ನಿಮ್​ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್​ ಇದೆ! ನೋಡೋದು ಹೇಗೆ? ಇಲ್ಲಿದೆ ಡಿಟೇಲ್ಸ್​ ! ಸಿಂಪಲ್ ಕ್ಲಿಕ್​ನಲ್ಲಿ ಸಿಗುತ್ತೆ ಮಾಹಿತಿ

How many SIM cards are there in your name! How to see Here are the details! ನಿಮ್​ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್​ ಇದೆ! ನೋಡೋದು ಹೇಗೆ? ಇಲ್ಲಿದೆ ಡಿಟೇಲ್ಸ್​ !

ನಿಮ್​ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್​ ಇದೆ! ನೋಡೋದು ಹೇಗೆ? ಇಲ್ಲಿದೆ ಡಿಟೇಲ್ಸ್​ ! ಸಿಂಪಲ್ ಕ್ಲಿಕ್​ನಲ್ಲಿ ಸಿಗುತ್ತೆ ಮಾಹಿತಿ

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA | ವಂಚನೆ ಅನ್ನೋದು ಇದೀಗ ಆನ್​ಲೈನ್​ನ ವೈಫೈ ನೆಟ್​ವರ್ಕ್​ ಸಿಕ್ಕಷ್ಟೆ ಸುಲಭವಾಗಿ ಹೋಗಿದೆ. ಯಾರದ್ದೋ ಅಪರಿಚಿತ ವೈಫೈ ಕನೆಕ್ಟ್ ಮಾಡಿದರೂ ಡೇಟಾ ನೀರು ಕದ್ದ ಹಾಗೆ ಕಳ್ಳತನವಾಗಬಹುದು. ನಷ್ಟ ಅನಿಸುವುದಿಲ್ಲ, ಕಷ್ಟ ಆಗದೇ ಇರುವುದಿಲ್ಲ. ಅಂತಹ ಆನ್​ಲೈನ್​ ವಂಚನೆಗಳು ನಿಮ್ಮ ಮೊಬೈಲ್​ನಲ್ಲಿರುವ ಸಿಮ್​ಗಳಿಂದಲೇ ಆಗುವ ಸಾಧ್ಯತೆ ಇರುತ್ತದೆ. ಹೇಗೆ ಅಂದರೆ ನಿಮ್ಮ ಹೆಸರಿನಲ್ಲಿ ಯಾರೋ ಸಿಮ್ ಕಾರ್ಡ್​ ನೋಂದಣಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾದರೆ ನಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್​ ನೋಂದಣಿಯಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ ? 

READ : ಸೋಶಿಯಲ್ ಮೀಡಿಯಾದಲ್ಲಿ ಬಂದ ಮೆಸೇಜ್​ ನಂಬಿದ ವ್ಯಕ್ತಿ | ಜಸ್ಟ್ 15 ದಿನದಲ್ಲಿ ಎದುರಾಗಿತ್ತು 13 ಲಕ್ಷ ರೂಪಾಯಿ ಶಾಕ್

ಈ ಪ್ರಶ್ನೆಗೆ ಪೊಲೀಸ್ ಇಲಾಖೆಯೇ ಉತ್ತರ ನೀಡಿದ್ದು, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ನೋಂದಣಿಯಾಗಿದೆ ಎಂಬುದನ್ನು ತಿಳಿದುಕೊಳ್ಳುವ ಸರಳ ಮಾರ್ಗವನ್ನು ತಿಳಿಸುತ್ತಿದೆ. ಈ ಬಗ್ಗೆ ವ್ಯಾಪಕವಾಗಿ ಪ್ರಚಾರವನ್ನು ಪೊಲೀಸ್ ಇಲಾಖೆ ಮಾಡಿಕೊಳ್ಳುತ್ತಿದೆ. 

ಸದ್ಯ ಸೈಬರ್​ ಕ್ರೈಂ ಸಿಇಡಿ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಈ ಬಗ್ಗೆ ವಿಶೇಷವಾಗಿ ಮಾಹಿತಿ ನೀಡಲಾಗುತ್ತಿದ್ದು, ಅಲ್ಲಿ ಒಂದು ವೆಬ್​ಸೈಟ್ ಲಿಂಕ್ ನೀಡಲಾಗಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಪ್ರತ್ಯೇಕ ಪೇಜ್​ವೊಂದು ಓಪನ್ ಆಗುತ್ತದೆ. ಅದರಲ್ಲಿ ನಮೂದಿಸಿದಂತೆ ಮೊಬೈಲ್ ನಂಬರ್​, ಕ್ಯಾಪಚಾ ಹಾಗೂ ಒಟಿಪಿ ನೀಡಿದರೆ ನಿಮಗೆ ಅಗತ್ಯವಿರುವ ಮಾಹಿತಿ ಲಭ್ಯವಾಗುತ್ತದೆ. ಅದರ ಲಿಂಕ್ ಇಲ್ಲಿದೆ ನೋಡಿ https://tafcop.sancharsaathi.gov.in