಲ್ಲೇ ಮುನ್ನಲೆಗೆ ಬಂತಾ ಸತ್ಯನಾರಾಯಣ್ ರಾವ್ ಹೆಸರು?

Malenadu Today

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ಆಕಾಂಕ್ಷಿ ಅಭ್ಯರ್ಥಿಗಳು ಟಿಕೆಟ್ ಗಾಗಿ ಬಿರುಸಿನ ಪೈಪೋಟಿ ನಡೆಸುತ್ತಿದ್ದಾರೆ. ಕೆಲವರಿಗೆ ಟಿಕೆಟ್ ನಿಕ್ಕಿಯಾಗಿದ್ದರೂ ಮತ್ತೆ ಕೆಲವರು ಟಿಕೆಟ್ ಗಾಗಿ ಇನ್ನಿಲ್ಲದ ಕಸರತ್ತು ಮುಂದುವರೆಸಿದ್ದಾರೆ. ಇದಕ್ಕೆ ಶಿವಮೊಗ್ಗ ನಗರ ಕ್ಷೇತ್ರ ಕೂಡ ಹೊರತಾಗಿಲ್ಲ.

ಶಿವಮೊಗ್ಗ ಸಿಟಿಗಾಗಿ ಭಾರೀ ಪೈಪೋಟೀ!

ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳಿಂದ ಅಭ್ಯರ್ಥಿಗಳು ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ. ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಹೆಸರು ಮುನ್ನಲೆಯಲ್ಲಿದ್ದರೂ, ಇನ್ನು ಅಧಿಕೃತವಾಗಿಲ್ಲ. ಮೇಲಾಗಿ ಅದೇ ಕಾರಣಕ್ಕೆ ಕೆ.ಎಸ್​.ಈಶ್ವರಪ್ಪನವರು ಹೊರತು ಚುನಾವಣಾ ಪ್ರಚಾರದ ರಂಗ ಪ್ರವೇಶ ಮಾಡಿಲ್ಲ.

Malenadu Today

ಕಾಂಗ್ರೆಸ್​ನಲ್ಲಿ ಹನ್ನೊಂದು ಅಭ್ಯರ್ಥಿಗಳ ಓಡಾಟ

ಕಾಂಗ್ರೆಸ್ ನಿಂದ ಹನ್ನೊಂದು ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದು ಎಲ್ಲರೂ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.,ಸುಂದರೇಶ್, ಕೆ.ಬಿ ಪ್ರಸನ್ನ ಕುಮಾರ್ ,ಯೋಗೇಶ್, ನಯಾಝ್ ಅಹಮ್ಮದ್, ಮರಿಯಪ್ಪ, ಶೀನ್ ಜೋಸೆಪ್ ವೈ.ಹೆಚ್  ನಾಗರಾಜ್, ಲೈ ಔಟ್ ಇಮ್ತಿಯಾಜ್  ಸತ್ಯನಾರಾಯಣ ನರಸಿಂಹಮೂರ್ತಿ ನಾರಾಯಣಸ್ವಾಮಿ ಸ್ಪರ್ದಾಕಣದಲ್ಲಿದ್ದಾರೆ. ಇದರ ನಡುವೆ ದಿಢೀರ್ ಆಗಿ ಆಯನೂರು ಮಂಜುನಾಥ್ ಹೆಸರು ರಂಗಪ್ರವೇಶವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಚಿತ್ರಣವೇ ಬದಲಾಗಿ ಹೋಗಿದೆ.   ಬಿಜೆಪಿಯ ಆಯನೂರು ಮಂಜುನಾಥ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲೇ ಅಸಮಧಾನ ಸೃಷ್ಟಿಸಿದೆ. ಇದೇ ಕಾರಣಕ್ಕೆ  ಬೆಂಗಳೂರಿಗೆ ತೆರಳಿದ ಶಿವಮೊಗ್ಗ ಕಾಂಗ್ರೆಸ್ ನಿಯೋಗ,  ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವ ಹನ್ನೊಂದು ಮಂದಿಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಚುನಾವಣೆ ಮಾಡುವುದಾಗಿ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Malenadu Today

ಲಾಬಿಯಲ್ಲಿ ಕೇಳಿಬಂತು ಹನ್ನೊಂದರಲ್ಲೊಂದು ಹೆಸರು

ಸದ್ಯ  ಆಯನೂರು ಮಂಜುನಾಥ್ ಗೆ ಟಿಕೆಟ್ ಕೊಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ತೀರ್ಮಾನವಾಗಿದೆ. ಇದರ ನಡುವೆ ಆಯನೂರು ಮಂಜುನಾಥ್ ಹೆಸರಿನ ಜೊತೆಗೆ ಕಾಂಗ್ರೆಸ್ ನ ಸತ್ಯನಾರಾಯಣ ರಾವ್ ಹೆಸರು ಕೂಡ ಮುನ್ನಲೆಗೆ ಬರುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ ನಿಂದ ಹನ್ನೊಂದು ಮಂದಿ ಅಭ್ಯರ್ಥಿಗಳು ಸರ್ಧಾ ಕಣದಲ್ಲಿದ್ದಾರೆ.ಶಿವಮೊಗ್ಗ ನಗರ ಸಭೆ ಅಧ್ಯಕ್ಷರಾಗಿದ್ದಾಗ ನಗರಕ್ಕೆ ಗಾಜನೂರಿನಿಂದ ನೀರು ತಂದ ಸಾಧನೆ ಹಾಗೂ ಬೊಮ್ಮೆನ ಕಟ್ಟೆ ಆಶ್ರಯ ಯೋಜನೆಯ ಕಾಯಕಲ್ಪದ ಕೆಲಸವನ್ನು ಹಿಡಿದುಕೊಂಡು ಟಿಕೆಟ್​ ಗಾಗಿ ರಾಜ್ಯ ನಾಯಕರ ಬಳಿಯಲ್ಲಿ ಓಡಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಜೆ.ಹೆಚ್​.ಪಟೇಲ್ ಹಾಗೂ ಸಿದ್ದರಾಮಯ್ಯರಿಗೆ ಚಿರಪರಿಚಿತರಾಗಿರುವ ಸತ್ಯನಾರಾಯಣ್​ ರಾವ್​ ಟಿಕೆಟ್ ತರುವಲ್ಲಿ ಗೆದ್ದರೇ,  ಪಕ್ಷದೊಳಗೆ ಬೇಗುದಿಯಾಗುತ್ತಿರುವ ಪಕ್ಷಾಂತರದ ಅಸಮಾಧಾನವೂ ಹೋಗಲಾಡುತ್ತೆ ಎಂಬ ಸಮಾಲೋಚನೆಯು ನಡೆಯುತ್ತಿದೆ.

Malenadu Today

ಜೆಡಿಎಸ್ ನಿಂದ ಅಭ್ಯರ್ಥಿ ಇನ್ನು ಅಂತಿಮಗೊಂಡಿಲ್ಲ.

ಹಾಗೊಂದು ವೇಳೇ ಆಯನೂರು ಮಂಜುನಾಥ್ ಕಾಂಗ್ರೆಸ್​ಗೆ ಬರಲು ಸಾಧ್ಯವಾಗದೆ ಹೋದರು ಸಹ ಬಂಡಾಯವಾಗಿ ಅವರ ಸ್ಪರ್ಧೆ ಖಚಿತವಂತೆ. ಇತ್ತ ಜೆಡಿಎಸ್​ ಇನ್ನೂ ಅಭ್ಯರ್ಥಿಯನ್ನು ನಿಕ್ಕಿ ಮಾಡಿಲ್ಲ. ಅಲ್ಲಿಯು ಸ್ಟ್ರಾಂಗ್ ಕ್ಯಾಂಡಿಡೇಟ್​ ಬಿದ್ದರೆ, ಶಿವಮೊಗ್ಗದಲ್ಲಿ ಚುತುಷ್ಕೋನ ಸ್ಪರ್ಧೆಗೆ ವೇದಿಕೆ ಸಿದ್ಧವಾಗುತ್ತದೆ.  ಹಿಂದುತ್ವದ ಅಲೆ ಒಂದು ಕಡೆ, ಇನ್ನೊಂದು ಕಡೆ ಶಾಂತಿಯ ಯುಗಾದಿಯ ಮಾತುಗಳು  ಹಾಗೂ ತೆನೆಹೊತ್ತವರ ನಡುವೆ ಕಾಂಗ್ರೆಸ್​ ಉತ್ತಮ ಗ್ಯಾರಂಟಿ ಅಭ್ಯರ್ಥಿ ಹಿಡಿದು ಬಂದರೆ ಪೈಪೋಟಿಯ ಚುನಾವಣೆಯನ್ನು ಪಕ್ಕವಾಗುತ್ತದೆ. ಅದಕ್ಕೂ ಮೊದಲು ಟಿಕೆಟ್ ಗಾಗಿ ನಡೆಯುತ್ತಿರುವ ಪೈಪೋಟಿಗೆ ಶಾಂತಿ ಪರಿಹಾರ ಒದಗಿಸಬೇಕಿದೆ.. 

Malenadu Today

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 

read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, Ullu

Share This Article