ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ಕುರಿಗೂಟ ಕಡಿದಿದ್ದಕ್ಕೆ ಹಲ್ಲೆ ಕೇಸ್ ! ಎಸ್​ಪಿ ಮಿಥುನ್​ಕುಮಾರ್ ಸ್ಟೇಟ್ಮೆಂಟ್!

Holehonnur police station assault case SP Mithun Kumar's statement

ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ಕುರಿಗೂಟ ಕಡಿದಿದ್ದಕ್ಕೆ ಹಲ್ಲೆ ಕೇಸ್ ! ಎಸ್​ಪಿ ಮಿಥುನ್​ಕುಮಾರ್ ಸ್ಟೇಟ್ಮೆಂಟ್!
Holehonnur police station assault case SP Mithun Kumar's statement

Shivamogga | Feb 5, 2024 |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್ಸ್​ನಲ್ಲಿ ನಿನ್ನೆ ನಡೆದ ಕುರಿಗೂಟ ಕಡಿದಿದ್ದಕ್ಕೆ ಮಸೀದಿ ಬಳಿ ಕರೆದೊಯ್ದು ಹಲ್ಲೆ ಮಾಡಿದ ಪ್ರಕರಣ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ವಿಡಿಯೋ ಹೇಳಿಕೆ ನೀಡಿದ್ದಾರೆ. 

ಮಾಧ್ಯಮಗಳ ವಾಟ್ಸ್ಯಾಪ್​ ಗ್ರೂಪ್​ಗೆ ವಿಡಿಯೋ ಹೇಳಿಕೆಯನ್ನು ಎಸ್​ಪಿ ಮಿಥುನ್ ಕುಮಾರ್ ರವಾನಿಸಿದ್ದಾರೆ. ಜಂಬರಘಟ್ಟ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕುರಿಕಟ್ಟಲು ಗೂಟಕ್ಕಾಗಿ ರವಿ ಎಂಬ ವ್ಯಕ್ತಿ ಮರ ಕಡಿಯಲು ಹೋಗಿದ್ದ ವೇಳೆ, ಅಲ್ಲಿ ವಿರೋಧ ವ್ಯಕ್ತವಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ನೂಕಾಟ ನಡೆದಿತ್ತು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ಕೂಡ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.