Shivamogga police : ಮಕ್ಕಳ ಅಶ್ಲೀಲ ವಿಡಿಯೋ ಫೇಸ್​ಬುಕ್​ಗೆ ಅಪ್ಲೋಡ್​/ ಅಮೆರಿಕಾದಿಂದ ಶಿವಮೊಗ್ಗಕ್ಕೆ ಬಂತು ಮಾಹಿತಿ/ ಇಬ್ಬರ ವಿರುದ್ಧ ಕೇಸ್​

Shivamogga police have registered two separate cases against two persons for uploading child pornographic videos on Facebook. Police have registered a case based on information provided by CyberTipline.

Shivamogga police  :  ಮಕ್ಕಳ ಅಶ್ಲೀಲ ವಿಡಿಯೋ ಫೇಸ್​ಬುಕ್​ಗೆ ಅಪ್ಲೋಡ್​/ ಅಮೆರಿಕಾದಿಂದ ಶಿವಮೊಗ್ಗಕ್ಕೆ ಬಂತು ಮಾಹಿತಿ/ ಇಬ್ಬರ ವಿರುದ್ಧ ಕೇಸ್​
Shivamogga police : ಮಕ್ಕಳ ಅಶ್ಲೀಲ ವಿಡಿಯೋ ಫೇಸ್​ಬುಕ್​ಗೆ ಅಪ್ಲೋಡ್​/ ಅಮೆರಿಕಾದಿಂದ ಶಿವಮೊಗ್ಗಕ್ಕೆ ಬಂತು ಮಾಹಿತಿ/ ಇಬ್ಬರ ವಿರುದ್ಧ ಕೇಸ್​

Shivamogga police  : ಶಿವಮೊಗ್ಗ ಪೊಲೀಸರು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ ಇಬ್ಬರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.. ಸೈಬರ್ ಟಿಪ್ ಲೈನ್ ( CyberTipline) ಮೂಲಕ ಮಾಹಿತಿ ಲಭ್ಯವಾಗಿದ್ದು, ಬೆಂಗಳೂರಿನ ಸಿಐಡಿ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿದೆ. ಭದ್ರಾವತಿ ತಾಲೂಕು ಮತ್ತು ಶಿಕಾರಿಪುರ ತಾಲೂಕಿನ ಇಬ್ಬರು ಯುವಕರ ವಿರುದ್ಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್‌ ಬುಕ್ಕಿಗೆ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಇವರು ಅಪ್ ಲೋಡ್ ಮಾಡಿದ್ದರು. ಇದರ ಕುರಿತು ಸೈಬರ್ ಟಿಪ್ ಲೈನ್ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

*Shivamogga news :ಆಸ್ಪತ್ರೆಗೆ ಹೋಗುವ ಗಡಿಬಿಡಿಯಲ್ಲಿ ಬ್ಯಾಗ್​ ಕಳೆದುಕೊಂಡ ಮಹಿಳೆ/ ಸ್ಟೇಷನ್​ಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಚಾಲಕ

ಸೈಬರ್ ಟೆಪ್ ಲೈನ್ ಮೂಲಕ ಶಿವಮೊಗ್ಗದಲ್ಲಿ ದೂರು ದಾಖಲಾಗುತ್ತಿರುವುದು ಇದೆ ಮೊದಲಲ್ಲ, ಈ ಹಿಂದೆ ಕೂಡ ಹಲವರ ವಿರುದ್ಧ ಸೈಬರ್ ಟಿಪ್ ಲೈನ್ ದೂರು ಆಧರಿಸಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ಇದೇ ರೀತಿಯ ಪ್ರಕರಣದಲ್ಲಿ ಅಪರಾಧಿಗಳನ್ನು ಹಿಡಿದು ಶಿಕ್ಷೆ ಕೊಡಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಕೆಟಿ ಗುರುರಾಜ್​ರಿಗೆ ಇಂಡಿಯಾ ಸೈಬರ್​ ಕಾಪ್ ಪ್ರಶಸ್ತಿ ಲಭ್ಯವಾಗಿತ್ತು. ಇನ್ನು ಇಂತಹ ಪ್ರಕರಣಗಳಲ್ಲಿ ಅಪರಾಧ ಸಾಬೀತಾದರೆ ಐಟಿ ಕಾಯಿದೆ 67 ಬಿ ಪ್ರಕಾರ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ವರೆಗೆ ದಂಡ ವಿಧಿ ಸಬಹುದಾಗಿದೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com