ಮಾರಿ ಜಾತ್ರೆ ಅಂಗವಾಗಿ ತೀರ್ಥಹಳ್ಳಿಯಲ್ಲಿ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿ! ಡಿಟೇಲ್ಸ್ ಇಲ್ಲಿದೆ
National level kho kho tournament at Tirthahalli as part of Mari Jatre

Shivamogga Mar 11, 2024 ಶಿವಮೊಗ್ಗದಲ್ಲಿ ನಾಳೆಯಿಂದ ಅಂದರೆ ಮಾರ್ಚ್ 12 ರಿಂದ 19 ರ ವರೆಗೆ. ಬಹಳ ವಿಜೃಭಣೆಯಿಂದ ಮಾರಿಜಾತ್ರೆ ನಡೆಯಲಿದೆ. ಈ ಹಿನ್ನಲೆ ತೀರ್ಥಹಳ್ಳಿ ತಾಲೂಕಿನ ಕ್ರೀಡಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತೀರ್ಥಹಳ್ಳಿಯ ಏಕಲವ್ಯ ಸ್ಪೋಟ್ಸ್ ಕ್ಲಬ್ ಹಾಗೂ ಮಾರಿಕಾಂಬ ದೇವಸ್ಥಾನದ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರು ಖೋ…ಖೋ.. ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಿದೆ.
ಏಕಲವ್ಯ ಕ್ಲಬ್ ನ ಹೆಮ್ಮೆಯ ಆಟಗಾರನಾಗಿದ್ದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕಾರ ದಿವಂಗತ ವಿನಯ್ ಗೌಡ ಹಾಗೂ ದಿವಂಗತ ನಂದಿಕೇಶ್ವರ ಶೆಟ್ಟಿ ಇವರ ಸ್ಮರಣಾರ್ಥವಾಗಿ ಈ ಪಂದ್ಯಾವಳಿಯನ್ನು ನಡೆಸಲು ಮಂಡಳಿ ತೀರ್ಮಾನಿಸಿದೆ
ಮಾರಿಕಾಂಬ ದೇವಸ್ಥಾನ ತೀರ್ಥಹಳ್ಳಿ ಹಾಗೂ ಏಕಲವ್ಯ ಸ್ಪೋಟ್ಸ್ ತೀರ್ಥಹಳ್ಳಿ ಸಹಯೋಗದೊಂದಿಗೆ ನಡೆಸುತ್ತಿರುವ ರಾಷ್ಟ್ರಮಟ್ಟದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯು ದಿನಾಂಕ 14-03-2024 ರಿಂದ 17-03-2024 ರವರೆಗೆ ನಡೆಯಲ್ಲಿದ್ದು, ಈ ಪಂದ್ಯಾವಳಿಗೆ ದೇಶದ ವಿವಿಧ ರಾಜ್ಯಗಳಿಂದ 14 ತಂಡಗಳು 350 ಜನ ಕ್ರೀಡಾಪಟುಗಳು ಹಾಗೂ 30 ಹೆಚ್ಚಿನ ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕ್ಲಬ್ ನವರು ತಿಳಿಸಿದ್ದಾರೆ.
ಈ ಪಂದ್ಯಾವಳಿಯಲ್ಲಿ ಸುಮಾರು 26 ಪಂದ್ಯಾಗಳು ಲೀಗ್ ಕಂಮ್ ನಾಕೌಟ್ ಮಾದರಿಯಲ್ಲಿ ನಡೆಸಲಾಗುತ್ತದೆ. ಈ ಕ್ರೀಡಾ ಕೂಟದ ಉದ್ಘಾಟಣೆಗೆ ಕ್ರೀಡಾಪಟುಗಳು ಮತ್ತು ಕ್ರೀಡಾಧಿಕಾರಿಗಳ ಪ್ರಭತ್‌ಪೇರಿಯು(ಪಥಸಂಚಲನ) ದಿನಾಂಕ 14-03-2024 ರ ಸಂಜೆ 3 ಗಂಟೆಗೆ ವಿಶೇಷ ವೇಷಭೂಷಣಗಳೊಂದಿಗೆ ಹಾಗೂ ತೀರ್ಥಹಳ್ಳಿಯ ಹುಲಿವೇಷದಾರಿಗಳೊಂದಿಗೆ ಕುಶಾವತಿ ನೆಹರು ಪಾರ್ಕ್‌ನಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾರಿಕಾಂಬ ದೇವಸ್ಥಾನದಿಂದ ಕ್ರೀಡಾ ಜ್ಯೋತಿಯನ್ನು ಬೆಳಗಿಸಿಕೊಂಡು ಎ.ಪಿ.ಎಂ.ಸಿ ಪಕ್ಕದ ಕ್ರೀಡಾಂಗಣದಲ್ಲಿ ವಿದ್ಯುಕ್ತವಾಗಿ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗೆ ಉದ್ಘಾಟಣೆ ನಡೆಸಲಾಗುತ್ತದೆ.
ಕ್ರೀಡಾಭಿಮಾನಿಗಳಿಗಾಗಿ ಸುಮಾರು 2 ಸಾವಿರ ಜನರಿಗೆ ಪಂದ್ಯಾವಳಿಯನ್ನು ವಿಕ್ಷೀಸಲು ಗ್ಯಾಲರಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೂ ಈ ಪಂದ್ಯಾವಳಿಗೆ ಹೆಚ್ಚಿನ ಮೆರಗನ್ನು ನೀಡಲು ವಿವಿಧ ರೀತಿಯ ತಿನಿಸುಗಳ ಮಳಿಗೆಗಳು ಹಾಗೂ ತೂಗು-ತೊಟ್ಟಿಲುಗಳ ಸಮೇತ ವಿವಿಧ ರೀತಿಯ ಮನರಂಜನೆಯ ಆಟೋಟಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಪಂದ್ಯದಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ಬೃಹತ್ ಮೊತ್ತದ ಬಹುಮಾನವನ್ನು ಮಂಡಳಿ ನಿಗದಿ ಪಡಿಸಿದೆ.