ಪಕ್ಷೇತರ ಅಭ್ಯರ್ಥಿ ಕೆಎಸ್‌ ಈ‍ಶ್ವರಪ್ಪನವರ ಚಿಹ್ನೆ ಯಾವುದು ಗೊತ್ತಾ?

Do you know the symbol of independent candidate KS Eshwarappa?

ಪಕ್ಷೇತರ ಅಭ್ಯರ್ಥಿ ಕೆಎಸ್‌ ಈ‍ಶ್ವರಪ್ಪನವರ ಚಿಹ್ನೆ ಯಾವುದು ಗೊತ್ತಾ?
KS Eshwarappa

SHIVAMOGGA | MALENADUTODAY NEWS | Apr 22, 2024  

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿರುವ ಕೆಎಸ್‌ ಈಶ್ವರಪ್ಪ ನವರಿಗೆ ಚಿಹ್ನೆ ಲ‍ಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಅವರಿಗೆ ಕಬ್ಬು ಹೊಂದಿರುವ ರೈತನ ಚಿಹ್ನೆ ಲ‍ಭ್ಯವಾಗಿದೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. 

ಇವತ್ತು ಸಂಜೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಕೆಎಸ್‌ ಈ‍ಶ್ವರಪ್ಪನವರು ತಮ್ಮ ಚಿಹ್ನೆಯ ಬಗ್ಗೆ ಈ ಹಿಂದೇ ವಿಶೇಷವಾಗಿ ಮಾತನಾಡಿದ್ದರು, ಪಕ್ಷೇತರರಿಗೆ ಸಮರ್ಪಕವಾದ ಚಿಹ್ನೆ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇನ್ನೂ ನಾಮಪತ್ರ ಸಲ್ಲಿಕೆಗೆ ಕೊನೆದಿನವಾದ ಇವತ್ತು ಸಹ ಈಶ್ವರಪ್ಪನವರು ತಮ್ಮ ನಾಮಪತ್ರ ಹಿಂಪಡೆಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದೆಲ್ಲವನ್ನು ಸುಳ್ಳಾಗಿಸಿದ ಕೆಎಸ್‌ ಈಶ್ವರಪ್ಪ, ತಮ್ಮ ಉಮೇದುವಾರಿಕೆಯನ್ನ ನಿಕ್ಕಿಗೊಳಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಅಂತಿಮವಾದ ಅಭ್ಯರ್ಥಿಗಳ ಲಿಸ್ಟ್‌ ಹೊರಬೀಳಲಿದ್ದು, ಅಭ್ಯರ್ಥಿಗಳ ಹೆಸರು ಅವರ ಚಿಹ್ನೆ ಯಾವುದು ಎಂದು ತಿಳಿಯಲಿದೆ.