ಬೈಕ್‌ ಸೈಡಿಗೆ ತೆಗೆಯಿರಿ ಎಂದಿದ್ದಕ್ಕೆ ಕಿರಿಕ್!‌ ವ್ಯಕ್ತಿಯ ಮೇಲೆ ಹಲ್ಲೆ

A man was assaulted for telling him to put the bike on the side at Shiralakoppa Police Station Limits.

ಬೈಕ್‌ ಸೈಡಿಗೆ ತೆಗೆಯಿರಿ ಎಂದಿದ್ದಕ್ಕೆ ಕಿರಿಕ್!‌ ವ್ಯಕ್ತಿಯ ಮೇಲೆ ಹಲ್ಲೆ
Shiralakoppa Police Station Limits

Shivamogga  Mar 26, 2024 Shiralakoppa Police Station Limits  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ  ಬೈಕ್‌ ಸೈಡಿಗೆ ತೆಗೆದುಕೊಳ್ಳಿ ಎಂದಿದ್ದಕ್ಕೆ ಮೂವರು ಹಲ್ಲೆ ಮಾಡಿರುವ ಘಟನೆ ಬಗ್ಗೆ FIR ದಾಖಲಾಗಿದೆ. ಶಿರಾಳಕೊಪ್ಪ ಪೇಟೆಯ ಕಿರಾಣಿ ಅಂಗಡಿಯೊಂದರ ಸಮೀಪ ಈ ಘಟನೆ ನಡೆದಿದ್ದು. ಈ ಸಂಬಂಧ IPC 1860 (U/s-323,324,504,341,506,34) ಅಡಿಯಲ್ಲಿ ಕೇಸ್‌ ದಾಖಲಾಗಿದ್ದು, ಪ್ರಕರಣದ ಸಾರಾಂಶ ಹೀಗಿದೆ 

ಇಲ್ಲಿನ ನಿವಾಸಿಯೊಬ್ಬರು ಕಿರಾಣಿ ಸಾಮಾನು ತೆಗೆದುಕೊಂಡು ತಮ್ಮ ಬೈಕ್‌ ಸ್ಟಾರ್ಟ್‌ ಮಾಡಿದ್ದಾರೆ. ಅದೇ ಹೊತ್ತಿಗೆ ಅಲ್ಲಿಯೇ ಬೈಕ್‌ ನಿಲ್ಲಿಸಿಕೊಂಡಿದ್ದ ಯುವಕರಿಗೆ ಬೈಕ್‌ ಸೈಡಿಗೆ ತೆಗೆದುಕೊಳ್ಳಿ ಮುಂದಕ್ಕೆ ಪಾಸಾಗುತ್ತೇನೆ ಎಂದಿದ್ದಾರೆ. ಈ ವಿಚಾರಕ್ಕೆ ಯುವಕರು ನಿವಾಸಿಯ ಮೇಲೆ ಅಟ್ಯಾಕ್‌ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಮಧ್ಯಪ್ರವೇಶ ಮಾಡಿ ಜಗಳ ಬಿಡಿಸಿ ನಿವಾಸಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿನ ಹೇಳಿಕೆ ಪಡೆದು ಶಿರಾಳಕೊಪ್ಪ ಪೊಲೀಸ್‌ ಕೇಸ್‌ ದಾಖಲಿಸಿದ್ದಾರೆ.