ಸವಿ..ಸವಿ ನೆನಪು...ಸಾವಿರ ನೆನಪು! ಒಂದು ಫೋಟೋಗಾಗಿ ಮತ್ತೆ ಒಗ್ಗೂಡಿದ ವಿದ್ಯಾರ್ಥಿಗಳು!

Guruvandana programme by SSLC students of Shivananda High Schoolಶಿವಾನಂದ ಪ್ರೌಡಶಾಲೆಯ ಎಸಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ

ಸವಿ..ಸವಿ ನೆನಪು...ಸಾವಿರ ನೆನಪು! ಒಂದು ಫೋಟೋಗಾಗಿ ಮತ್ತೆ ಒಗ್ಗೂಡಿದ ವಿದ್ಯಾರ್ಥಿಗಳು!

KARNATAKA NEWS/ ONLINE / Malenadu today/ Aug 25, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶ್ರೀ ಕ್ಷೇತ್ರ ಶಿವನಪಾದದಲ್ಲಿ 2006-2007 ನೇ ಸಾಲಿನ ಶ್ರೀ ಶಿವಾನಂದ ಪ್ರೌಡಶಾಲೆಯ ಎಸಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಮತ್ತು ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಗುರುಗಳು ತೋರಿಸಿದ ಮಾರ್ಗದಿಂದ ಇಂದು ನಾವು ಉತ್ತಮ ದಾರಿಯಲ್ಲಿ ನಡೆಯುತ್ತಿದ್ದೇವೆ ಇಂತಹ ಮಹಾನ್ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಹಾಗೂ ನಮ್ಮ ಹಳೆಯ ಸ್ನೇಹಿತರನ್ನು ಬೇಟಿ ಮಾಡುವ ಉದ್ದೇಶದಿಂದ ಈ ಗುರುವಂದನ ಮತ್ತು ಸುಮಧುರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡಿದ್ಧಾರೆ. 

ಈ ಕಾರ್ಯಕ್ರಮದಲ್ಲಿ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಲಹಾ ಸಮಿತಿ ಶಿವಾನಂದ ಪ್ರೌಡಶಾಲೆ ಶಿವನಪಾದ, 2004 ರಿಂದ 2007 ರವೆರೆಗೆ ಕಲಿಸಿದ ಗುರುಗಳು ಹಾಗೂ 2006-2007ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಮತ್ತು ಹಾಲಿ ಶಿವಾನಂದ ಪ್ರೌಡಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಸುತ್ತ-ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. 


ತಿರುಗಾಟಕ್ಕೆ ಕರೆದೊಯ್ದು ಅಪ್ರಾಪ್ತೆಗೆ ಕಿರುಕುಳ! ಆರೋಪಿಗಳ ಬಂಧನಕ್ಕೆ ಆಗ್ರಹ! ಸಾಗರ ಬಂದ್ ಎಚ್ಚರಿಕೆ!

 

ಅಪ್ರಾಪ್ತೆಯೊಬ್ಬಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ, ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣವನ್ನು ಸಾಗರ ತಾಲ್ಲೂಕು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ನಡುವೆ  ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂಧು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಸಾಗರ  ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. 

 

ಆರೋಪಿಗಳು ಅಪ್ರಾಪ್ತೆಯನ್ನ  ಜೋಗ ಜಲಪಾತ ಸೇರಿದಂತೆ ಬೇರೆಬೇರೆ ಪ್ರದೇಶಗಳಿಗೆ ಕರೆದೊಯ್ದು ಮತ್ತು ಬರುವ ವಸ್ತು ನೀಡಿದ ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಕೇಸ್ ದಾಖಲಾಗಿದ್ದರೂ ಇನ್ನೂ ಅವರುಗಳ ಬಂಧನವಾಗಿಲ್ಲ. ಅವರನ್ನ ಕೂಡಲೇ  ಪತ್ತೆಹಚ್ಚಬೇಕೆಂದು ಆಗ್ರಹಿಸಿದ್ರು.  ಅಲ್ಲದೆ ಆರೋಪಿಗಳು ಬಾಲಕಿ ಕುಟುಂಬಕ್ಕೆ ಬೆದರಿಕೆ ಹಾಕಿದ ಬಗ್ಗೆ ಆರೋಪಗಳಿವೆ. ಹೀಗಾಗಿ ದುಷ್ಕರ್ಮಿಗಳನ್ನು ಬಂಧಿಸದಿದ್ದರೇ, ಸಾಗರ ಬಂದ್‌ಗೆ ಕರೆ ಕೊಡಬೇಕಾಗುವುದು ಎಂದು ಎಚ್ಚರಿಸಿದ್ರು.  


ಸಿಂಗಲ್ ಕೇಸ್​ನ ಬೆನ್ನುಬಿದ್ದ ಪೊಲೀಸರಿಗೆ ಕಾದಿತ್ತು ಶಾಕ್! ಇಬ್ಬರು ಆರೋಪಿಗಳ ಬಳಿ ಸಿಕ್ಕಿದ್ದು 12 ಬೈಕ್! ಏನಿದು ಪ್ರಕರಣ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು (soraba taluk)  ಪೊಲೀಸರು  ಇಬ್ಬರು ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 12 ಬೈಕ್​ಗಳನ್ನು ಜಪ್ತಿ ಮಾಡಿದ್ದಾರೆ.  

12 ಬೈಕ್ ಜಪ್ತಿ

ಆನವಟ್ಟಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸೊರಬ ಹಾಗೂ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಎರಡು, ಶಿಕಾರಿಪುರ ಟೌನ್, ಕುಂಸಿ, ಸಾಗರ ಟೌನ್, ಹಿರೇಕೆರೂರು, ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಬೈಕ್ ಸೇರಿದಂತೆ ಕಳುವಾದ ಒಟ್ಟು 12 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.  ಕಮನವಳ್ಳಿ ಗ್ರಾಮದ ಮಂಜುನಾಥ (25) ಹಾಗೂ ಹಿರೇಚೌಟಿ ಗ್ರಾಮದ ಸಿ.ಕೆ.ಅನಿಲ್ (22) ಬಂಧಿತರು. 

ಏನಿದು ಘಟನೆ

ಜಡೆ ಗ್ರಾಮದ ಸಂತೆ ಮೈದಾನದ ಬಳಿ ನಿಲ್ಲಿಸಿದ್ದ ಬೈಕ್‌ವೊಂದು ಕಳ್ಳತನವಾಗಿತ್ತು. ಈ ಸಂಬಂಧ ಬೈಕ್‌ನ ಮಾಲೀಕ ಚಂದ್ರ ಅವರು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.  ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಬೈಕ್ ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.  

ಆನವಟ್ಟಿ ಪಿಎಸ್‌ಐ ರಾಜುರೆಡ್ಡಿ ಬೆನ್ನೂರು ಮತ್ತು ವಿಠಲ್ ಎಂ.ಅಗಾಸಿ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸಿದೆ. ತಂಡದಲ್ಲಿ ಹೆಡ್ ಕಾನ್ಸ್‌ಟೇಬಲ್‌ಗಳಾದ ಗಿರೀಶ್, ಖಲಂದರ್, ಹರೀಶ್, ಕಾನ್‌ಸ್ಟೆಬಲ್‌ಗಳಾದ ಜಗದೀಶ್, ಮಂಜುನಾಥ್, ಮಲ್ಲೇಶ್, ಹರಿಪ್ರಸಾದ್, ಹನುಮಂತ, ಕೃಷ್ಣ, ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ಪಾಲ್ಗೊಂಡಿದ್ದರು.

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು