ಶಿವಮೊಗ್ಗ -ಗೋವಾ ವಿಮಾನ ಹಾರಾಟ ರದ್ದು! ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರ ಸಿಡಿಮಿಡಿ!

Shimoga-Goa flight cancelled Passengers at Shivamogga airport

ಶಿವಮೊಗ್ಗ -ಗೋವಾ ವಿಮಾನ ಹಾರಾಟ ರದ್ದು! ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರ ಸಿಡಿಮಿಡಿ!

SHIVAMOGGA |  Dec 20, 2023  |  ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಈ ಸಲ ಗೋವಾಕ್ಕೆ ವಿಮಾನ ಹಾರಾಟ ನಡೆಸದೇ ರದ್ದಾಗಿದೆ. 

ಪರಿಣಾಮ 50 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಸ್ಟಾರ್ ಏರ್ ಸಂಸ್ಥೆ ಹಾರಾಟವನ್ನು ರದ್ದುಗೊಳಿಸಿದೆ. ಇದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ. 

READ : ಇವತ್ತು ಎಷ್ಟಿದೆ ಅಡಿಕೆ ದರ!? ಯಾವ ತಾಲ್ಲೂಕಿನಲ್ಲಿ ಎಷ್ಟಿದೆ Arecanut Rate

ಇತ್ತೀಚೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಸ್ಯೆಯ ಸಂಬಂಧ ಸಾಕಷ್ಟು ಬದಲಾವಣೆ ಮಾಡುವ ಬಗ್ಗೆ ಕೇಂದ್ರ ಸಚಿವರ ಜೊತೆಗೆ ಸಂಸದ ಬಿ.ವೈ.ರಾಘವೇಂದ್ರರವರು ಮಾತುಕತೆ ನಡೆಸಿದ್ದರು. ಮಿಸ್ಟ್ ಕಾರಣಕ್ಕೆ ವಿಮಾನ ಲ್ಯಾಂಡಿಂಗ್ ಸಮಸ್ಯೆಯಾಗುತ್ತಿದೆ ಎನ್ನಲಾಗಿತ್ತು. 

ಇವತ್ತು ಯಾವ ಕಾರಣಕ್ಕೆ ವಿಮಾನ ಲ್ಯಾಂಡಿಂಗ್ ಪ್ರಾಬ್ಲಮ್ ಆಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇವತ್ತು ಬೆಳಗ್ಗೆ 11 ಗಂಟೆ ಗೆ ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ವಿಮಾನ ರದ್ದಾಗಿದೆ ಎಂದು ತಿಳಿದುಬಂದಿದೆ.