ಮರ ಕಡಿದಿದ್ದಕ್ಕೆ ಮಸೀದಿ ಬಳಿ ಕಟ್ಟಿಹಾಕಿ ಹಲ್ಲೆ! ಸಿಟ್ಟಿಗೆದ್ದ ಗ್ರಾಮಸ್ಥರು! ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ನಲ್ಲಿ ನಡೆದಿದ್ದೇನು?

A young man was attacked by members of a different community for cutting down a tree! Angry villagers! What happened at Holehonur Police Station?Jambar Gatte

ಮರ ಕಡಿದಿದ್ದಕ್ಕೆ ಮಸೀದಿ ಬಳಿ ಕಟ್ಟಿಹಾಕಿ ಹಲ್ಲೆ! ಸಿಟ್ಟಿಗೆದ್ದ ಗ್ರಾಮಸ್ಥರು! ಹೊಳೆಹೊನ್ನೂರು ಪೊಲೀಸ್ ಸ್ಟೇಷನ್​ ನಲ್ಲಿ ನಡೆದಿದ್ದೇನು?
What happened at Holehonur Police Station limits Jambar Gatte

Shivamogga | Feb 5, 2024 |  ಶಿವಮೊಗ್ಗದ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಎದುರು ನಿನ್ನೆ ರಾತ್ರಿ ನೂರಾರು ಮಂದಿ ಜಮಾಯಿಸಿ ಕೆಲವರನ್ನ ಅರೆಸ್ಟ್ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಕೆಲವು ಹೊತ್ತು ಸ್ಟೇಷನ್​ ಆವರಣದಲ್ಲಿಯೇ ಉದ್ವಿಗ್ನ ವಾತಾವರಣವೂ ನಿರ್ಮಾಣವಾಗಿತ್ತು. ಪೊಲೀಸರು ಗೊಂದಲ ನಿವಾರಣೆ ಮಾಡುವುದಕ್ಕೆ ಪ್ರಯತ್ನಿಸಿದರಾದರೂ ಜನರ ಒತ್ತಾಯವೇ ಸ್ಥಳದಲ್ಲಿ ನಿರ್ಣಾಯಕವಾಗಿತ್ತು. ಇಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಎಂಬುದರ ವಿವರಣೆಯನ್ನು ನೋಡುವುದಾದರೆ. 

ಹೊಳೆಹೊನ್ನೂರು  ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನ ಜಂಬರಘಟ್ಟದಲ್ಲಿ ಕೆಲ ಯುವಕರು ಖಬರಸ್ಥಾನದಲ್ಲಿದ್ದ ಮರಗಳನ್ನ ಕಡಿದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆ ಯುವಕರನ್ನ ಮಸೀದಿಯಲ್ಲಿ ಕೂಡಿಟ್ಟುಕೊಂಡು ಅವರಿಗೆ ಟೈಲ್ಸ್​ನಿಂದ ಹೊಡೆದ ಬಗ್ಗೆ ದೂರಲಾಗಿದೆ. ಈ ವೇಳೆ ವಿಚಾರ ತಿಳಿದು ಯುವಕರನ್ನ ಬಿಡಿಸಿಕೊಂಡು ಬರಲು ತೆರಳಿದ್ದವರ ಜೊತೆಗೂ ಗಲಾಟೆ ಮಾಡಿ ಹಲ್ಲೆ ಮಾಡಲಾಗಿದೆ.

ಊರಿನವರು ಹೇಳುವ ಪ್ರಕಾರ, ಅನ್ಯಕೋಮಿನ ಕೆಲವರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮಸೀದಿ ಬಳಿ ಕೂಡಿಟ್ಟು ಟೈಲ್ಸ್​​ ನಿಂದ ಹಲ್ಲೆ ಮಾಡಿದ್ದಾರೆ. ಅವರನ್ನ ಬಿಡಿಸಲು ತೆರಳಿದವರ ಮೇಲೂ ಹಲ್ಲೆ ಮಾಡಿದ್ದಾರೆ. ಆನಂತರ ಊರಿನಿಂದ ಬಂದ ಹೆಚ್ಚುವರಿ ಮಂದಿ ಹಲ್ಲೆಗೊಳಗಾದವರನ್ನ ಹೊಳೆಹೊನ್ನೂರು ಸಮುದಾಯ ಭವನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. 

ಇನ್ನೂ ಈ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಸಿಟ್ಟಿಗೆದ್ದು ಊರಿನ ಜನರೆಲ್ಲರೂ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಆವರಣದಲ್ಲಿ ಜಮಾಯಿಸಿ ಪ್ರತಿಭಟಿಸಿದರು.ಪ್ರಕರಣವೂ ಗಂಭೀರವಾದ ಬಳಿಕ ಎಚ್ಚೆತ್ತ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಆದರೆ ಅಷ್ಟರಲ್ಲಿ ಇಡೀ ಊರಿನ ಜನರು ಅಲ್ಲಿ ಜಮಾಯಿಸಿದ್ದು ಪೊಲೀಸರು ವಿಳಂಬ ಮಾಡಿದ್ದಕ್ಕೆ ಆಕ್ರೋಶ ಹೊರಹಾಕಿತ್ತು.  

ಸದ್ಯ ಪ್ರಕರಣ ಗಂಭೀರವಾಗಿದ್ದು, ವ್ಯಕ್ತಿಯ ಅನಧಿಕೃತ ಬಂಧನ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಸ್ಥಳದಲ್ಲಿ ಸನ್ನಿವೇಶ ಗಂಭೀರವವಾಗಿದೆ. ಇನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿದೆ.