ಕಾಂಗ್ರೆಸ್​ ಸರ್ಕಾರದ ವಿರುದ್ಧ ಸಿಡಿದ ಕೆ.ಎಸ್​.ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಶ್ವ ಹಿಂದೂ ಪರಿಷತ್! ಬ್ರಾಹ್ಮಣರು ಯಹೂದಿಗಳಾಗಬೇಕು ಎಂದ್ರು ರೋಹಿತ್ ಚಕ್ರತೀರ್ಥ TODAY @ Short News

KS Eshwarappa, MP B Y Raghavendra, Vishwa Hindu Parishad criticise Congress government Brahmins should become Jews, says Rohit Chakratirtha Short News

ಕಾಂಗ್ರೆಸ್​ ಸರ್ಕಾರದ ವಿರುದ್ಧ ಸಿಡಿದ ಕೆ.ಎಸ್​.ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಶ್ವ ಹಿಂದೂ ಪರಿಷತ್! ಬ್ರಾಹ್ಮಣರು ಯಹೂದಿಗಳಾಗಬೇಕು ಎಂದ್ರು ರೋಹಿತ್ ಚಕ್ರತೀರ್ಥ  TODAY @  Short News

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS

ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಬಿ.ವೈ.ರಾಘವೇಂದ್ರ , ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಇನ್ನೊಂದೆಡೆ ಶಿವಮೊಗ್ಗ ಶಾಸಕರಿಗೆ ಕೈಗೊಂಡ ಸನ್ಮಾನ ಸಮಾರಂಭದಲ್ಲಿ  ರೋಹಿತ ಚಕ್ರತೀರ್ಥ ಮಾತನಾಡಿದ್ದಾರೆ. ಇನ್ನೊಂದೆ ವಿಶ್ವ ಹಿಂದೂ ಪರಿಷತ್​ ಸುದ್ದಿಗೋಷ್ಟಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇವೆಲ್ಲ ಸುದ್ದಿಗಳನ್ನ ಸಂಕ್ಷಿಪ್ತ ವಿವರ ಓದಿ

ಸರ್ಕಾರಕ್ಕೆ ಜನರ ಶಾಪ ತಟ್ಟುತ್ತೆ

ಬಡವರಿಗೆ ಪ್ರ ತಿತಿಂಗಳು 10 ಕೆ ಜಿ ಅಕ್ಕಿ ಕೊಡುವುದಾಗಿ ಹೇಳಿ ಈಗ  ಪ್ರಧಾನಿ  ನರೇಂದ್ರ ಮೋದಿ  ಯೋಜನೆಗೆ ಅಡ್ಡ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸ್ತಿದೆ. ಯೋಜನೆ ಘೋಷಣೆ ಮಾಡುವ ಮೊದಲು ಕೇಂದ್ರ ಸರ್ಕಾರವನ್ನು ಕೇಳಿ ಘೋಷಣೆ ಮಾಡಿದ್ರಾ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಕಾಂಗ್ರೆಸ್ ಮುಖಂಡರನ್ನ ಪ್ರಶ್ನಿಸಿದ್ದಾರೆ. ಅಲ್ಲದೆ  ಕಾಂಗ್ರೆಸ್​ನಿಂದ ಬಡವರಿಗೆ ಮೋಸ ಆಗುತ್ತಿದೆ, ಅವರ ಶಾಪ ತಟ್ಟದೆ ಇರೋದಿಲ್ಲ ಎಂದಿದ್ಧಾರೆ. 

ಸುಳ್ಳಿನ ಗ್ಯಾರಂಟಿ

ಗೃಹಲಕ್ಷ್ಮೀ ಯೋಜನೆಯ ಅರ್ಜಿಯೇ ಇನ್ನೂ ಹೊರಬಂದಿಲ್ಲ. ನಿರುದ್ಯೋಗ ಗ್ಯಾರಂಟಿಯನ್ನ ಈ ವರ್ಷ ಪಾಸಾದವರಿಗೆ ಮಾಡಿದ್ದಾರೆ. ವಿದ್ಯುತ್ ಪ್ರೀ ಅಂತಾ ದರ ಏರಿಸಿ ಕೈಗಾರಿಕೆಗಳಿಗೆ ಪೆಟ್ಟುಕೊಟ್ಟಿದ್ದಾರೆ. ಇನ್ನೊಂದೆಡೆ ಬಿಜೆಪಿ ದರ ಏರಿಸಿದ ಎಂದು ಪಲಾಯನ ಮಾಡ್ತಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿ, ಆಟೋ, ಶಾಸಗಿ ಬಸ್ ಇತರೇ ಖಾಸಗಿ ಸಾರಿಗೆಗಳ ಬಗ್ಗೆ ಕಾಳಜಿವಹಿಸಿಲ್ಲ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. 

ಮತಾಂತರ ಕಾಯ್ದೆ ವಾಪಸ್ ಪಡೆಯಿದಿದ್ದರೇ ಹೋರಾಟ

ಮತಾಂತರ ನಿಷೇಧ ಕಾಯ್ದೆ ರದ್ದು ಮಾಡ್ತಾರೆ ಅಂತಾ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಡಿಕೆ ಶಿವಕುಮಾರ್​ರವರು ತಮ್ಮ ಮನೆಯ ಮಕ್ಕಳು ಮತಾಂತರ ಆದರೆ ಸುಮ್ಮಿರುತ್ತಾರಾ? ಮೋಸದಿಂದ ಮತಾಂತರ ಮಾಡಿ ಅನ್ಯಧರ್ಮಿಯರನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನ ಕೇರಳ ಸ್ಟೋರಿ ಚಿತ್ರದಲ್ಲಿ ತೋರಿಸಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಲು ಹೊರಟಿದೆ. ಇದರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ಧಾರೆ. 

ವಿಶ್ವ ಹಿಂದೂ ಪರಿಷತ್ ಆಕ್ರೋಶ

ಮಂತಾತರ ನಿಷೇಧ ಕಾಯ್ದೆ ರದ್ದು ಮಾಡುವ  ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್​ ವಿರೋಧಿಸಿದೆ. ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ   ಜಿಲ್ಲಾಧ್ಯಕ್ಷ  ಜೆ.ಆರ್.ವಾಸುದೇವ್ ರವರು ,  ಹಿಂದೂಗಳೊಂದಿಗೆ ಅನ್ಯ ಧರ್ಮೀಯರು ಬದುಕುತ್ತಿದ್ದಾರೆ. ಅವರ ಧರ್ಮ ಆಚರಣೆಗೆ ಯಾರ ಆಕ್ಷೇಪಣೆಯಿಲ್ಲ. ಆದರೆ ಆಮಿಷ ಒಡ್ಡಿ ಮತಾಂತರ ನಡೆಸುವುದನ್ನ ಖಂಡಿಸುತ್ತೇವೆ. ಆದರೆ ಈ ನಿಟ್ಟಿನಲ್ಲಿ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆಯನ್ನ ವಾಪಾಸ್  ಪಡೆಯಲು ಕಾಂಗ್ರೆಸ್​​ ಮುಂದಾಗಿದೆ. ಅದರಿಂದ ಮತ್ತೆ ಮತಾಂತರದ ದಬ್ಬಾಳಿಕೆ ನಡೆಯಲಿದೆ. ಹೀಗಾಗಿ  ಕಾಯ್ದೆ ರದ್ದು ಮಾಡಿದರೆ ಹೋರಾಟ ಅನಿವಾರ್ಯ ಎಂದಿದ್ದಾರೆ.  

ಯಹೂದಿಗಳಂತೆ ಹೋರಾಡ ಬೇಕು ಬ್ರಾಹ್ಮಣರು

ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಿನ್ನೆ ನಡೆದ ಶಾಸಕ ಚೆನ್ನಬಸಪ್ಪರವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್ ಚಕ್ರತೀರ್ಥ ಯಹೂದಿಗಳಿಗೆ 2500 ವರ್ಷಗಳ ವರೆಗೆ ನೆಲೆ ಸಿಕ್ಕಿರಲಿಲ್ಲ. ಅವರು ವಿಶ್ವದಾದ್ಯಂತ ಶೇ.5 ರಷ್ಟು ಇದ್ದಾರೆ. ಜಗತ್ತೆ ಮೆಚ್ಚುವಂತೆ ಅವರು ಬದುಕುತ್ತಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಯಹೂದಿಗಳು ಸಿಗುತ್ತಾರೆ.  ಬ್ರಾಹ್ಮಣರು ಇದನ್ನ ಅನುಸರಿಸುವ ಅನಿವಾರ್ಯತೆ ಇದೆ ಎಂದಿದ್ದಾರೆ. ಬ್ರಾಹ್ಮಣರು ಆರ್ಥಿಕವಾಗಿ ಪ್ರಬಲರಾಗಬೇಕು ಎಂದರ ಅವರು  ಬ್ರಾಹ್ಮಣರು ತಲೆತಗ್ಗಿಸಬೇಕಿಲ್ಲ ಎಂದರು 

ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ ಸರ್ಕಾರ

ಕಾಂಗ್ರೆಸ್‌ ಸರಕಾರ ಗ್ಯಾರೆಂಟಿ ನೆಪದಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕಿತ್ತುಕೊಳ್ಳುವ ಕಾರ್ಯವನ್ನು ಮಾಡುತ್ತಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಆಪಾದಿಸಿದರು. ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಸಂದರ್ಭದಲ್ಲಿ ಅವರು ಶುಕ್ರವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.   ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ಬೇಸರವಿಲ್ಲ, ಜನರಿಗೆ ಅವೆಲ್ಲವೂ ತಲುಪಬೇಕು. ಆದರೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕೊಡುವಂತದ್ದು ಸರಿ ಅಲ್ಲ. ವಿದ್ಯುತ್‌ ಯುನಿಟ್‌ ದರವನ್ನು ಹೆಚ್ಚಳ ಮಾಡಿರುವುದಲ್ಲದೇ, 200ರ ಬದಲು 201 ಯುನಿಟ್‌ ಬಳಕೆ ಮಾಡಿದರೂ ಪೂರ್ಣ ದರವನ್ನು ಕಟ್ಟಿಸಿಕೊಂಡು ಸಬ್ಸಿಡಿಯನ್ನು ಕಿತ್ತುಕೊಳ್ಳುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆಪಾದಿಸಿದರು.