Shiralakoppa ಗೋವಾದ ಖಾಜಾ ಹಾವೇರಿ ಶಿರಾಳಕೊಪ್ಪ ಪೊಲೀಸರಿಂದ ಅರೆಸ್ಟ್ ಬರೋಬ್ಬರಿ ₹7 ಲಕ್ಷದ ಮಾಲು ಜಪ್ತಿ

Shiralakoppa police arrested Goa-based Khaja Haveri Rs 7 lakh worth of jewellery seized

Shiralakoppa ಗೋವಾದ ಖಾಜಾ ಹಾವೇರಿ ಶಿರಾಳಕೊಪ್ಪ ಪೊಲೀಸರಿಂದ ಅರೆಸ್ಟ್ ಬರೋಬ್ಬರಿ ₹7 ಲಕ್ಷದ ಮಾಲು ಜಪ್ತಿ
Shiralakoppa police arrested Goa-based Khaja Haveri Rs 7 lakh worth of jewellery seized

SHIVAMOGGA  |  Jan 19, 2024  | Shiralakoppa police   ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದು ಬಯಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಸರಿಸುಮಾರು ಏಳು ಲಕ್ಷ ಮೌಲ್ಯ ಚಿನ್ನವನ್ನ ಜಪ್ತು ಮಾಡಿದ್ದಾರೆ. 

ಶಿರಾಳಕೊಪ್ಪ ಟೌನ್ ಭೋವಿ ಕಾಲೋನಿಯ ವಾಸಿಯೊಬ್ಬರ ವಾಸದ ಮನೆಯಲ್ಲಿ  ದಿನಾಂಕಃ 28-12-2023 ರಂದು ಕಳ್ಳತನವಾಗಿತ್ತು. ಮನೆಯ ಹಿಂಬದಿ ಬಾಗಿಲಿನಿಂದ ಬಂದು ಬೀರುವಿನಲ್ಲಿದ್ದ  6,81,000/-  ರೂಗಳ ಬಂಗಾರದ ಆಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ  ಶಿರಾಳಕೊಪ್ಪ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0296/2023 ಕಲಂ 454, 380 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. 

ಪ್ರಕರಣ ಸಂಬಂಧ  ಮಂಜುನಾಥ ಎಸ್ ಕುರಿ ಪಿ.ಎಸ್.ಐ ಶಿರಾಳಕೊಪ್ಪ ಠಾಣೆ ರವರ ನೇತೃತ್ವದಲ್ಲಿ ಪುಷ್ಪಾ ಪಿಎಸ್ಐ, ಶಿರಾಳಕೊಪ್ಪ ಠಾಣೆ, ಕೆಂಚಪ್ಪ ಪಿಎಸ್ಐ ಬೆರಳು ಮುದ್ರಾ ಘಟಕ ಶಿವಮೊಗ್ಗ, ರಮೇಶ್ ನಾಯ್ಕ ಎಎಸ್ಐ ಬೆರಳುಮುದ್ರಾ ಘಟಕ ಶಿವಮೊಗ್ಗ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ  ಸಂತೋಷ್, ಮಹದೇವ್ ಮತ್ತು ಪಿಸಿ ಸಲ್ಮಾನ್, ಕಾರ್ತಿಕ್, ಅಶೊಕ, ನಾಗರಾಜ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ಹೆಚ್.ಸಿ ಇಂದ್ರೇಶ್, ಗುರುರಾಜ್, ವಿಜಯ್ ಮತ್ತು ಬೆರಳು ಮುದ್ರೆ ಘಟಕದ ತ್ಯಾಗರಾಜ್ ಮತ್ತು ಕಿರಣ್ ರವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. . 

ತನಿಖಾ ತಂಡ ಇದೀಗ ಪ್ರಕರಣದ ಆರೋಪಿ ಖಾಜಾ ಹಾವೇರಿ @ ಖಾಜಾ, 24 ವರ್ಷ, ಜನ್ನತ್ ನಗರ ಹುಬ್ಬಳ್ಳಿ, ಹಾಲೀ ವಾಸ ವಾಸ್ಕೊ ಗೋವಾ ನನ್ನ ಅರೆಸ್ಟ್ ಮಾಡಿದೆ. ಅಲ್ಲದೆ ಬಂಧಿತನಿಂಧ  ಶಿರಾಳಕೊಪ್ಪ ಪೊಲೀಸ್ ಠಾಣೆಯ ಮನೆಗಳ್ಳತನ ಪ್ರಕರಣ ಮತ್ತು ಹಾನಗಲ್ ಪೊಲೀಸ್ ಠಾಣೆಯ ದ್ವಿ ಚಕ್ರ ವಾಹನ ಕಳ್ಳತನ ಸೇರಿ ಒಟ್ಟು 02 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 6,81,200/-  ರೂಗಳ 111.85 ಗ್ರಾಂ ತೂಕ ಬಂಗಾರ ಆಭರಣ ಮತ್ತು 326  ಗ್ರಾಂ ತೂಕದ ಬೆಳ್ಳಿಯ ಆಭರಣ ಮತ್ತು ಅಂದಾಜು ಮೌಲ್ಯ 35,000/-  ರೂಗಳ ಒಂದು ದ್ವಿ ಚಕ್ರ ವಾಹನ ಸೇರಿ ಒಟ್ಟು 7,16,200/-  ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.