KARNATAKA NEWS/ ONLINE / Malenadu today/ Jun 28, 2023 SHIVAMOGGA NEWS
ಸಾಗರ / ತಾಲ್ಲೂಕಿನ ಆನಂದಪುರದಲ್ಲಿ ಮನಕಲಕುವ ಘಟನೆಯೊಂದು ಸಂಭವಿಸಿದೆ. ಹೆಣ್ಣುಮಕ್ಕಳ ಮದುವೆಯೆಂದು ಗಡಿಬಿಡಿಯಿಂದ ಓಡಾಡುತ್ತಿದ್ದ ತಂದೆಯೊಬ್ಬ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪದ ಬಳಿ ಈ ಘಟನೆ ಸಂಭವಿಸಿದೆ.
ಆನಂದಪುರದ ಕಡೆ ತೆರಳುತ್ತಿದ್ದ ಪಾದಾಚಾರಿಗೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಮಂಜುನಾಥ್ ಗೌಡ ಎಂಬ 58 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ವಿಷಯ ತಿಳಿಯುತ್ತಲೇ ಇಡೀ ಊರೇ ಕಣ್ಣಿರು ಹಾಕಿದೆ. ಏಕೆಂದರೆ, ಮೃತ ಮಂಜುನಾಥ್ ಗೌಡರು ತಮ್ಮ ಹೆಣ್ಣುಮಕ್ಕಳ ಮದುವೆಯ ಸಿದ್ದತೆಯಲ್ಲಿದ್ದರು.
ಇವತ್ತು ಅಂದರೆ ಬುಧವಾರ ಗೌಡರ ಇಬ್ಬರು ಹೆಣ್ಣುಮಕ್ಕಳ ಮದುವೆ ಕೆಂಜಿಗಾಪುರ ದೇವಸ್ಥಾನದಲ್ಲಿ ನಿಶ್ಚಯವಾಗಿತ್ತು. ಇದೇ ಓಡಾಟದಲ್ಲಿದ್ದರು ಮಂಜುನಾಥಗೌಡರು. ಅಷ್ಟರಲ್ಲಿ ಯಮನಂತೆ ಬಂದ ಸ್ವಿಫ್ಟ್ ಕಾರ್ ಮಂಜುನಾಥ್ ಗೌಡರ ಜೀವವನ್ನೆ ತೆಗೆದಿದೆ.
ಮದುವೆಯ ಚಪ್ಪರ ಕಟ್ಟಿಸಿಕೊಂಡು ಕಳೆಕಟ್ಟಿದ್ದ ಮನೆಯಲ್ಲಿಗ ನೀರವ ಮೌನ ಆವರಿಸಿದೆ. ವಿರ್ಪಯಾಸ ಅಂದರೆ, ಮೂರು ವರ್ಷದ ಹಿಂದೆ ಮಂಜುನಾಥಗೌಡ ರವರ ಪತ್ನಿಯೂ ಕೂಡ ಟ್ರ್ಯಾಕ್ಟರ್ ಅಪಘಾತದಲ್ಲಿ ಸಾವನನಪ್ಪಿದ್ದರು,
ಅಗ್ನಿಪಥ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸೇನಾ ನೇಮಕಾತಿ ಶಿಬಿರ! ಯಾರಿಗೆಲ್ಲಾ ಅವಕಾಶ!?
ಅಗ್ನಿಪಥ್ ಯೋಜನೆಯಡಿ ಅಗ್ನಿವೀರ ರನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಕರಾವಳಿ ಜಿಲ್ಲೆ ಉಡುಪಿಯ ಮಹಾತ್ಮಗಾಂಧಿ ಕ್ರೀಡಾಂಗಣ ದಲ್ಲಿ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ 6,500 ಅಭ್ಯರ್ಥಿ ಗಳು ಆಯ್ಕೆಯಾಗಿದ್ದಾರೆ. ಅಂತಿ ಮವಾಗಿ ದೈಹಿಕ ಪರೀಕ್ಷೆ ಹಿನ್ನೆಲೆಯಲ್ಲಿ ಈಗ ರ್ಯಾಲಿ ನಡೆಸಲಾಗುತ್ತಿದೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ದೈಹಿಕ ಪರೀಕ್ಷೆಯ ರಾಲಿಯಲ್ಲಿ ಭಾಗವಹಿಸಬಹುದು. ಱಲಿಯು ಇದೇ ಜುಲೈ 17ರಿಂದ 23ರ ವರೆಗೆ ನಡೆಯಲಿದೆ. ಜುಲೈ 17ರಂದು ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಅಭ್ಯರ್ಥಿಗಳು, ಜು.18ರಂದು ಉತ್ತರ ಕನ್ನಡ ಮತ್ತು ಗದಗ, ಜು.19ರಂದು ಧಾರ ವಾಡ, 20ರಂದು ವಿಜಯಪುರ, 21,22ರಂದು ಬಾಗಲಕೋಟ, 23ರಂದು ಎಲ್ಲ ಜಿಲ್ಲೆಯವರಿಗೆ ಱಲಿ ನಡೆಯಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪಲ್ಟಿಯಾದ ಪಿಕಪ್ ವಾಹನ! ನಡೆದಿದ್ದೇಗೆ?
ಚಿಕ್ಕಮಗಳೂರು: ತಮ್ಮ ಮನೆಗೆ ಪೋಲ್ಸ್ಗಳನ್ನ ಹಾಗೂ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಪಿಕಪ್ ವಾಹನವೊಂದು ಚಾರ್ಮಾಡಿ ಘಾಟಿಯಲ್ಲಿ ಪಲ್ಟಿಯಾದ ಘಟನೆ ಬಗ್ಗೆ ನಿನ್ನೆ ವರದಿಯಾಗಿದೆ. ಘಾಟಿ ರಸ್ತೆಯ ಮೇಲೆ ವಾಹನ ಪಲ್ಟಿಯಾದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಮಳೆಯಿಂದಾಗಿ ರಸ್ತೆ ತೇವಗೊಂಡಿತ್ತು. ಲೋಡ್ ಗಾಡಿಯ ಟಯರ್ ಆಲೇಖಾನ್ ಬಳಿಯಲ್ಲಿ ರಸ್ತೆಯಿಂದ ಕೆಳಕ್ಕೆ ಇಳಿದಿದೆ. ಇದರಿಂದ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
