KARNATAKA NEWS/ ONLINE / Malenadu today/ Oct 10, 2023 SHIVAMOGGA NEWS
ಶ್ರಾವಣ ಶನಿವಾರದ ಪೂಜೆಗೆಂದು ಹೋಗಿ ವಾಪಸ್ ಮನೆಗೆ ಬರುವ ಹೊತ್ತಿಗೆ ಮನೆಯಲ್ಲಿದ್ದ ಸಾಮಗ್ರಿಗಳು ಕಳುವಾದ ಘಟನೆ ಶಿವಮೊಗ್ಗದ ಮತ್ತೂರಿನಲ್ಲಿ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ನಲ್ಲಿ ದೂರು ಕೂಡ ದಾಖಲಾಗಿದೆ.
ಭದ್ರಾವತಿಯಲ್ಲಿರುವ ಮಾವನ ಮನೆಗೆ ಇಲ್ಲಿನ ನಿವಾಸಿ ಕುಟುಂಬವೊಂದು ತೆರಳಿತ್ತು. ಶ್ರಾವಣ ಶನಿವಾರದ ಪೂಜೆಗಾಗಿ ತೆರಳಿದ್ದ ಕುಟುಂಬ ಮನೆಗೆ ಭೀಗ ಹಾಕಿ ಭದ್ರ ಮಾಡಿ ಹೋಗಿತ್ತು. ಈ ಮಧ್ಯೆ ಕಳೆದ ಎಂಟರಂದು ದೂರುದಾರರ ಪಕ್ಕದ ಮನೆಯಲ್ಲಿರುವ ಸಂಬಂಧಿಕರು ಮನೆಯ ಕಡೆ ನೋಡುವಾಗ ಮನೆಯ ಬಾಗಿಲು ತೆಗೆದಿರುವುದನ್ನ ಗಮನಿಸಿದ್ದಾರೆ. ಒಳಹೊಕ್ಕು ನೋಡಿದಾಗ ಮನೆಯಲಿಟ್ಟಿದ್ದ ಬಿರುವಿನಲ್ಲಿನ ಬಟ್ಟೆ ಬರೆಗಳಲ್ಲವೂ ಚಲಾಪಿಲಿಯಾಗಿ ಬಿದ್ದಿದ್ದವು. ಇದನ್ನ ನೋಡಿ ಗಾಬರಿಯಲ್ಲಿ ಭದ್ರಾವತಿಗೆ ಹೋಗಿದ್ದ ಮನೆಯ ಮಾಲೀಕರಿಗೆ ಕರೆ ಮಾಡಿದ್ದಾರೆ.
ವಿಷಯ ತಿಳಿದು ಮನೆಗೆ ಬಂದು ನೋಡಿದರೆ, ಬೀರುವಿನಲ್ಲಿದ್ದ 1) ಸುಮಾರು 08ಗ್ರಾಂನ ಒಂದುಜೊತೆ ಬಂಗಾರದ ಓಲೆ ಜುಮುಕಿ ಅಂದಾಜು ಬೆಲೆ 40,000/- 2) ಸುಮಾರು 5 ಗ್ರಾಂನ ಬಂಗಾರದ ಒಂದು ಕುತ್ತಿಗೆಯ ಸರ ಅಂದಾಜು ಬೆಲೆ 25,000/- 3) ಸುಮಾರು 03ಗ್ರಾಂ ತೂಕದ ಒಂದು ಬಂಗಾರದ ಉಂಗುರ ಅಂದಾಜು ಮೌಲ: 15,000/- 4)ಸುಮಾರು 03ಗ್ರಾಂ ತೂಕದ ಬಂಗಾರದ 2ಜೊತೆ ಮಕ್ಕಳ ಓಲೆ 15,000/- 5)ಸುಮಾರು 3ಗ್ರಾಂ ತೂಕದ ಬಂಗಾರದ ತಾಳಿ ಅಂದಾಜು ಮೌಲ, 15,000/- 6)ಸುಮಾರು 7ಗ್ರಾಂ ತೂಕದ ಬಂಗಾರದ ಹಾನ್ ಅಂದಾಜು ಮೌಲ್ಯ 35,000/- ಹೀಗೆ ಒಟ್ಟು 29 ಗ್ರಾಂ ಬಂಗಾರ ಕಳ್ಳತನವಾಗಿತ್ತು. ಈ ಸಂಬಂಧ ಸದ್ಯ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು
