ಪ್ರಯಾಣಿಕರ ಗಮನಕ್ಕೆ:  ಈ ಪ್ರದೇಶಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಅವಧಿ ವಿಸ್ತರಣೆ

ಹಂಚಿಕೊಳ್ಳಿ
WhatsApp Facebook X Telegram
SWR Train Trains Cancelled Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
SWR Train Trains Cancelled Birur-Talguppa Railway Train Servis Changed Changed Shivamogga-Talaguppa Train Marikamba Jatre Special Train Railway Halt Extended Special Train to Sagara Marikamba Jathre from Feb 3 Shivamogga Train Timings Change 2026 Dasara Special Trains

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಅರಳಗುಪ್ಪೆ ಹಾಲ್ಟ್ ಮತ್ತು ಹಳ್ಳಿಗುಡಿ ರೈಲ್ವೆ ನಿಲ್ದಾಣಗಳಲ್ಲಿ ಸದ್ಯ ಜಾರಿಯಲ್ಲಿರುವ ರೈಲುಗಳ ತಾತ್ಕಾಲಿಕ ಒಂದು ನಿಮಿಷದ ನಿಲುಗಡೆಯನ್ನು ಜುಲೈ 1, 2026 ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

SWR Train ಯಾವೆಲ್ಲಾ ರೈಲುಗಳ ನಿಲುಗಡೆ ಮುಂದುವರಿಕೆ?

ರೈಲ್ವೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ರೈಲು ಸಂಖ್ಯೆ 16239/16240 ಚಿಕ್ಕಮಗಳೂರು–ಯಶವಂತಪುರ–ಚಿಕ್ಕಮಗಳೂರು ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಅರಳಗುಪ್ಪೆ ಹಾಲ್ಟ್ ನಿಲ್ದಾಣದಲ್ಲಿ ತನ್ನ ನಿಲುಗಡೆಯನ್ನು ಮುಂದುವರಿಸಲಿದೆ. ಇದರೊಂದಿಗೆ, ರೈಲು ಸಂಖ್ಯೆ 56927/56928 ಎಸ್‌ಎಸ್‌ಎಸ್ ಹುಬ್ಬಳ್ಳಿ–ಸಿಂಧನೂರು–ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಹಳ್ಳಿಗುಡಿ ನಿಲ್ದಾಣದಲ್ಲಿ ನಿಲ್ಲಲಿದೆ.

ಈ ಎರಡೂ ರೈಲುಗಳು ಆಯಾ ನಿಲ್ದಾಣಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಿತ ವೇಳಾಪಟ್ಟಿಯಂತೆಯೇ ತಲಾ ಒಂದು ನಿಮಿಷಗಳ ಕಾಲ ನಿಲುಗಡೆ ನೀಡಲಿವೆ. ಸಾರ್ವಜನಿಕರು ಹಾಗೂ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಗಿರೀಶ ಧರ್ಮರಾಜ ಕಲಗೊಂಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

SWR Train Stoppages Extended at Aralaguppe, Halligudi

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor