ಯಶಸ್ವಿ ಚಂದ್ರಯಾನ-3 ಪ್ರಾಜೆಕ್ಟ್ ಮುಗಿಸಿ ತವರಿಗೆ ವಾಪಸ್ ಆದ ವಿಜ್ಞಾನಿಗೆ ಆತ್ಮೀಯ ಸ್ವಾಗತ

Chandrayaan-3: A warm welcome to scientist who returned home after successful Chandrayaan-3 mission ಯಶಸ್ವಿ ಚಂದ್ರಯಾನ-3 ಪ್ರಾಜೆಕ್ಟ್ ಮುಗಿಸಿ ತವರಿಗೆ ವಾಪಸ್ ಆದ ವಿಜ್ಞಾನಿಗೆ ಆತ್ಮೀಯ ಸ್ವಾಗತ

ಯಶಸ್ವಿ ಚಂದ್ರಯಾನ-3  ಪ್ರಾಜೆಕ್ಟ್ ಮುಗಿಸಿ ತವರಿಗೆ ವಾಪಸ್ ಆದ ವಿಜ್ಞಾನಿಗೆ ಆತ್ಮೀಯ ಸ್ವಾಗತ

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS 

ಇಸ್ರೋ ಕೈಗೊಂಡ ಚಂದ್ರಯಾನ-3 (chandrayana-3) ರಲ್ಲಿ ತಮ್ಮ ಸೇವೆ ಸಲ್ಲಿಸಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ  ಸುಬ್ರಹ್ಮಣ್ಯ ಉಡುಪರು ತಮ್ಮ ತವರಿಗೆ ವಾಸ್ ಆಗಿದ್ಧಾರೆ. ಅವರಿ ತವರಿನಲ್ಲಿ ಆತ್ಮೀಯ ಸ್ವಾಗತ ವ್ಯಕ್ತವಾಗಿದೆ. 

ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ದಿ.ಗೋವಿಂದರಾಜ ಉಡುಪರ ಪುತ್ರ ಸುಬ್ರಹ್ಮಣ್ಯ ಉಡುಪರು ನಮ್ಮ ಜಿಲ್ಲೆಯ ಹೆಮ್ಮೆಯ ಇಸ್ರೋ ತಂಡದ ವಿಜ್ಙಾನಿ. ತಮ್ಮ ವೃತ್ತಿ ಜೀವನದ ನಂತರವೂ ಇಸ್ರೋದ ಬೇಡಿಕೆಗೆ ಮನ್ನಣೆ ನೀಡಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಸುಬ್ರಹ್ಮಣ್ಯ ಉಡುಪರವರು. ಅವರು ನಿನ್ನೆ ತೀರ್ಥಹಳ್ಳಿಗೆ ವಾಪಸ್ ಆಗಿದ್ದರು, ಈ ವೇಳೆ  ಮಾಜಿ ಗೃಹ ಸಚಿವ ಆರಗ ಜ್ಙಾನೇಂದ್ರರವರು  ಸುಬ್ರಹ್ಮಣ್ಯ ಉಡುಪರನ್ನು ಭೇಟಿ ಮಾಡಿ ಅಭಿನಂದಿಸಿದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಆರಗ ಜ್ಙಾನೇಂದ್ರ ಚಂದ್ರಯಾನ -3 ಯೋಜನೆಯಲ್ಲಿ ಇಸ್ರೋನ ಸುಮಾರು 500ಕ್ಕೂ ಹೆಚ್ಚು ವಿಜ್ಙಾನಿಗಳು ಕೆಲಸ ಮಾಡಿದ್ದಾರೆ. ಅವರಲ್ಲಿ ನಮ್ಮ ಜಿಲ್ಲೆಯ ನಮ್ಮ ಊರಿನವರು ಇರುವುದು ನಮ್ಮ ಹೆಮ್ಮೆ‌ ಎಂದರು. ಇನ್ನೂ ಇದೇ ವೇಳೇ   ತೀರ್ಥಹಳ್ಳಿ ತಾಲೂಕಿನ  ಮತ್ತೊಬ್ಬ ವಿಜ್ಙಾನಿ ಕೋಣಂದೂರು ಲಿಂಗಪ್ಪನವರ ಪುತ್ರಿ ಶಿವಾನಿಯವರಿಗೆ ಅಭಿನಂದನೆ ಸಲ್ಲಿಸಿದರು.


ತುಂಗಾ ನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

ಶಿವಮೊಗ್ಗ ತುಂಗಾ ನಗರ ಪೊಲೀಸ್ ಸ್ಟೇಷನ್ (Tunga Nagar Police Station) ವ್ಯಾಪ್ತಿಯಲ್ಲಿ ಕೊಲೆಯೊಂದು ನಡೆದಿದೆ. ಇಲ್ಲಿನ ಟಿಪ್ಪು ನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. 

ಕೊಲೆಯಾದ ಘಟನೆ ಬಗ್ಗೆ ಇಂದು ಬೆಳಗ್ಗೆ ವರದಿಯಾಗಿದೆ. ಕೊಲೆಯಾದ ವ್ಯಕ್ತಿಗೆ ಸುಮಾರು 50 ವರ್ಷ ಆಗಿದ್ದು, ಅವರ ಗುರುತು ಪರಿಚಯ ಇನ್ನಷ್ಟೆ ಗೊತ್ತಾಗಬೇಕಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದ್ದು, ವ್ಯಕ್ತಿಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದಂತೆ ಕಾಣುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟಿದ್ದು, ಪರಿಶೀಲನೆ ನಡೆಸಿ ಮಹಜರ್ ಮಾಡುತ್ತಿದ್ಧಾರೆ. 


ಇನ್ನಷ್ಟು ಸುದ್ದಿಗಳು