ಟಿಪ್ಪು ನಗರ , ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಘಟನೆ ಬಗ್ಗೆ ಬಜರಂಗದಳದ ರಾಜೇಶ್​ ಗೌಡ ಹೇಳುವುದೇ ಬೇರೆ? ಏನಿದು ಆರೋಪ

This Article Written by / Malenadu Today / ಜೂನ್ 26, 2023

KARNATAKA NEWS/ ONLINE / Malenadu today/ Jun 26, 2023 SHIVAMOGGA NEWS

ಶಿವಮೊಗ್ಗ ನಗರದಲ್ಲಿ ನಡೆದ ಎರಡು ಘಟನೆಗಳು, ಕೋಮು ಬಣ್ಣವನ್ನು ಪಡೆದುಕೊಂಡು ಫೇಕ್​ ನ್ಯೂಸ್​ ರೂಪದಲ್ಲಿ ಹರಿದಾಡುತ್ತಿತ್ತು. ನಡೆದ ಘಟನೆಗಗಳಲ್ಲಿ ಎರಡು ಕೋಮುಗಳ ಯುವಕರು ಇರೋದು ಇಷ್ಟೆಕ್ಕೆಲ್ಲಾ ಕಾರಣವಾಗಿತ್ತು. ನಡೆದ ಘಟನೆಯ ಬಗ್ಗೆ ಮಾತನಾಡಿದ ಬಜರಂಗ ದಳದ  ಶಿವಮೊಗ್ಗ ಜಿಲ್ಲಾ ಸಂಚಾಲಕ ರಾಜೇಶ್​ ಗೌಡ, ಬೇರೆಯದ್ದೆ ರೀತಿಯಲ್ಲಿ ಘಟನೆಯನ್ನು ವ್ಯಾಖ್ಯಾನಿಸಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಟಿಪ್ಪು ನಗರ ಹಾಗು ದ್ರೌಪದಮ್ಮ ಸರ್ಕಲ್​ ಬಳಿ ನಡೆದ ಘಟನೆಗಳು ಬೇರೆ ಬೇರೆಯಲ್ಲ. ಎರಡು ಘಟನೆಯು ಗೋವಿನ ರಕ್ಷಣೆ ಮಾಡಿದ್ದಕ್ಕೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಅವರು ಹೇಳುವ ಪ್ರಕಾರ, ನಿನ್ನೆ ತುಂಗಾನಗರದ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂಬಂಧ ಪೊಲೀಸರಿಗೆ ಮಾಹಿತಿ ಬಜರಂಗದಳ ಮಾಹಿತಿ ನೀಡಿತ್ತು. ಇದೇ ಕಾರಣ ದ್ವೇಷದ ಹಿನ್ನೆಲೆಯಲ್ಲಿ ಸಂದೇಶ್​ ಎಂಬವರಿಗೆ ಹಲ್ಲೆ ಮಾಡಲಾಗಿದೆ. ಸಂದೇಶ್​ ಬಜರಂಗದಳ ಕಾರ್ಯಕರ್ತನಾಗಿದ್ದು, ಅವರ ಮಾವ ಜಿತೇಂದ್ರ ಗೌಡ ವಿಶ್ವ ಹಿಂದೂ ಪರಿಷತ್​ನಲ್ಲಿ ಪ್ರಮಖ ಸ್ಥಾನದಲ್ಲಿದ್ದಾರೆ. ಇನ್ನೂ ಸಂದೇಶ್​ರನ್ನ ನೋಡಲು ಬಂದಿದ್ದ ವಿಜಯ್​ ಕುಮಾರ್​ರ ಮೇಲೂ ಹಲ್ಲೆ ನಡೆದಿದ್ದು ಘಟನೆಯನ್ನ ರಾಜೇಶ್ ಗೌಡ ಖಂಡಿಸಿದ್ದಾರೆ. 


 

assault,SHIVAMOGGA,Tunganagar Police Station

ಮುಂದಿನ ಸುದ್ದಿ ಒದಿ

Leave a Comment