ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹಲ್ಲೆ ಮಾಡ್ತಿರುವುದನ್ನ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್!

Man attacked by miscreants for questioning attack on petrol pump staff

ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹಲ್ಲೆ ಮಾಡ್ತಿರುವುದನ್ನ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್!

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS

ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮೂವತ್ತನೇ ತಾರೀಖು ನಡೆದ ಘಟನೆಯಲ್ಲಿ ಪೆಟ್ರೋಲ್ ಬಂಕ್ ವೊಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವುದನ್ನ ತಪ್ಪಿಸಲು ಹೋದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ತುಂಗಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

ನಡೆದಿದ್ದೇನು? 

ಗೋಪಾಳದಲ್ಲಿರುವ ಪೆಟ್ರೋಲ್​ ಬಂಕ್​ವೊಂದರ ಸಮೀಪ ಇರುವ ಜಿಮ್​ವೊಂದರಲ್ಲಿ ದೂರುದಾರ ಯುವಕ ಕೋಚ್ ಆಗಿ ಕೆಲಸ ಮಾಡುತ್ತಿದ್ಧಾನೆ. ಘಟನೆ ದಿನ ಕೆಲಸ ಮುಗಿಸಿ ಮನೆಗೆ ಹೊರಟ ಸಂದರ್ಭದಲ್ಲಿ ಪೆಟ್ರೋಲ್​ ಬಂಕ್​ನಲ್ಲಿರುವ ಸಿಬ್ಬಂದಿಗೆ ಕೆಲವರು ಹಲ್ಲೆ ಮಾಡುತ್ತಿರುವುದನ್ನ ನೋಡಿದ್ದಾರೆ. ತಕ್ಷಣವೇ ಅಲ್ಲಿಗೆ ಹೋಗಿ ಯಾಕೆ ಹಲ್ಲೆ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಅಲ್ಲಿ ದಾಂಧಲೆ ನಡೆಸ್ತಿದ್ದ ದುಷ್ಕರ್ಮಿಗಳ ಗುಂಪು, ದೂರುದಾರ ಯುವಕನ ಮೇಲೂ ಹಲ್ಲೆ ಮಾಡಿ, ಕೈಯಲ್ಲಿದ್ದ ಮಾರಕಾಸ್ತ್ರದಿಂದ ತಲೆಗೆ ಹೊಡೆದಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಘಟನೆ ಸಂಬಂಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ಧಾರೆ. 

 


ಶುಂಠಿ ಕಳ್ಳರಿದ್ದಾರೆ ಹುಷಾರ್! ಹೊಲಕ್ಕೆ ಕಾಲಿಟ್ಟಾಗಲೇ ಸಿಕ್ಕಿಬಿದ್ದ ಕಳ್ಳರು ಹಲ್ಲೆಗೆ ಮುಂದಾಗಿ ಎಸ್ಕೇಪ್​! ಕಳ್ತನದಲ್ಲಿಯು ನಡೆಯಿತಾ ರಾಜಿ!? ಏನಿದು ಪ್ರಕರಣ

 

ಫಸಲು ಬರುವುದಕ್ಕೆ ಶುರುಮಾಡ್ತಿದ್ದಾಗೆ, ಅದನ್ನ ಕಾವಲು ಕಾಯೋದೇ ಬೆಳೆಗಾರರಿಗೆ ದೊಡ್ಡ ಕೆಲಸ, ಅದರಲ್ಲಿ ಮಲೆನಾಡಲ್ಲಿ ಶುಂಠಿ ಕಳುವು ಸಾಮಾನ್ಯ ವಿಚಾರವೇನಲ್ಲ. ಶುಂಠಿ ಹಾಗೂ ಶುಂಠಿಯ ದುಡ್ಡಿಗಾಗಿ ತಲೆಗಳಲೇ ಇಲ್ಲಿ ಉರುಳಿದ ಘಟನೆಗಳು ಪೊಲೀಸ್ ಕ್ರೈಂ ಲಿಸ್ಟ್​ನಲ್ಲಿ ಇವೆ. ಇದಕ್ಕೆ ಪೂರಕವಾಗಿ ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. 

 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ  ತಾಲ್ಲೂಕು ಮಾಸೂರು ಸಮೀಪ ನೆಲವಾಗಿಲು ಗ್ರಾಮದ ನಿವಾಸಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಬರೋಬ್ಬರಿ ಶುಂಠಿಯನ್ನು ಕಳ್ಳತನಮಾಡಲಾಗಿದೆ. ಅಲ್ಲದೆ ಕಳ್ಳತನವಾಗುತ್ತಿರುವುದನ್ನ ತಪ್ಪಿಸಲು ಬಂದ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಆರೋಪಿಗಳು ಎಸ್ಕೇಪ್​ ಆಗಿದ್ದಾರೆ. ಈ ಸಂಬಂಧ ತಡವಾಗಿ ಕಂಪ್ಲೆಂಟ್ ದಾಖಲಾಗಿದೆ. ಬೀರಪ್ಪ ಎಂಬವರು ದೂರು ದಾಖಲಿಸಿದ್ದು, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಠೇಷನ್​ನಲ್ಲಿ IPC 1860 (U/s-379,511,324,34) ಅಡಿಯಲ್ಲಿ ಕೇಸ್ ದಾಖಲಾಗಿದೆ. ಒಟ್ಟಾರೆ ಮೂರು ಲಕ್ಷ ರೂಪಾಯಿ ಮೌಲ್ಯದ ಶುಂಠಿ ಕಳ್ಳತನವಾಗಿದೆ ಎಂದು ದೂರಲಾಗಿದೆ. 

 

ಘಟನೆ ನಡೆದಿದ್ದೇಗೆ?   

ಬೀರಪ್ಪ ಹಾಗೂ ಅವರ ತಂದೆ 1 ಎಕರೆ 19 ಗುಂಟೆ ಜಮೀನನಲ್ಲಿ ಶುಂಠಿ ಬೆಳೆದಿದ್ದಾರೆ.  ಕಳೆದ ಮೇ ತಿಂಗಳಲ್ಲಿ, ಎರಡು ಬಾರಿ ಶುಂಠಿ ಕಳ್ಳತನವಾಗಿದೆ.  15 ಕಿಂಟಾಲ್ ಗಿಂತಲೂ ಹೆಚ್ಚಿಗೆ ಕಳುವಾಗಿತ್ತು. ಈ ಮಧ್ಯೆ ಜಮೀನಿಗೆ ರಾತ್ರಿ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಕಳ್ಳರು ಶುಂಠಿ ಕದಿಯುವುದು ದೂರುದಾರರ ತಂದೆಗೆ ಗೊತ್ತಾಗಿದೆ ಹಾಗಾಗಿ ಅಲ್ಲಿಯೇ ಮಲಗಿದ್ದಾರೆ. ಈ ಮಧ್ಯೆ  ತಡರಾತ್ರಿ , ನಾಲ್ವರು ಕಳ್ಳರು ಬಂದು ಶುಂಠಿ ಕದಿಯಲು ಆರಂಭಿಸಿದ್ದಾರೆ. ಇದನ್ನ ಗಮನಿಸಿದ ತಂದೆ ಮಗ ಕಳ್ಳರನ್ನ ಹಿಡಿಯಲು ಪ್ರಯತ್ನಿಸಿದ್ಧಾರೆ. ಆದರೆ ಕಳ್ಳರೇ ಈ ವೇಳೆ ಹಲ್ಲೆಗೆ ಮುಂದಾಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ಧಾರೆ. ಅವರು ಬಂದಿದ್ದ ಬೈಕ್​ಗಳು ಮಾತ್ರ ದೂರುದಾರರಿಗೆ ಸಿಕ್ಕಿದೆ. 

ಕಳ್ಳತನದಲ್ಲಿಯು ರಾಜಿ ಪಂಚಾಯ್ತಿ

ಈ ಮಧ್ಯೆ ಕಳ್ಳತನ ಪ್ರಕರಣದಲ್ಲಿಯು ರಾಜಿ ಮಾಡಲು ಕೆಲವರು ಪ್ರಯತ್ನಿಸಿದ್ದು, ಅದಕ್ಕೂ ಸಹ ದೂರುದಾರರು ಒಪ್ಪಿ ಸುಮ್ಮನಾಗಿದ್ದರು. ಆದರೆ ಕಳ್ಳರು ರಾಜಿಗೂ ಒಪ್ಪದ ಕಾರಣ , ಅವರ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ಎಫ್​ಐಆರ್ ಮಾಡಿದ್ಧಾರೆ.