ಆಗುಂಬೆ ಸುತ್ತಮುತ್ತ ಕಾಣಿಸಿಕೊಳ್ತಾ ಮತ್ತೆರಡು ಆನೆಗಳು! ಎಲ್ಲಿಂದ ಬಂದ್ವು ಗಜಪಡೆ!?
It is said that two wild animals have been seen around Agumbe, Thirthahalli Taluk, Shimoga Districtಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸುತ್ತಮುತ್ತ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ ಎನ್ನಲಾಗುತ್ತಿದೆ

KARNATAKA NEWS/ ONLINE / Malenadu today/ Sep 25, 2023 SHIVAMOGGA NEWS’
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸುತ್ತಮುತ್ತ ಕಳೆದ ಎರಡು ದಶಕಗಳಿಂದ ಸಲಗವೊಂದು ಓಡಾಡುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ಈ ಆನೆಯ ಜೊತೆ ಇನ್ನೆರೆಡು ಆನೆಗಳು ಈ ಭಾಗದಲ್ಲಿ ಸಂಚರಿಸತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳೀಯ ವರದಿಯ ಪ್ರಕಾರ, ಸೋಮೇಶ್ವರ ವನ್ಯಜೀವಿ ವಿಭಾಗದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ಹೆಬ್ರಿ ಭಾಗದ ಕೋಡ್ಲು ತೀರ್ಥದ ಆಸುಪಾಸಿನಲ್ಲಿ ಆನೆ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಈ ಆನೆಗಳು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ಕಡೆಯಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಆಗುಂಬೆ ಭಾಗದಲ್ಲಿರುವ ಕಾಡಾನೆಯು ಇಲ್ಲಿಯೆ ಮಲ್ಲಂದೂರು ಭಾಗದಲ್ಲಿ ಸುತ್ತಾಡುತ್ತಿದೆ.
ಅದರ ಬೆನ್ನಲ್ಲೆ ಇನ್ನೆರಡು ಕಾಡಾನೆಗಳು ಕಾಣಿಸಿಕೊಂಡಿರುವುದು ಕತೂಹಲ ಹಾಗೂ ಆತಂಕ ಎರಡನ್ನು ಸಹ ಮೂಡಿಸಿದೆ.
ಇನ್ನಷ್ಟು ಸುದ್ದಿಗಳು