ಅಡಿಕೆ ಖೇಣಿ ಮುಗಿಸಿಕೊಂಡು ಬರುತ್ತಿದ್ದಾಗ ಪಿಕಪ್ ವಾಹನ ಪಲ್ಟಿ! ಮೂವರ ದುರ್ಮರಣ!

ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಚಿನ್ನಿಕಟ್ಟೆ ಜೋಗದ ಬಳಿ ಘಟನೆ ನಡೆದಿದ್ದು, ಮೃತರು ಭದ್ರಾವತಿಯವರು, ಶಿಕಾರಿಪುರಕ್ಕೆ ಹೋಗಿ ವಾಪಸ್ ಬರುತ್ತಿದ್ದರು

ಅಡಿಕೆ ಖೇಣಿ ಮುಗಿಸಿಕೊಂಡು ಬರುತ್ತಿದ್ದಾಗ ಪಿಕಪ್ ವಾಹನ ಪಲ್ಟಿ! ಮೂವರ ದುರ್ಮರಣ!
pick-up vehicle overturned while returning from the arecanut kheni! Three killed!

SHIVAMOGGA  |  Jan 15, 2024  |  ಸಂಕ್ರಾಂತಿ ಹಬ್ಬದ ಹಿಂದಿನ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ  ಭದ್ರಾವತಿ  ತಾಲ್ಲೂಕಿನ ಮೂವರು ಸಾವನ್ನಪ್ಪಿದ್ದಾರೆ. ಅಡಿಕೆ ಸಾಗಿಸ್ತಿದ್ದ ಮಹೀಂದ್ರಾ ಬೊಲೆರೋ ಪಿಕಪ್​ ವಾಹನ ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ. 

ಚಿನ್ನಿಕಟ್ಟೆ ಜೋಗದ ಬಳಿ ಘಟನೆ

ಭದ್ರಾವತಿ ತಾಲೂಕಿನ ಚಂದನಕೆರೆಯ ಮಂಜುನಾಥ (40), ನಾಗರಾಜ್ (42), ಗೌತಮ್ (19) ಮೃತ ದುರ್ದೈವಿಗಳಾಗಿದ್ದಾರೆ. ಇವರು ಚಂದನಕರೆಯಿಂದ ಶಿಕಾರಿಪುರ ತಾಲೂಕು ಅರಿಶಿಣಗೆರೆಗೆ ತೆರಳಿದ್ರು. ಅಲ್ಲಿನ ತೋಟವೊಂದರಲ್ಲಿ  ಅಡಕೆ ಕೊಯ್ಲು ಮುಗಿಸಿಕೊಂಡ ವಾಪಸ್ ಬರುವಾಗ ಘಟನೆ ಸಂಭವಿಸಿದೆ. 

ಸವಳಂಗ ಕಡೆಯಿಂದ ಬರುತ್ತಿದ್ರು

ಸವಳಂಗ ಮಾರ್ಗವಾಗಿ ಚಂದನಕೆರೆಗೆ ಬರುತ್ತಿದ್ದಾಗ ಚಿನ್ನಿಕಟ್ಟೆ ಜೋಗದ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ  ಸುರೇಶ್, ಗಣೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಲ್ಟಿಯಾದ ರಭಸಕ್ಕೆ ಬೊಲೆರೋ ಪಿಕಪ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.