ವಿಜಯಪುರಕ್ಕೆ ಹೋಗಿ ಬರುತ್ತೇನೆ ಎಂದು ಹೊರಟ ವಿದ್ಯಾನಗರದ ಮಹಿಳೆ MISSING | ಪೊಲೀಸ್‌ ಪ್ರಕಟಣೆ

woman named Mamata Sridhar went missing from her home in Vidyanagar, Kote police station.

ವಿಜಯಪುರಕ್ಕೆ ಹೋಗಿ ಬರುತ್ತೇನೆ ಎಂದು ಹೊರಟ ವಿದ್ಯಾನಗರದ ಮಹಿಳೆ MISSING | ಪೊಲೀಸ್‌ ಪ್ರಕಟಣೆ
Vidyanagar, Kote police station, woman missing

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆ 

ಶಿವಮೊಗ್ಗದಿಂದ ವಿಜಯಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಅವರ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ತಿಳಿಸುವಂತೆ ಪ್ರಕಟಣೆ ನೀಡಲಾಗಿದೆ. ಅದರ ವಿವರ ಹೀಗಿದೆ. 

ಕಾಣೆಯಾದವರ ಮಾಹಿತಿಗಾಗಿ ಮನವಿ

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ 4ನೇ ಕ್ರಾಸ್ ವಾಸಿ ಟೈಲರ್ ಕೆಲಸ ಮಾಡಿಕೊಂಡಿದ್ದ ಮಮತಾ ಶ್ರೀಧರ್ ಎಂಬ 48 ವರ್ಷದ ಮಹಿಳೆ ತನ್ನ ಮನೆಯಿಂದ ಜೂನ್ 02 ರಂದು ಬಿಜಾಪುರಕ್ಕೆ ಹೋಗುತ್ತಿರುವುದಾಗಿ ತಂಗಿಯೊಂದಿಗೆ ಹೇಳಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆಯ ಫೋನ್ ಸ್ವಿಚ್‍ಆಪ್ ಆಗಿರುತ್ತದೆ.

ಈಕೆಯ ಚಹರೆ 5.02 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.  

A 48-year-old woman named Mamata Sridhar went missing from her home in Vidyanagar, Kote police station.